- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಮತ । ಬಿಐಇಟಿ ಕಾಲೇಜಿನಲ್ಲಿ ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್ ನಾಟಕ - - -
ವಿಜ್ಞಾನ, ಪರಿಸರ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಅರಿಯುವ ಕುತೂಹಲ ಇದ್ದಾಗ ಮಾತ್ರ ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಲು, ಸಾಧಕರಾಗಲು ಸಾಧ್ಯ ಎಂಬುದಕ್ಕೆ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಉತ್ತಮ ನಿದರ್ಶನವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಬಾಪೂಜಿ ವಿದ್ಯಾಸಂಸ್ಥೆ, ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾನಿಲಯದ ಪ್ರದರ್ಶಕ ಕಲೆಗಳ ವಿಭಾಗದಿಂದ ದಾವಣಗೆರೆ ಅನ್ವೇಷಕರು ಆರ್ಟ್ ಫೌಂಡೇಷನ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಕ್ಕಳಲ್ಲಿ ವಿಜ್ಞಾನ, ಪರಿಸರ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಕುತೂಹಲ ಬೆಳೆಸಬೇಕಾಗ ತುರ್ತು ಅವಶ್ಯಕತೆ ಇದೆ. ಅಧ್ಯಾತ್ಮಕ್ಕೂ, ವಿಜ್ಞಾನಕ್ಕೂ ಒಂದು ನಂಟಿದೆ. ಇದು ಐನ್ ಸ್ಟೈನ್‌ರಲ್ಲಿ ಬಾಲ್ಯದಲ್ಲೇ ಮೊಳಕೆಯೊಡೆದಿತ್ತು. ವಿದ್ಯಾರ್ಥಿಗಳಿಗೆ ಐನ್‌ಸ್ಟೈನ್ ಮಾದರಿಯಾಗಬೇಕು. ಸಾಧನೆ ವೇಳೆ ಯಾವುದೇ ಕಾರಣಕ್ಕೂ ತಲುಪಬೇಕಾದ ಗುರಿ ಕೈಬಿಡಬಾರದು. ಆಗ ಮಾತ್ರವೇ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಹೇಳಿದರು.
ಬೆಂಗಳೂರು ವಿ.ವಿ. ವಿಶ್ರಾಂತ ಕುಲಪತಿ, ಪರಮಾಣು ವಿಜ್ಞಾನಿ, ನಾಟಕ ರಚನೆಕಾರ ಡಾ. ಕೆ.ಸಿದ್ದಪ್ಪ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ವಿಷಯಗಳಲ್ಲಿ ಆಸಕ್ತಿ ಮೂಡಿ, ಸಾಧನೆ ಮಾಡಲು ಪ್ರೇರಣೆ ಸಿಕ್ಕಂತಾಗುತ್ತದೆ. ಇದು ಆದರ್ಶ ಶಿಕ್ಷಕರಾಗಲು ಇರುವಂತಹ ಮಾರ್ಗವಾಗಿದೆ ಎಂದರು.
- - -
- - -
ದಾವಣಗೆರೆಯಲ್ಲಿ ಶನಿವಾರ ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್ ನಾಟಕ ಪ್ರದರ್ಶನವನ್ನು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಡಾ. ಕೆ.ಸಿದ್ದಪ್ಪ, ಡಾ. ಎಚ್.ಬಿ.ಅರವಿಂದ, ಪ್ರೊ. ವೈ.ವೃಷಭೇಂದ್ರಪ್ಪ ಇತರರು ಇದ್ದರು. -25ಕೆಡಿವಿಜಿ8, 9, 10.ಜೆಪಿಜಿ: