ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆದು ಆರ್ಥಿಕ ಪ್ರಗತಿ ಸಾಧಿಸಿ: ಉದಯ್ ಕುಮಾರ್

KannadaprabhaNewsNetwork |  
Published : Aug 21, 2025, 01:00 AM IST
20ಕೆಎಂಎನ್ ಡಿ18 | Kannada Prabha

ಸಾರಾಂಶ

ಸ್ತ್ರೀ ಶಕ್ತಿ ಸಂಘಗಳ ಮೂಲಕ ಹಣ ಉಳಿತಾಯ ಮಾಡುವ ಜೊತೆಗೆ ಸೌಲ ಸೌಲಭ್ಯ ಪಡೆದು ಬದುಕನ್ನು ರೂಪಿಸಿಕೊಳ್ಳಬಹುದು. ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆದು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಮೂಲಕ ಅರ್ಥಿಕತೆಯಲ್ಲಿ ಸದೃಢರಾಗಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆದು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಮೂಲಕ ಅರ್ಥಿಕತೆಯಲ್ಲಿ ಸದೃಢರಾಗಬೇಕೆಂದು ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಉದಯ್ ಕುಮಾರ್ ಸಲಹೆ ನೀಡಿದರು.

ಪಟ್ಟಣದ ರೈತ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀ ಶಕ್ತಿ ಸಂಘಗಳ ಮೂಲಕ ಹಣ ಉಳಿತಾಯ ಮಾಡುವ ಜೊತೆಗೆ ಸೌಲ ಸೌಲಭ್ಯ ಪಡೆದು ಬದುಕನ್ನು ರೂಪಿಸಿಕೊಳ್ಳಬಹುದು ಎಂದರು.

ಶೇ.80ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ 23 ಮಕ್ಕಳಿಗೆ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು. ಒಕ್ಕೂಟಕ್ಕೆ ಹೊಸ ನಿರ್ದೇಶಕಿಯರನ್ನು ನೇಮಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಪ್ರೇಮ ನಾಯಗಮ್, ಬ್ಯಾಂಕ್ ಆಫ್ ಬರೋಡಾ ಸ್ವ-ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಪ್ರಸನ್ನ, ತಾಲೂಕು ಆರೋಗ್ಯ ಅಧಿಕಾರಿ ವೀರಭದ್ರಪ್ಪ, ಬ್ಯಾಂಕ್ ಆಫ್ ಬರೋಡಾ ಆರ್ಥಿಕ ಸಾಕ್ಷರತ ನೋಡಲ್ ಅಧಿಕಾರಿ ವಿನೋದ್ ಜೋಷಿ, ಒಕ್ಕೂಟದ ಅಧ್ಯಕ್ಷರು ಸುನಂದಮ್ಮ, ಕಾರ್ಯದರ್ಶಿ ಜಯಲಕ್ಷ್ಮಿ, ಖಜಾಂಚಿ ಜಯಲಕ್ಷ್ಮಿ, ವ್ಯವಸ್ಥಾಪಕ ಶಿವಶಂಕರ ಕೆ.ಆರ್.ಪ್ರಿಯಾಪಟ್ಟಣದ ಎಂ.ಎಂ.ಕೆ ಫೌಂಡೇಶನ್ ವ್ಯವಸ್ಥಾಪಕ ಮಹದೇವ್, ಹಾರೋಹಳ್ಳಿ ಎ.ಎಂ.ಕೆ ಫೌಂಡೇಶನ್ ವ್ಯವಸ್ಥಾಪಕ ಸತೀಶ್ ಸೇರಿದಂತೆ 1000 ವರೆಗೆ ವಿವಿಧ ಗ್ರಾಮಗಳ ಒಕ್ಕೂಟದ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಬಾಲ್ಯವಿವಾಹ ಪ್ರಕರಣ ಕಂಡುಬಂದರೆ ಕಾನೂನು ಕ್ರಮ: ನಂಜಮಣಿ ಎಚ್ಚರಿಕೆ

ಮಳವಳ್ಳಿ: ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಬಾಲ್ಯ ವಿವಾಹಗಳು ಪ್ರಕರಣಗಳು ಕಂಡು ಬಂದರೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಮಣಿ ಎಚ್ಚರಿಸಿದ್ದಾರೆ.

ಇತ್ತೀಚಿಗೆ ತಾಲೂಕಿನ ಗ್ರಾಮವೊಂದರಲ್ಲಿ 17 ವರ್ಷದ ಬಾಲಕಿ ಪ್ರೇಮ ವಿವಾಹವಾಗಿ ಒಂದೂವರೆ ತಿಂಗಳು ಗರ್ಭೀಣಿಯಾಗಿದ್ದು, ಬಾಲಕಿಯು ಆಸ್ಪತ್ರೆಗೆ ಚಿಕಿತ್ಸೆಗಾಗಿ ಮಳವಳ್ಳಿಗೆ ಬಂದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಾಲಕಿಯನ್ನು ವಿವಾಹವಾಗಿದ್ದ ವ್ಯಕ್ತಿ ಮೇಲೆ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಈ ಸಂಬಂಧ ಎಫ್.ಐ.ಆರ್.ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಬಾಲ್ಯ ವಿವಾಹಗಳು ಏರ್ಪಟ್ಟು ಬಾಲ ಗರ್ಭೀಣಿಯರಾಗುತ್ತಿದ್ದಾರೆ. ಬಾಲ್ಯ ವಿವಾಹವಾದಲ್ಲಿ ಕಾನೂನಿನಡಿಯಲ್ಲಿ ಬಾಲ್ಯ ವಿವಾಹ ಮಾಡಿದ ಪೋಷಕರ, ಬಾಲ್ಯವಿವಾಹ ಮಾಡಿಸಿದ ಪುರೋಹಿತರ ಹಾಗೂ ಬಾಲ್ಯ ವಿವಾಹ ನಡೆದ ಕಲ್ಯಾಣ ಮಂಟಪದ ಮಾಲೀಕರ ಮೇಲೆ ಬಾಲ್ಯ ವಿವಾಹ ನಿಷೇದ ಕಾಯ್ದೆಯಡಿ ಕಾನೂನು ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಸಹ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಕೈಜೋಡಿಸುವುದರ ಜೊತೆಗೆ ಅರಿವು ಹೊಂದಬೇಕು ಎಂದು ಮನವಿ ಮಾಡಿದ್ದಾರೆ.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ