ಸಂವಿಧಾನದ ಆಶಯದಂತೆ ನಡೆಯುವುದು ಆದ್ಯ ಕರ್ತವ್ಯ: ಭಂಡಾರಿ ಶ್ರೀನಿವಾಸ್

KannadaprabhaNewsNetwork | Published : Jan 28, 2025 12:46 AM

ಸಾರಾಂಶ

ಕಡೂರುಭಾರತದ ಪ್ರತಿಯೊಬ್ಬ ಪ್ರಜೆ ಕಾನೂನಿಗೆ ಗೌರವಿಸುವುದು ಹಾಗೂ ಸಂವಿಧಾನದ ಆಶಯದಂತೆ ನಡೆಯುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪುರಸಭಾ ಕಚೇರಿ ಆವರಣದಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ

ಕನ್ನಡಪ್ರಭ ವಾರ್ತೆ. ಕಡೂರು

ಭಾರತದ ಪ್ರತಿಯೊಬ್ಬ ಪ್ರಜೆ ಕಾನೂನಿಗೆ ಗೌರವಿಸುವುದು ಹಾಗೂ ಸಂವಿಧಾನದ ಆಶಯದಂತೆ ನಡೆಯುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಭಾನುವಾರ ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹರಿದು ಹಂಚಿಹೋಗಿದ್ದ ಭಾರತದ ರಾಜ್ಯಗಳನ್ನು ಒಟ್ಟುಗೂಡಿಸಿ ಪ್ರಜಾಪ್ರಭುತ್ವ ಜಾರಿಗೆ ತಂದು ಸಂವಿಧಾನ ರಚಿಸಿದ ದಿನ ಭಾರತ ಏಕತೆಗೆ ಸಾಕ್ಷಿಯಾದ ದಿನವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಡವರ ಆಶೋತ್ತರಗಳಿಗೆ ಅನುಗುಣವಾಗಿ ನುಡಿದಂತೆ ನಡೆದು ಐದು ಗ್ಯಾರಂಟಿ ಯೋಜನೆಗಳು ಅನುಷ್ಟಾನಗೊಳಿಸಿ ಶ್ರಮಿಕ ವರ್ಗಗಳಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಪಟ್ಟಣದ ಅಭಿವೃದ್ಧಿಗೂ ಮತ್ತು ಸ್ವಚ್ಛತೆ ಕಾಪಾಡಲು ಪುರಸಭೆ ಆಡಳಿತ ಆದ್ಯತೆ ನೀಡಿದೆ. ಪುರಸಭೆಯಲ್ಲಿ ಆಗಬೇಕಾದ ಜನಸಾಮಾನ್ಯರ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಬೇಕೆಂಬ ಆಶಯದೊಂದಿಗೆ ಶೀಘ್ರದಲ್ಲಿಯೇ ದಿನಾಕ ನಿಗಧಿ ಪಡಿಸಿ ಪುರಸಭೆ ಯಿಂದ ‘ನಮ್ಮ ನಡೆ ಸಾರ್ವಜನಿಕರ ಕಡೆ’ ಎಂಬ ಧ್ಯೇಯದೊಂದಿಗೆ ವಾರ್ಡ್‍ ಗಳಲ್ಲಿನ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳ ತಂಡದೊಂದಿಗೆ ತೆರಳಿ ವಾರ್ಡ್‍ನಲ್ಲಿ ಸಭೆಗಳನ್ನು ಆಯೋಜಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದರು.ಬಹುಮುಖ್ಯವಾಗಿ ಸ್ಚಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದಕ್ಕೆ ಪುರಸಭೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಿ ದರೆ ಸುಂದರ ಪಟ್ಟಣವನ್ನಾಗಿಸಲು ಹೆಚ್ಚು ಶ್ರಮವಹಿಸಲು ಸಹಕಾರಿಯಾಗಲಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ಅನುಷ್ಟಾನಗೊಂಡಿರುವ ಸ್ವಚ್ಚಭಾರತ್ ಅಭಿಯಾನದಡಿ ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ಸಂಗ್ರಹಿಸಲು ವಾರ್ಡ್‍ನಲ್ಲಿನ ಪ್ರತಿ ಮನೆಗಳಿಗೆ ಪುರಸಭೆಯಿಂದ 2 ಕಸದ ಬುಟ್ಟಿಗಳನ್ನು ನೀಡ ಲಾಗುತ್ತಿದೆ. ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡಿ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿಪಿಸಿ ಕಾಲೋನಿ ನಿವಾಸಿಗರಿಗೆ ಸಾಂಕೇತಿಕವಾಗಿ ಹಸಿಕಸ, ಒಣಕಸ ಸಂಗ್ರಹಣೆ ಬುಟ್ಟಿಗಳ ವಿತರಣೆಗೆ ಚಾಲನೆ ನೀಡಲಾಯಿತು. ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಸೈಯಾದ್ ಯಾಸೀನ್, ಮರು ಗುದ್ದಿಮನು, ಮೋಹನ್, ಗೋವಿಂದರಾಜು, ಸುಬ್ಬಣ್ಣ, ಪುಷ್ಪಲತಾ ಮಂಜುನಾಥ್, ಪದ್ಮಾ ಶಂಕರ್, ಸುಧಾಉಮೇಶ್, ಜ್ಯೋತಿ ಆನಂದ್, ಇಕ್ಬಾಲ್, ವಿಜಯಾಚಿನ್ನರಾಜು, ಹಾಲಮ್ಮ, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಪರಿಸರ ಅಭಿಯಂತರ ಶ್ರೇಯಸ್‍ಕುಮಾರ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಮೂರ್ತಿ, ತಿಮ್ಮಯ್ಯ ಹಾಗೂ ಸಿಬ್ಬಂದಿ ಇದ್ದರು.26ಕೆಡಿಯು2

ಕಡೂರು ಪಟ್ಟಣದ ಸಿಪಿಸಿ ಕಾಲೋನಿ ನಿವಾಸಿಗರಿಗೆ ಸ್ವಚ್ಛಭಾರತ್ ಅಭಿಯಾನದಡಿ ಹಸಿ ಮತ್ತು ಒಣಕಸಗಳನ್ನು ಬೇರ್ಪಡಿಸಿ ಸಂಗ್ರಹಿಸಲು ಬುಟ್ಟಿಗಳ ವಿತರಣೆಗೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಚಾಲನೆ ನೀಡಿದರು. ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮರುಗುದ್ದಿ ಮನು, ಗೋವಿಂದು, ಇಕ್ಬಾಲ್, ಸುಧಾಉಮೇಶ್, ಜ್ಯೋತಿ ಆನಂದ್, ವಿಜಯಾ ಚಿನ್ನರಾಜು, ಪುಷ್ಪಾ ಮತ್ತಿತರಿದ್ದರು.

Share this article