ಪ್ರತಿಭಾ ಕಾರಂಜಿಯಲ್ಲಿ ಕುಪ್ಪರವಳ್ಳಿ ಶಾಲಾ ಮಕ್ಕಳ ಸಾಧನೆ

KannadaprabhaNewsNetwork |  
Published : Dec 03, 2025, 01:04 AM IST
52 | Kannada Prabha

ಸಾರಾಂಶ

ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಆತಿಥೇಯ ಕುಪ್ಪರವಳ್ಳಿ ಶಾಲೆಯ ಮಕ್ಕಳು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು. ಜಾನಪದ ನೃತ್ಯದಲ್ಲಿ ಒಂಬತ್ತನೇ ತರಗತಿಯ ನಮಿತ, ಸಂಗೀತ, ಸಿ. ಪುಷ್ಪ, ಶೈಲಜ, ಭಾವನಾ ಮತ್ತು ಶ್ರೇಯ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಶಾಲೆಯಲ್ಲಿ ನಡೆದ ಬಿಳಿಗೆರೆ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯನ್ನು ಸಸಿಗೆ ನೀರೆರೆಯುವ ಮೂಲಕ ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಹಾಗೂ ಎಸ್.ಡಿಎಂಸಿ ಅಧ್ಯಕ್ಷ ಸ್ವಾಮಿ ಉದ್ಘಾಟಿಸಿದರು.ಗ್ರಾಪಂ ಉಪಾಧ್ಯಕ್ಷ ಮಹದೇವ, ಪಿಡಿಒ ಗಣೇಶ್, ಕಾರ್ಯದರ್ಶಿ ಪುಟ್ಟರಾಜು ಶಾಲೆಯ ಮುಖ್ಯಶಿಕ್ಷಕ ಕೆ.ಕೆ. ಪ್ರಕಾಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೀಪು ಹಾಗೂ ಶಿಕ್ಷಣ ಸಂಯೋಜಕ ವೀಣಾ ಇದ್ದರು.ಬಿಳಿಗೆರೆ ಹೋಬಳಿಯ ಏಳು ಪ್ರೌಢಶಾಲೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು 18 ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಆತಿಥೇಯ ಕುಪ್ಪರವಳ್ಳಿ ಶಾಲೆಯ ಮಕ್ಕಳು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು. ಜಾನಪದ ನೃತ್ಯದಲ್ಲಿ ಒಂಬತ್ತನೇ ತರಗತಿಯ ನಮಿತ, ಸಂಗೀತ, ಸಿ. ಪುಷ್ಪ, ಶೈಲಜ, ಭಾವನಾ ಮತ್ತು ಶ್ರೇಯ ಭಾಗವಹಿಸಿದ್ದರು.ಕವನ ವಾಚನದಲ್ಲಿ ಒಂಬತ್ತನೇ ತರಗತಿಯ ಸಿ. ಪುಷ್ಪ, ಕನ್ನಡ ಭಾಷಣದಲ್ಲಿ ಎಂಟನೇ ತರಗತಿಯ ಭಾಗ್ಯಲಕ್ಷ್ಮಿ, ಇಂಗ್ಲಿಷ್‌ ಭಾಷಣದಲ್ಲಿ ಹತ್ತನೇ ತರಗತಿಯ ನಿಸರ್ಗ, ಜಾನಪದ ಗೀತೆಯಲ್ಲಿ ಎಂಟನೇ ತರಗತಿಯ ಕೀರ್ತನ ಪ್ರಥಮ ಬಹುಮಾನ ಪಡೆದರು.ಕವ್ವಾಲಿಯಲ್ಲಿ ಒಂಬತ್ತನೇ ತರಗತಿಯ ಭರತ್, ಸಿದ್ದೇಶ, ಶ್ರಾವಂತ್ ಮತ್ತು ಪ್ರತಾಪ್ ಪ್ರಥಮ ಬಹುಮಾನ ಪಡೆದರು. ಹತ್ತನೇ ತರಗತಿಯ ಎಚ್‌.ಎನ್. ಸಮರ್ಥ್ - ಮಿಮಿಕ್ರಿ, ನಿವೇದಿತಾ ಚರ್ಚಾ ಸ್ಪರ್ಧೆಯಲ್ಲಿ, ತೇಜಸ್ ಕುಮಾರ್ ಮತ್ತು ದೀಪಿಕಾ ರಸಪ್ರಶ್ನೆ, ಹಿಂದಿ ಭಾಷಣದಲ್ಲಿ ದೀಪಿಕಾ ಮತ್ತು ಒಂಬತ್ತನೇ ತರಗತಿಯ ಅಮೃತ ಚಿತ್ರಕಲೆಯಲ್ಲಿ, ಸಂಧ್ಯಾ ಭರತನಾಟ್ಯದಲ್ಲಿ ದ್ವಿತೀಯ ಬಹುಮಾನ ಪಡೆದರು.ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜು ಅವರು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ರಾಷ್ಟ್ರಪ್ರಶಸ್ತಿ ವಿಜೇತರಾದ ನಾಗವಾಲ ಪಿಡಿಒ ಶೋಭಾ ದಿನೇಶ್ ಅವರು ವಿದ್ಯಾರ್ಥಿಗಳಿಗೆ ಬಹುಮಾನದ ಕೊಡುಗೆ ನೀಡಿದ್ದರು. ಶಾಲೆಯ ಹಿರಿಯ ಶಿಕ್ಷಕರಾದ ಡಿ.ಪಿ. ಜಯಣ್ಣ. ಸ್ವಾಗತಿಸಿದರು. ಕನ್ನಡ ಶಿಕ್ಷಕ ಬಿ.ಎಸ್‌. ಪುಟ್ಟಸ್ವಾಮಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಗಾಗಿ ಆಗ್ರಹಿಸಿ ಗೋಕಾಕ ಬಂದ್‌ ಇಂದು
ಒಂದೇ ಸಂಸ್ಥೆಯಿಂದ 50 ಜನ ಅಗ್ನಿವೀರರಾಗಿ ಆಯ್ಕೆ