ಪ್ರಜಾಸೇವಾ ಆಂದೋಲನ ಪ್ರಾರಂಭವಾದ ನಂತರ ರಾಜ್ಯದೆಲ್ಲೆಡೆ ಯಶಸ್ವಿಯಾಗಿದೆ.
ಕೊಟ್ಟೂರು: ರಾಜ್ಯದ ಪ್ರತಿ ಜನರ ಸಮಸ್ಯೆ ಅರಿತು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ಸಿಎಂ ಡಿ.ಕೆ.ಶಿವಕುಮಾರ ಅವರ ಮಹತ್ತರ ಯೋಜನೆ ಪ್ರಜಾಸೇವಾ ಆಂದೋಲನದ ಬಗ್ಗೆ ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ ಎನ್.ಟಿ ಹೇಳಿದರು.
ತಾಲೂಕಿನ ಕೂಡ್ಲಿಗಿ ಕ್ಷೇತ್ರ ವ್ಯಾಪ್ತಿಯ ಉಜ್ಜಯಿನಿ ಗ್ರಾಮದಲ್ಲಿ ಶನಿವಾರ ತಾಲೂಕಾಡಳಿತ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಜಾಸೇವಾ ಆಂದೋಲನ ಪ್ರಾರಂಭವಾದ ನಂತರ ರಾಜ್ಯದೆಲ್ಲೆಡೆ ಯಶಸ್ವಿಯಾಗಿದೆ. ಈ ಕುರಿತು ನಮ್ಮ ನಾಯಕ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೇ ಅಮೇರಿಕದ ಚಿಕಾಗೋ ವಿವಿಯಲ್ಲಿ ಪ್ರಜಾಸೇವಾ ಆಂದೋಲನ ಕುರಿತು ಚರ್ಚಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಭಿವೃದ್ಧಿ ಪರ ನಮ್ಮ ಸರ್ಕಾರ ಜನರ ಸಮಸ್ಯೆ ಅರಿಯಲು ಇಡೀ ತಾಲೂಕಾಡಳಿತವೇ ಸ್ಥಳಕ್ಕೆ ಬರುತ್ತಿದೆ. ಜನರು ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ ಎಂದರು.ಕುಡಿವ ನೀರಿನ ಸಮಸ್ಯೆ ಪರಿಹರಿಸುವುದು, ಬೆನಕನಹಳ್ಳಿಯಲ್ಲಿ ಬಸ್ ನಿಲ್ದಾಣ, ಸಮುದಾಯ ಭವನ, ಉಜ್ಜಯಿನಿ ಸರ್ಕಾರಿ ಶಾಲೆಯಲ್ಲಿ ಅಡುಗೆ ಮನೆ, ಶೌಚಾಲಯ ನಿರ್ಮಾಣ, ನಾಗರಕಟ್ಟೆಯಲ್ಲಿ ಸಿಸಿ, ಚರಂಡಿ ನಿರ್ಮಾಣ, ಭೈರದೇವರಗುಡ್ಡದಲ್ಲಿ ರಸ್ತೆ ಅಭಿವೃದ್ಧಿ, ನಡುಮಾವಿನಹಳ್ಳಿಯಲ್ಲಿ ಪ್ರಜಾಸೇವಾ ಕೇಂದ್ರ ಆರಂಭ, ಉಜ್ಜಯಿನಿಯಲ್ಲಿ ಪ್ರವಾಸಿ ಮಂದಿರ ನಿರ್ಮಾಣ, ರೈತ ಸಂಪರ್ಕ ಕೇಂದ್ರ ಸ್ಥಾಪನೆ ಸೇರಿ ಮನೆ, ಪಹಣಿ ತಿದ್ದುಪಡಿ, ಸ್ಥಗಿತಗೊಂಡ ಪಿಂಚಣಿಗಳ ಮುಂದುವರೆಕೆಗೆ ಮನವಿ ಪತ್ರ ಜನರು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ 12, ಆರ್ಡಿಪಿಆರ್ 32, ಗಂಗಾಕಲ್ಯಾಣ, ಶಿಕ್ಷಣ, ಆಹಾರ ಇಲಾಖೆಗೆ ತಲಾ ಒಂದು ಸೇರಿ ಒಟ್ಟು 47 ಅರ್ಜಿಗಳು ಸಲ್ಲಿಕೆಯಾಗಿದ್ದವು.ತಹಸೀಲ್ದಾರ ಜಿ.ಕೆ.ಅಮರೇಶ, ತಾಪಂ ಇಒ ಡಾ.ಬಿ.ಆನಂದಕುಮಾರ್, ಕೂಡ್ಲಿಗಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಮ್ಮದ್ ಜಿಲಾನ್, ಬಿಇಒ ಮೈಲೇಶ್ ಬೇವೂರು, ಪಿಐ ಡಿ.ದುರುಗಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಪ್ರದೀಪಕುಮಾರ್, ಜೆಸ್ಕಾಂನ ನಾಗರಾಜ, ತೇಜವರ್ಧನ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಚಂದ್ರನಾಯ್ಕ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುಡ್ಡಪ್ಪ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸಂದೀಪನಾಯ್ಕ, ನರೇಗಾ ಎಡಿ ಎಚ್. ವಿಜಯಕುಮಾರ್, ತೋಟಗಾರಿಕೆ ಇಲಾಖೆಯ ಮಹಾಂತೇಶ, ಎಪಿಎಂಸಿ ಕಾರ್ಯದರ್ಶಿ ಎ.ಕೆ. ವೀರಣ್ಣ, ರೇಷ್ಮೆ ಇಲಾಖೆಯ ಬಿಬಿ ಕುಂಬಾರ್, ಬಿಸಿಎಂನ ಶ್ಯಾಮಪ್ಪ, ಪಿಡಿಒ ನೇತ್ರಾವತಿ, ಆರ್ಐ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ರಮೇಶ ಸೇರಿ ಅನೇಕ ಅಧಿಕಾರಿಗಳು ಇದ್ದರು. ಸಿ.ಮ.ಗುರುಬಸವರಾಜ ನಿರ್ವಹಿಸಿದರು.