ಮಕ್ಕಳು ಓದಿನ ಜತೆಗೆ ಚೆನ್ನಾಗಿ ಸಾಂಸ್ಕೃತಿಕ ಸಾಹಿತ್ಯಿ ನಾಟಕ ಮೊದಲಾದ ಕಲಾ ಪ್ರಕಾರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಿ

ಹೂವಿನಹಡಗಲಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಿ ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ನಿರ್ದೇಶಕ ಈಟಿ ಮಾಲತೇಶ್ ಹೇಳಿದರು.

ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ 2026-27 ನೇ ಸಾಲಿನ ಪ್ರೌಢಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ವಲಯ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ವಿವಿಧ ರೀತಿಯ ಕಲಾ ಪ್ರಕಾರಗಳು ಅಡಗಿರುತ್ತವೆ. ಅವರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಮಕ್ಕಳು ಓದಿನ ಜತೆಗೆ ಚೆನ್ನಾಗಿ ಸಾಂಸ್ಕೃತಿಕ ಸಾಹಿತ್ಯಿ ನಾಟಕ ಮೊದಲಾದ ಕಲಾ ಪ್ರಕಾರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರು ಸುರೇಶ ಅಂಗಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ತಾಲೂಕು ಅನುದಾನಿತ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸ್ವಾಮಿನಾಥ ರಾಮಸ್ವಾಮಿ, ಶಿಕ್ಷಕರಾದ ಮಹಮದ್ ರಫಿ, ಬಸಪ್ಪ ಹಕ್ಕಂಡಿ, ಪ್ರಕಾಶ್, ವಿಶ್ವನಾಥ್ ಬಾರಿಕರ, ಚಂದನಾ ಕಲಾ ಬಳಗದ ಎ.ಎಂ.ಪಿ.ಪ್ರಶಾಂತ್ ಇತರರಿದ್ದರು. ವಿವಿಧ ಪ್ರೌಢಶಾಲೆಗಳ ಮಕ್ಕಳು ಶಿಕ್ಷಕರು ಭಾಗವಹಿಸಿದ್ದರು.