)
- ಬಸವಣ್ಣನವರ ಜೊತೆ ಆಡಿ ಬೆಳೆದವರೆಂದು ತಿಳಿದಿದ್ದೀರಾ? । ಇಂದು ನಾನಿಲ್ಲಿ ಕುಳಿತಿದ್ದೇನೆಂದ್ರೆ ಅದು ಬಸವಣ್ಣನವರ ಪ್ರಸಾದ: ಮುಜರಾಯಿ ಸಚಿವ
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿವಾದಿತ ಲೇಖಕ ರವಿ ಹಂಜ್ ಬೆಂಬಲಿಸಿದವರ ವಿರುದ್ಧವೂ ಕ್ರಮ ಆಗಲಿದ್ದು, ಬಸವಣ್ಣನವರ ಬಗ್ಗೆ ಅಧ್ಯಯನವೆಂದರೆ ಬಸವಣ್ಣನ ಜೊತೆಗೆ ಆಡಿ ಬೆಳೆದವರು ಅಂತಾ ತಿಳಿದಿದ್ದಾರಾ? ಇಂತಹ ಮಾತುಗಳಿಗೆ ಏನಾದರೂ ಅರ್ಥವಿದೆಯಾ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದಾವಣಗೆರೆ ತಾ. ಅಣಜಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನ್ ಮಾನವತಾವಾದಿ ಬಸವಣ್ಣನ ಬಗ್ಗೆ ಇಂದು ಮಾತನಾಡುತ್ತಾರೆ. ನಾಳೆ ಡಾ. ಬಿ.ಆರ್. ಅಂಬೇಡ್ಕರ್, ದಾಸಶ್ರೇಷ್ಠ ಕನಕದಾಸ, ಮಹರ್ಷಿ ವಾಲ್ಮೀಕಿಯಂಥ ಮಹಾನ್ ವ್ಯಕ್ತಿಗಳ ಬಗ್ಗೆಯೂ ಹೇಳುತ್ತಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದರು.
ರವಿ ಹಂಜ್ ಬರೆದ ಬಸವ ಮಂಟಪ ಪುಸ್ತಕ ಹಾಗೂ ಆ ವ್ಯಕ್ತಿಯ ಹೇಳಿಕೆಗಳು ದೊಡ್ಡ ಆಘಾತ ತಂದಿವೆ. ಬಸವಣ್ಣನವರು ವಿಶ್ವಮಾನವ. ನಮ್ಮ ಸರ್ಕಾರ ಸಹ ಬಸವಣ್ಣ ಅವರನ್ನು ನಾಡಿನ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದೆ. ಬಸವಣ್ಣ ಕೇವಲ ಒಂದು ಜಾತಿ, ಸಮುದಾಯ, ಧರ್ಮಕ್ಕೆ ಸೇರಿದವರಲ್ಲ. ಇಡೀ ಮಾನವ ಸಮುದಾಯಕ್ಕೆ ಸೇರಿದವರು. ಬಸವಣ್ಣನವರು ಕೊಟ್ಟಂತಹ ವಚನ ಸಾಹಿತ್ಯದಿಂದಲೇ ಸಮಾಜ ಮೇಲೆ ಬಂದಿದೆ ಎಂದು ಅವರು ತಿಳಿಸಿದರು.
- - -