ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಏಪ್ರಿಲ್ ಮತ್ತು ಮೇ ಮಾಹೆಗೆ ಜಿಲ್ಲೆಗೆ 13,500 ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದ್ದು ಜಿಲ್ಲೆಯಲ್ಲಿ 17,831 ಮೆಟ್ರಿಕ್ ಟನ್ ರಸಗೊಬ್ಬರವನ್ನು ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಮಾಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 6212 ಮೆಟ್ರಿಕ್ ಟನ್ ಯೂರಿಯಾ, 1414 ಮೆಟ್ರಿಕ್ ಟನ್ ಡಿ.ಎ.ಪಿ, 357 ಮೆಟ್ರಿಕ್ ಟನ್ ಪೋಟಾಷ್, 9538 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪಿ.ಓ.ಎಸ್. ಮಶೀನ್ ಮುಖಾಂತರವೇ ರೈತರ ಆಧಾರ್ ಕಾರ್ಡ್ ಪಡೆದು ಮಾರಾಟ ಮಾಡಲು ತಿಳಿಸಿದೆ. ರಸಗೊಬ್ಬರ (ನಿಯಂತ್ರಣ) ಆದೇಶ-1985 ರಲ್ಲಿನ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಹಾಗೂ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಟ್ಟುನಿಟ್ಟಾದ ಕಾನೂನು ಕ್ರಮ ಜರುಗಿಸಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರೈತರು ರಸಗೊಬ್ಬರಗಳ ಲಭ್ಯತೆ ಬಗ್ಗೆ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಮೊಬೈಲ್ ಸಂಖ್ಯೆ ಚಿಕ್ಕಬಳ್ಳಾಪುರ-9731207959, ಗೌರಿಬಿದನೂರು-8277930811, ಗುಡಿಬಂಡೆ-8277930810, ಬಾಗೇಪಲ್ಲಿ-8277930828, ಚಿಂತಾಮಣಿ-8277930832, ಶಿಡ್ಲಘಟ್ಟ-8277930857 ಗೆ ಸಂಪರ್ಕಿಸುವಂತೆ ತಿಳಿಸಿದರು.