ಶೇ. 90ರಷ್ಟು ಎಸ್‌ಐಆರ್‌ ಪ್ರಗತಿ ಸಾಧಿಸಿ

KannadaprabhaNewsNetwork |  
Published : Jun 11, 2026, 12:45 AM IST
9ಕೆಜಿಎಫ್‌1 | Kannada Prabha

ಸಾರಾಂಶ

ನಗರಸಬೆ ವ್ಯಾಪ್ತಿಯ ೩೫ ವಾರ್ಡ್ಗಳಲ್ಲಿ ಶೇ.೮೦ ರಷ್ಟು ಮಾತ್ರ ಮತದಾರರ ಪಟ್ಟಿಯು ಪ್ರಗತಿಯಾಗಿದ್ದು, ತಪ್ಪಿಹೋಗಿರುವ ಮತದಾರರನ್ನು ಒಂದು ವಾರದೊಳಗೆ ಶೇ.೯೦ ರಷ್ಟು ಮ್ಯಾಪಿಂಗ್ ಮಾಡಿ ಪ್ರಗತಿಯನ್ನು ಸಾಧಿಸಬೇಕು.

ಕೆಜಿಎಫ್:ಭಾರತೀಯ ಚುನಾವಣಾ ಆಯೋಗವು ಎಸ್‌ಐಆರ್ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಮರುಪರಿಶೀಲನೆ ಮಾಡಿ ಅರ್ಹರನ್ನು ಜು. ೧೫ರೊಳಗೆ ಪಟ್ಟಿಗೆ ಸೇರಿಸಿ ಶೇ. ೯೦ರಷ್ಟು ಪ್ರಗತಿಯನ್ನು ಸಾಧಿಸಬೇಕೆಂದು ಪೌರಾಯುಕ್ತ ಶ್ರೀಧರ್ ತಿಳಿಸಿದರು.ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆಯನ್ನು ಕಂದಾಯ ಇಲಾಖೆ, ನಗರಸಭೆ ಅಧಿಕಾರಿಗಳು, ಸಿಡಿಪಿಒ, ಬಿಇಒ ನಗರಸಭೆ ಸಂಭಾಗಣದಲ್ಲಿ ಹಮ್ಮಿಕೊಂಡಿದ್ದ ಬೂತ್‌ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು , ನಗರಸಬೆ ವ್ಯಾಪ್ತಿಯ ೩೫ ವಾರ್ಡ್ಗಳಲ್ಲಿ ಶೇ.೮೦ ರಷ್ಟು ಮಾತ್ರ ಮತದಾರರ ಪಟ್ಟಿಯು ಪ್ರಗತಿಯಾಗಿದ್ದು, ತಪ್ಪಿಹೋಗಿರುವ ಮತದಾರರನ್ನು ಒಂದು ವಾರದೊಳಗೆ ಶೇ.೯೦ ರಷ್ಟು ಮ್ಯಾಪಿಂಗ್ ಮಾಡಿ ಪ್ರಗತಿಯನ್ನು ಸಾಧಿಸಬೇಕೆಂದು ಬಿಎಲ್‌ಒಗಳಿಗೆ ಪೌರಾಯುಕ್ತರು ಸೂಚನೆ ನೀಡಿದರು.ಹಲವು ಶಿಕ್ಷಕರು ಸಭೆಯಲ್ಲಿ ಮಾತನಾಡಿ, ನಾವು ಎಷ್ಟೇ ಹುಡಿಕಿದರೂ ಮತದಾರರ ವಿಳಾಸ ತಿಳಿಯುತ್ತಿಲ್ಲ, ಹಲವು ಮತದಾರರು ತಮಿಳುನಾಡು ಮತ್ತು ಹೊರರಾಜ್ಯಗಳಲ್ಲಿರುವ ಮಾಹಿತಿಯನ್ನು ನೀಡುತ್ತಾರೆ, ಹಲವರಿಗೆ ಮೊಬೈಲ್ ಮುಖಾಂತರ ಸಂಪರ್ಕಸಿದರೂ ಮತದಾರರ ಪಟ್ಟಿಯ ದಾಖಲೆಯನ್ನು ನೀಡುತ್ತಿಲ್ಲ, ಇನ್ನೂ ಭಾನುವಾರ ಬಹುತೇಕ ಕ್ರೈಸ್ತರು ಚರ್ಚೆಗೆ ಹೋಗುವುದರಿಂದ ಮನೆಯಲ್ಲಿ ಯಾರು ಸಿಗುವುದಿಲ್ಲ ಎಂದು ಬಿಎಲ್‌ಒ ಗಳು ಮತಘಟ್ಟೆ ಅಧಿಕಾರಿಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡರು.ಕಡ್ಡಾಯವಾಗಿ ಶೇ.೯೦ ರಷ್ಟು ಪ್ರಗತಿ ಸಾಧಿಸಿದರೆ ಉತ್ತಮ, ಇಲ್ಲದೆ ಹೋದರೆ ತಪ್ಪಿಹೋಗಿರುವ ಮತದಾರರಿಗೆ ೩ ಬಾರಿ ನೋಟೀಸ್ ಜಾರಿ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣವಾಗಲಿದೆ, ಮೊದಲನೇ ಹಂತದಲ್ಲಿ ಮತದಾರರನ್ನು ಹುಡಕಿ ಮ್ಯಾಪಿಂಗ್ ಮಾಡಿಸಿದರೆ ಮುಂದಿನ ದಾರಿ ಸಲಭವಾಗಲಿದೆ ಎಂದು ಎಸ್.ಐ.ಆರ್ ತಾಲೂಕು ಮಟ್ಟದ ಕಂದಾಯ ಅಧಿಕಾರಿ ಕಿರಣ್ ತಿಳಿಸಿದರು.ಸಭೆಯಲ್ಲಿ ಸಿಡಿಪಿಓ ರಾಜೇಶ್, ಕ್ಷೇತ್ರಶಿಕ್ಷಣಾಧಿಕಾರಿ ನಾರಾಯಣಸ್ವಾಮಿ, ನಗರಸಭೆ ಕಂದಾಯ ಅಧಿಕಾರಿ ಜಯರಾಮ್ ಉಪಸ್ಥಿತರಿದ್ದರು.೯ಕೆಜಿಎಫ್೧ಸಮಗ್ರ ಮತದಾರರ ಪಟ್ಟಿಯನ್ನು ತಯಾರಿಸುವಂತೆ ಅಧಿಕಾರಿಗಳ ಸದಭೆಯಲ್ಲಿ ಬಿಎಲ್‌ಗಳು ಮತ್ತು ಶಿಕ್ಷಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಆಡಳಿತ ಜಗತ್ತಿಗೆ ಮಾದರಿ: ವೀರಣ್ಣ
ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಿ