ಡಿ.ದೇವರಾಜ ಅರಸು ಜನಪರ ಕೊಡುಗೆಗಳು ಮಾದರಿ: ಪರಶುರಾಮ್ ಸತ್ತಿಗೇರಿ

KannadaprabhaNewsNetwork |  
Published : Aug 21, 2025, 01:00 AM IST
20ಕೆಎಂಎನ್ ಡಿ15 | Kannada Prabha

ಸಾರಾಂಶ

ಉಳುವವನೇ ಭೂ ಒಡೆಯ ಈ ಕಾಯ್ದೆ ಲಕ್ಷಾಂತರ ಜನರಿಗೆ ಭೂ ಒಡೆತನದ ಹಕ್ಕನ್ನು ನೀಡಿತು. ಅರಸು ಅವರು ಸರ್ವ ಜನಾಂಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾನೂನುಗಳನ್ನು ಜಾರಿಗೊಳಿಸಿದ ಪರಿಣಾಮ ಅವರನ್ನು ಸದಾ ನೆನೆಯುವಂತಾಗಿದೆ.

ಕನ್ನಡಪ್ರಭವಾರ್ತೆ ಮದ್ದೂರು

ಉಳುವವನೇ ಭೂ ಒಡೆಯ ಎಂಬ ಯೋಜನೆ ಜಾರಿಗೆ ತಂದು ರಾಜ್ಯದ 21 ಲಕ್ಷ ಎಕರೆ ಭೂಮಿಯನ್ನು ನಿರ್ಗತಿಕರಿಗೆ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದ ಡಿ.ದೇವರಾಜ ಅರಸು ಜನಪರ ಕೊಡುಗೆಗಳು ಮಾದರಿಯಾಗಿವೆ ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಬುಧವಾರ ಹೇಳಿದರು.

ಪಟ್ಟಣದ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಮಾಜಿ ಸಿಎಂ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಉಳುವವನೇ ಭೂ ಒಡೆಯ ಈ ಕಾಯ್ದೆ ಲಕ್ಷಾಂತರ ಜನರಿಗೆ ಭೂ ಒಡೆತನದ ಹಕ್ಕನ್ನು ನೀಡಿತು. ಅರಸು ಅವರು ಸರ್ವ ಜನಾಂಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾನೂನುಗಳನ್ನು ಜಾರಿಗೊಳಿಸಿದ ಪರಿಣಾಮ ಅವರನ್ನು ಸದಾ ನೆನೆಯುವಂತಾಗಿದೆ ಎಂದರು.

ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆಯನ್ನು ತಂದು ಕೊಟ್ಟು ಅರಸು ಜೀತ ಪದ್ಧತಿ, ಮಲ ಹೊರುವ ಪದ್ಧತಿ ನಿರ್ಮೂಲನೆಯ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದರು ಎಂದರು.

ಭಾರತೀ ಕಾಲೇಜು ನಿವೃತ್ತ ಪ್ರಾಧ್ಯಾಪಕ ಬಿ.ಎಸ್. ಬೋರೆಗೌಡ ಅರಸು ಕುರಿತು ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ಎಂ.ಸುನೀತಾ ಗುಳ್ಳಪ್ಪನವರ್ , ಕಾವೇರಿ ನೀರಾವರಿ ನಿಗಮದ ಎಇಇ ನಾಗರಾಜ್, ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಮ್ಮೇಗೌಡ, ಅಹಿಂದ ಮುಖಂಡ ನಿಂಗಯ್ಯ, ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ತಾಪಂ ಲೆಕ್ಕ ಪರಿಶೋಧಕ ಗಂಗಾಧರ್, ರೇಷ್ಮೆ ಇಲಾಖೆ ಅಧಿಕಾರಿ ಭಾಸ್ಕರ್, ಮೇಲ್ವಿಚಾರಕರಾದ ಅಶೋಕ್ , ಶಿವರಾಜು, ಸುನೀಲ್ ಕುಮಾರ್ , ಧರಿಯಪ್ಪ ಎಸ್.ಮೂಗನೂರ, ಟಿ.ರವಿ, ಜಿಎಂ ನಾಗೇಶ್, ಹೇಮಾವತಿ, ಅರ್ಚನ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ
ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ