ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯದ್ದಲ್ಲ: ಶಾಂತಲಿಂಗ ಶ್ರೀಗಳು

KannadaprabhaNewsNetwork |  
Published : May 16, 2025, 01:49 AM IST
(15ಎನ್.ಆರ್.ಡಿ1 ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡುತ್ತಿದ್ದಾರೆ.)  | Kannada Prabha

ಸಾರಾಂಶ

ನರಗುಂದ ತಾಲೂಕಿನ ಶಿರೋಳ ಸಮೀಪದ ಭೋಪಳಪುರ ಗ್ರಾಮದಲ್ಲಿ ಕೆ. ಚಂದರಗಿಯ ಎಸ್.ಎಂ. ಕಲೂತಿ ಕ್ರೀಡಾ ವಸತಿ ಸಿಬಿಎಸ್‌ಸಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 87.76 ಅಂಕ ಪಡೆದ ವಿದ್ಯಾರ್ಥಿ ಚಿನ್ಮಯ ಸಾಲಿಮಠವರನನ್ನು ಭೈರನಹಟ್ಟಿ-ಶಿರೋಳ ಶ್ರೀ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಸನ್ಮಾನಿಸಿದರು.

ನರಗುಂದ: ನಮ್ಮ ಸಮಾಜದಲ್ಲಿ ಒಳ್ಳೆಯ ಪ್ರತಿಭೆ ಇದ್ದ ವಿದ್ಯಾರ್ಥಿಗಳಗೆ ಉತ್ತಮ ಗೌರವವಿದೆ. ಆದ್ದರಿಂದ ಸಾಧನೆ ಯಾರ ಸ್ವತ್ತೂ ಅಲ್ಲ, ನೀವು ಕಷ್ಟಪಟ್ಟ ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಭೈರನಹಟ್ಟಿ-ಶಿರೋಳ ಶ್ರೀ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ಅವರು ತಾಲೂಕಿನ ಶಿರೋಳ ಸಮೀಪದ ಭೋಪಳಪುರ ಗ್ರಾಮದಲ್ಲಿ ಕೆ. ಚಂದರಗಿಯ ಎಸ್.ಎಂ. ಕಲೂತಿ ಕ್ರೀಡಾ ವಸತಿ ಸಿಬಿಎಸ್‌ಸಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 87.76 ಅಂಕ ಪಡೆದ ವಿದ್ಯಾರ್ಥಿ ಚಿನ್ಮಯ ಸಾಲಿಮಠವರ ಸನ್ಮಾನಿಸಿ ಮಾತನಾಡಿದರು. ಪ್ರತಿಭೆಗಳಿಗೆ ದೊಡ್ಡ ಬೆಲೆ ಇದೆ. ಸ್ವತಃ ಪ್ರತಿಭೆಯಿಂದ ಗುರುತಿಸಿಕೊಂಡ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌, ಸರ್ ಸಿದ್ದಪ್ಪ ಕಂಬಳಿ ಅವರು ಇಂದಿನ ಪೀಳಿಗೆಗೆ ಮಾದರಿ ಎಂದರು.

ದವಸ-ಧಾನ್ಯ ಕೊರತೆಯಾದರೆ ವಿದೇಶದಿಂದ ತರಬಹುದು. ವಿದ್ಯಾವಂತರ ಕೊರತೆಯಾದರೆ ತರಲು ಸಾಧ್ಯವಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮಕ್ಕೆ ಬೆಲೆ ಇದೆ. ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯದ್ದಲ್ಲ. ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ, ಚಿಕ್ಕ ವಯಸ್ಸಿನಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಭವ್ಯ ಭಾರತದ ಭವಿಷ್ಯ ನಿರ್ಧರಿಸಬಹುದು ಎಂದರು.

ಪ್ರಾಚಾರ್ಯ ಬಿ.ಆರ್. ಸಾಲಿಮಠ, ವೆಂಕಟೇಶ ಕಡಪಟ್ಟಿ, ಮಹಾಂತೇಶ ಬೆಳ್ಳಿ, ನಿಜಲಿಂಗಪ್ಪ ಸಣ್ಣಕ್ಕಿ, ಮೋಹನ ಪಾಗಿ, ವೀರಯ್ಯ ಸಾಲಿಮಠ, ಸುಶೀಲಾ ಸಾಲಿಮಠ, ಪುನೀತಪ್ಪ ಸಾಂಬ್ರಾಣಿ ಲಿಂಗಬಸಪ್ಪಣ್ಣವರ, ಲಿಂಗಬಸಯ್ಯ ಸಾಲಿಮಠ, ಮಲಕಾಜಪ್ಪ ಹೊಂಬಳ, ಗುರಸಿದ್ದಪ್ಪ ಸಣ್ಣಕ್ಕಿ, ಚನ್ನಯ್ಯ ಸಾಲಿಮಠ, ಪ್ರಭು ಸಣ್ಣಕ್ಕಿ, ಗ್ರಾಪಂ ಸದಸ್ಯರಾದ ವಿಜಯಲಕ್ಷೀ ಸಾಲೀಮಠ, ಶರಣಪ್ಪ ಜೋಗಿ, ಚಂದ್ರಶೇಖರ ಹೂಗಾರ, ಸದಾಶಿವಪ್ಪ ಸಣ್ಣಕ್ಕಿ, ವಿನೋದ ಹೊಂಬಳ, ಬಸವರಾಜ ಹಾವನ್ನವರ, ನಿಂಗಬಸಪ್ಪ ಮಾಸರಡ್ಡಿ, ಸಂಗನಗೌಡ ಪಾಟೀಲ, ಬಸವರಾಜ ಸಣ್ಣಕ್ಕಿ, ಬಸವ್ವ ಚರಂತಿಮಠ, ಕಸ್ತೂರಿ ಚರಂತಿಮಠ, ಗುರುಸಿದ್ದವ್ವ ಸಣ್ಣಕ್ಕಿ, ಸಂಗೀತಾ ಸಾಲಿಮಠ, ನೀಲವ್ವ ಸಾಲಿಮಠ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ