ಕನ್ನಡಪ್ರಭ ವಾರ್ತೆ ಕೆಜಿಎಫ್ನಗರಸಭೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಈಗಾಗಲೇ ಪೌರಾಡಳಿತ ನಿರ್ದೇಶಕರು ತನಿಖೆ ಕೈಗೊಳ್ಳಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ತನಿಖೆ ಕೈಗೊಂಡು ಸಂಪೂರ್ಣ ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವುದಾಗಿ ಪೌರಾಡಳಿತ ಸಚಿವರಾದ ರಹೀಂಖಾನ್ ತಿಳಿಸಿದರು.ಕೆಜಿಎಫ್ ನಗರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಹಳೇ ಕಾಮಗಾರಿಗೆ ಹೊಸ ಬಿಲ್ಲು, ನಿಯಮ ಉಲ್ಲಂಘಸಿ ಸೋಡಿಯಂ ಬೀದಿ ದೀಪಗಳ ನಿರ್ವಹಣೆಗೆ ಬಿಲ್ಲು ಪಾವತಿ, ನಗರಸಭೆ ವ್ಯಾಪ್ತಿಯಲ್ಲಿ ಬಯಲು ಶೌಚಾಲಯ ಜೀವಂತ, ಕುಡಿವ ನೀರು, ನಗರಸಭೆ ವ್ಯಾಪ್ತಿಯಲ್ಲಿ ಪಾರ್ಕ್‌ಗಳ ನಿರ್ವಹಣೆ ಇಲ್ಲದಿರುವುದು, ಕಾನೂನು ಉಲ್ಲಂಘಸಿ ಅಕ್ರಮವಾಗಿ 140 ಕಟ್ಟಡಗಳ ಕೆಡವಿಕೆಯ ನಿರುಪಯುಕ್ತ ವಸ್ತುಗಳ ಸಂರಕ್ಷಣೆ ಮಾಡುವಲ್ಲಿ ವಿಫಲಗೊಂಡಿರುವ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್‌ಗೆ ಭೇಟಿ:
ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ರಹೀಂಖಾನ್ ಅವರು ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ಸವಿದು ಅಹಾರವು ಉತ್ತಮ ಗುಣಮಟ್ಟದಿಂದ ಕೂಡಿರುವುದಾಗಿ ತಿಳಿಸಿ, ಇಂದಿರಾ ಕ್ಯಾಂಟೀನ್‌ನಲ್ಲಿ ಉತ್ತಮವಾಗಿ ಸ್ವಚ್ಛತೆ ಇರುವುದಾಗಿ ತಿಳಿಸಿದರುಅಲ್ಪಸಂಖ್ಯಾತರ ಸಭೆ:ನಗರದ ಹುಲ್ಲು ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಕಳೆದುಕೊಂಡಿದ್ದವರಿಗೆ ಒಂದು ವರ್ಷದೊಳಗೆ ಮಳಿಗೆಗಳನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಅಂಗಡಿ ಕಳೆದಕೊಂಡು ಅಲ್ಪಸಂಖ್ಯಾತರಿಗೆ ಅದ್ಯತೆ ಮೇರೆಗೆ ನಿಯಮಾನುಸಾರ ಅಂಗಡಿಗಳನ್ನು ನೀಡುವುದಾಗಿ ಭರವಸೆ ನೀಡಿದರು.ಪ್ರಶ್ನೆಗಳಿಗೆ ತಬ್ಬಿಬ್ಬು:ಇಡೀ ದೇಶದಲ್ಲಿ ಎಲ್ಲಿಯಾದರೂ ಬಯಲು ಶೌಚ ಜೀವಂತವಾಗಿ ಇದೇ ಅಂದರೆ ಅದು ಕೆಜಿಎಫ್ ನಗರದಲ್ಲಿ ಮಾತ್ರ, ಈಗಲೂ ಸಹ ಹೆಣ್ಣು ಮಕ್ಕಳು ಬಯಲು ಶೌಚವನ್ನು ಅವಲಂಬಿಸಿದ್ದಾರೆಂದು ಸಚಿವರನ್ನು ಪ್ರಶ್ನಿಸಿದರು, ಪ್ರಶ್ನೆಗೆ ಸಚಿವರು ಮತ್ತು ಶಾಸಕರ ಉತ್ತರ ನೀಡಲು ತಡಬಡಾಯಿಸಿದರು.ಕೆಜಿಎಫ್ ನಗರದಲ್ಲಿ ಕೈಗೊಂಡಿದ್ದ ಅಮೃತ್ ಸಿಟಿ ಯೋಜನೆಯಡಿ 68 ಕೋಟಿ ರುಪಾಯಿಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಂಡು 6 ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಜಿಎಫ್ ಜನರಿಗೆ ಕುಡಿವ ನೀರು ಇಲ್ಲ, ಬ್ರಿಟಿಷರ ಕಾಲದಲ್ಲಿ ಅಳವಡಿಸಿದ್ದ ಕುಡಿವ ನೀರಿನ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಪರ್ತಕರ್ತರ ಕೇಳಿದ ಪ್ರಶ್ನೆಗೆ ಶಾಸಕರ ಬಳಿ ಉತ್ತರವಿರಲಿಲ್ಲ.ಉದ್ಯಾನಗಳ ನಿರ್ವಹಣೆ ವಿಫಲ:ನಗರದ 35 ವಾರ್ಡ್‌ಗಳಲ್ಲಿ ಕ್ಯೋಟ್ಯಂತರ ರುಪಾಯಿಗಳ ಖರ್ಚು ಮಾಡಿ ಉದ್ಯಾನವನಗಳನ್ನು ನಿರ್ಮಾಣ ಮಾಡಿದ್ದು, ಉದ್ಯಾನವನಗಳ ನಿರ್ವಹಣೆ ಇಲ್ಲವೆಂದು ಸಚಿವರನ್ನು ಪ್ರಶ್ನೆ ಮಾಡಿದಾಗ, ಕೂಡಲೇ ಉದ್ಯಾನವನಗಳ ಸ್ಥಿತಿಗತಿಗಳ ಕುರಿತು ವರದಿ ನೀಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.ಶಾಸಕಿ ರೂಪಕಲಾ ಶಶಿಧರ್, ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ, ಚೀಪ್ ಇಂಜಿನಿಯರ್ ಬಸವರಾಜು, ಜಂಟಿ ನಿರ್ದೇಶಕರು ಅಭಿವೃದ್ಧಿ ಕೃಷ್ಣಮೂರ್ತಿ, ಜಿಲ್ಲಾ ಯೋಜನಾ ನಿರ್ದೇಶಕಿ ಅಂಬಿಕಾ, ಸಚಿವರ ಅಪ್ತ ಕಾರ್ಯದರ್ಶಿ ಡಾ.ಮುರಳಿಧೀರ್, ಇಇ ಶ್ರೀನಿವಾಸ್, ಕೋಲಾರ ಪೌರಾಯುಕ್ತ ನವೀನ್‌ಚಂದ್ರ, ಮುಳಬಾಗಿಲು ಅಂಜಿನೇಯಲು, ಮಾಲೂರು ಮಹದೇವ್, ಶ್ರೀನಿವಾಸಪುರ ನಾಗರಾಜ್, ಬಂಗಾರಪೇಟೆ ಸತ್ಯನಾರಯಣ, ವೆಮಗಲ್ ವೆಂಕಟೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.೯ಕೆಜಿಎಫ್೧ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಹೀಂಖಾನ್ ಹಾಗೂ ಅಧಿಕಾರಿಗಳು.೯ಕೆಜಿಎಫ್೨ಅಲ್ಪಸಂಖ್ಯಾತರ ಸಭೆ ನಡೆಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಹಾಗೂ ಸಚಿವ ರಹೀಂಖಾನ್.