ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ 40ನೇ ರಾಜ್ಯರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಮತ್ತು ಆಯ್ಕೆ ಟ್ರಯಲ್ಸ್ 2024ನ್ನು ಆಯೋಜಿಸಲಾಯಿತು. ಈ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್‌ನ ಸ್ಕೇಟರ್‌ಗಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ 40ನೇ ರಾಜ್ಯರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಮತ್ತು ಆಯ್ಕೆ ಟ್ರಯಲ್ಸ್ 2024ನ್ನು ಆಯೋಜಿಸಲಾಯಿತು. ಈ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್‌ನ ಸ್ಕೇಟರ್‌ಗಳು ಭಾಗವಹಿಸಿದ್ದರು. ನ.7ರಿಂದ 11ರವರೆಗೆ ಮೈಸೂರು, ಬೆಂಗಳೂರು ಮತ್ತು ತುಮಕೂರಿನಲ್ಲಿ ಆಯೋಜಿಸಿದ್ದ ಚಾಂಪಿಯನ್‌ಶಿಪ್‌ನಲ್ಲಿ ಬೆಳಗಾವಿ ಸ್ಕೇಟರ್‌ಗಳು 22 ಚಿನ್ನ, 10 ಬೆಳ್ಳಿ, 20 ಕಂಚು ಪದಕ ಗೆದ್ದಿದ್ದಾರೆ. ಒಟ್ಟು 15 ಜಿಲ್ಲೆಗಳ 800ಕ್ಕೂ ಹೆಚ್ಚು ಸ್ಕೇಟರ್‌ಗಳು ಸ್ಪರ್ಧಿಸಿದ್ದರು.
ಕಲಾತ್ಮಕ ಸ್ಕೇಟರ್: ಖುಷಿ ಅಗಶಿಮನಿ-1 ಚಿನ್ನ, 1 ಕಂಚು.ಈ ಎಲ್ಲಾ ಸ್ಕೇಟರ್ಸ್‌ಗಳು ಕೆಎಲ್‌ಇ ಸ್ಕೇಟಿಂಗ್ ರಿಂಕ್ ಮತ್ತು ಗುಡ್ ಶೆಪರ್ಡ್ ಸ್ಕೇಟಿಂಗ್ ರಿಂಕ್, ಶಿವಗಂಗಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕೋಚ್ ಸೂರ್ಯಕಾಂತ್ ಹಿಂಡಲಗೇಕರ, ಯೋಗೇಶ ಕುಲಕರ್ಣಿ, ವಿಶಾಲ ವೇಶನೇ, ಮಂಜುನಾಥ ಮಂಡೋಲ್ಕರ್, ವಿತ್ತಲ ಗಗನೇ, ಅನುಷ್ಕಾ ಶಂಕರಗೌಡ ಮತ್ತು ವಿಶ್ವನಾಥ್ ಯಳ್ಳೂರಕರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಡಾ.ಪ್ರಭಾಕರ ಕೋರೆ, ಮಾಜಿ ಶಾಸಕರಾದ ಶಾಮ್ ಘಾಟಗೆ, ರಾಜ್ ಘಾಟಗೆ, ಉಮೇಶ ಕಲಘಟಗಿ, ಪ್ರಸಾದ ತೆಂಡೋಲ್ಕರ ಮತ್ತು ಇಂದುಧರ ಸೀತಾರಮ (ಸಾಮಾನ್ಯ ಕಾರ್ಯದರ್ಶಿ, ಕೆಆರ್‌ಎಸ್‌ಎ) ಪ್ರೋತ್ಸಾಹ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.