ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಧರ್ಮಪುರ ಗ್ರಾಮದ ಶ್ರೀ ಪಂಚಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯ 1982-84ನೇ ಸಾಲಿನ ಹಳೇ ವಿದ್ಯಾರ್ಥಿಗಳ ಒಕ್ಕೂಟ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಗಾಗಿ ಅಂದಿನ ಕೃಷಿ ಸಚಿವರಾದ ಬಿ.ಎಲ್.ಗೌಡ ಪಂಚಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯನ್ನು ಸ್ಥಾಪಿಸಿದ್ದರು. ಅಂದಿನಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಬೇರೆ ಬೇರೆ ಕಡೆ ಉನ್ನತ ಸ್ಥಾನದಲ್ಲಿರುವುದು ನಮಗೆ ತುಂಬಾ ಸಂತೋಷವಾಗಿದೆ. ಪ್ರತಿಯೊಬ್ಬರೂ ಏನನ್ನಾದರೂ ಸಾಧಿಸುವ ಹಠ ಇಟ್ಟುಕೊಳ್ಳಬೇಕು. ಆ ಮೂಲಕ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಧುನಿಕತೆಯ ಭರಾಟೆಯಲ್ಲಿ ಸಂಸ್ಕಾರ ಮರೆಯುತ್ತಿರುವ ಈ ಹೊತ್ತಲ್ಲಿ ನಾಲ್ಕು ದಶಕದ ನಂತರವೂ ತಮ್ಮ ಗುರುಗಳನ್ನು ನೆನೆದ ವಿದ್ಯಾರ್ಥಿಗಳು ಅಂದು ಎಂತಹ ಗುಣಮಟ್ಟದ ವಿದ್ಯಾಭ್ಯಾಸ, ಸನ್ನಡತೆ ಕಲಿತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.ನಿವೃತ್ತ ಹಿಂದಿ ಶಿಕ್ಷಕ ಕೆ.ಕೃಷ್ಣಪ್ಪ ಮಾತನಾಡಿ, ಪ್ರೌಢ ಶಿಕ್ಷಣ ಮುಗಿದ 42 ವರ್ಷಗಳ ನಂತರ ಸ್ನೇಹಿತರು ಒಗ್ಗೂಡಿ ಗುರುವರ್ಯರನ್ನು ನೆನೆದು ಗೌರವ ಸಮರ್ಪಣೆ ನೀಡುತ್ತಿರುವುದು ತುಂಬಾ ಸಂತೋಷವಾಗಿದ್ದು ಇದು ಹಳೇ ವಿದ್ಯಾರ್ಥಿಗಳ ಉತ್ತಮ ಸಂಸ್ಕಾರವನ್ನು ತೋರಿಸುತ್ತದೆ ಎಂದರು.
ನಿವೃತ್ತ ಶಿಕ್ಷಕರನ್ನು ಬೆಳ್ಳಿ ರಥದ ಮೂಲಕ ಧರ್ಮಪುರದ ಶನೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ವೇದಿಕೆಯವರೆಗೂ ವೀರಗಾಸೆ ತಂಡದವರ ನೃತ್ಯದ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು. ನಿವೃತ್ತ ಶಿಕ್ಷಕರಾದ ಜೆ.ಸಿದ್ದೇಶ್ವರ, ಕೆ.ಪಾಂಡುರಂಗಪ್ಪ, ಧರ್ಮಪುರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ರಾಜಕುಮಾರ್, ನರೇಂದ್ರಪ್ಪ, ಕೃಷ್ಣ, ಗಂಗಮ್ಮ, ಮುಖ್ಯ ಶಿಕ್ಷಕ ಜೆ.ಮಂಜುನಾಥ್ ತಿಮ್ಮಣ್ಣ, ಸಿದ್ದಪ್ಪ, ತಿಪ್ಪೇಸ್ವಾಮಿ, ಶೈಲಜ, ಪುಟ್ಟೀರಮ್ಮರನ್ನು ಸನ್ಮಾನಿಸಲಾಯಿತು.ಈ ವೇಳೆ ಪ್ರೊ.ವಿ.ವೀರಣ್ಣ, ಪ್ರೊ.ಎಂ.ಪ್ರಸನ್ನ ಕುಮಾರ್, ಪ್ರೊ.ಎಂ.ಪಿ.ಭೀಮರಾಜ್, ಡಾ.ಕೆ.ಜೆ.ತಿಮ್ಮರಾಜು, ಸಹಾಯಕ ನಿರ್ದೇಶಕ ಎಂ.ಪ್ರಸನ್ನಕುಮಾರ್, ಜಿ.ಶಿವಪ್ರಸಾದಗೌಡ, ಎಚ್.ಎಂ.ಅಪ್ಪಾಜಿಗೌಡ, ಎಚ್.ಆರ್,ರಾಮಚಂದ್ರ, ಕೆ.ಸುಧಾ, ಮಂಗಳಗೌರಿ, ರಾಜೀವ, ಕೇಶವಮೂರ್ತಿ, ತಿಪ್ಪೇಸ್ವಾಮಿ, ವೆಂಕಟಾಚಲ, ಶಶಿಕಲಾ, ಹೇಮಲತಾ,ಪುಟ್ಟರಂಗ, ಈರಮಲ್ಲ, ರಾಜನ್, ಗರೀಬ್ ವಾಲಿ ಮುಂತಾದವರು ಉಪಸ್ಥಿತರಿದ್ದರು.