ಐತಿಹಾಸಿಕ ಸ್ಮಾರಕ ಯುನೆಸ್ಕೋ ಪಟ್ಟಿ ಸೇರ್ಪಡೆಗೆ ಕ್ರಮ

KannadaprabhaNewsNetwork | Published : Jul 31, 2024 1:05 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ತಾಜ್‌ಬಾವಡಿಯ ಪುನರುಜ್ಜೀವನಗೊಳಿಸುವುದು ಮತ್ತು ಸಂರಕ್ಷಿಸುವುದಷ್ಟೆ ಅಲ್ಲದೇ ನಗರದಲ್ಲಿರುವ ಐತಿಹಾಸಿಕ ಗೋಲಗುಂಬಜ್, ತಾಜ್‌ಬಾವಡಿ, ಇಬ್ರಾಹಿಂರೋಜಾ ಮತ್ತು ಇತರೆ ಸ್ಮಾರಕಗಳನ್ನು ಸೇರಿಸಿ ಬಿಜಾಪುರ ಸ್ಮಾರಕಗಳ ಸಮೂಹ ಮಾಡಿ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಡಾ.ಎಂ.ಬಿ.ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ತಾಜ್‌ಬಾವಡಿಯ ಪುನರುಜ್ಜೀವನಗೊಳಿಸುವುದು ಮತ್ತು ಸಂರಕ್ಷಿಸುವುದಷ್ಟೆ ಅಲ್ಲದೇ ನಗರದಲ್ಲಿರುವ ಐತಿಹಾಸಿಕ ಗೋಲಗುಂಬಜ್, ತಾಜ್‌ಬಾವಡಿ, ಇಬ್ರಾಹಿಂರೋಜಾ ಮತ್ತು ಇತರೆ ಸ್ಮಾರಕಗಳನ್ನು ಸೇರಿಸಿ ಬಿಜಾಪುರ ಸ್ಮಾರಕಗಳ ಸಮೂಹ ಮಾಡಿ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಡಾ.ಎಂ.ಬಿ.ಪಾಟೀಲ ಭರವಸೆ ನೀಡಿದರು.

ಐತಿಹಾಸಿಕ ತಾಜ್‌ಬಾವಡಿಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ ಹಾಗೂ ವರ್ಲ್ಡ್‌ ಹೇರಿಟೇಜ್ ಮಾನ್ಯುಮಂಟ್‌ ಅಸೋಸಿಯೇಷನ್ ಆಪ್ ಇಂಡಿಯಾ (ಡಬ್ಲೂಎಂಫ್) ವಿಶ್ವ ಸ್ಮಾರಕಗಳ ನಿಧಿ ಸಹಭಾಗಿತ್ವದಲ್ಲಿ ಮತ್ತು ಟಿಸಿಎಸ್ ಫೌಂಡೇಶನ್‌ರವರ ಸಿಎಸ್‌ಆರ್ ಅನುದಾನದಡಿ ಸ್ಮಾರಕ ದತ್ತು ಯೋಜನೆಯಡಿಯಲ್ಲಿ ಸ್ಮಾರಕ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ೧೬೨೦ರಲ್ಲಿ ನಿರ್ಮಿಸಿದ ೨೨೪ ಚದರ ಅಡಿ ವೀಸ್ತಿರ್ಣದಲ್ಲಿ ೩೫ಚದರ ಅಡಿ ಹೊರ ಪ್ರದೇಶ ಮತ್ತು ಸುಮಾರು ೫೨ ಅಡಿ ಎತ್ತರದಲ್ಲಿರುವ ಐತಿಹಾಸಿಕ ತಾಜ್‌ಬಾವಡಿಯನ್ನು ಸಂರಕ್ಷಣೆ ಮಾಡಿ, ಅಭಿವೃದ್ಧಿಗೊಳಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸ್ಮಾರಕದ ಆವರಣದಲ್ಲಿ ಖಾಲಿ ಜಾಗದಲ್ಲಿ ಸಾಂಸ್ಕೃತಿಕ ಕಲ್ಯಾಣಿ- ಪುಸ್ಕರಣಿಯನ್ನು ನಿರ್ಮಿಸಲಾಗುವುದು. ಹಾಳಾಗಿರುವ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಹಮಾಮ್ ಪ್ರದೇಶದ ಮತ್ತು ಸೆರಾಯ್‌ನ ಪೂರ್ವ ದಿಕ್ಕಿನಲ್ಲಿರುವ ವಾಸ್ತುಶಿಲ್ಪದ ಅವಶೇಷಗಳನ್ನು ಪುನರ್‌ಸ್ಥಾಪನೆ ಮಾಡುವುದಾಗಿ ತಿಳಿಸಿದರು.ಈಗಾಗಲೇ ನಗರ ಸಂಚಾರದ ವೇಳೆ ತಾಜ್‌ಬಾವಡಿಯನ್ನು ಸಂಕಲ್ಪ ತೊಟ್ಟು ಪುನರುಜ್ಜೀವನಗೊಳಿಸಲಾಗಿದೆ. ಹತ್ತಾರು ಬೃಹತ್ ಜೆಸಿಬಿ ಹಿಟಾಚಿ ಮಾದರಿಯ ಯಂತ್ರಗಳನ್ನು ಬಳಸಿ, ಬೃಹತ್ ಮೋಟಾರುಗಳನ್ನು ನೀರಿನ ಆಳಕ್ಕೆ ಇಳಿಸಿ ನೀರನ್ನು ಹೊರಹಾಕಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಭಿವೃದ್ದಿಗೊಳಿಸಲಾಗುವುದು. ತಾಜ್‌ಬಾವಡಿಯನ್ನು ಅಭಿವೃದ್ದಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿ ಪ್ರವಾಸಿಗರನ್ನು ವಿಜಯಪುರಕ್ಕೆ ಆಕರ್ಷಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮೇಯರ್ ಮಹೇಜಬಿನ್ ಹೊರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿ ಹಲವರು ಇದ್ದರು.

ಕೋಟ್‌..

ಈಗಾಗಲೇ ನಗರ ಸಂಚಾರದ ವೇಳೆ ತಾಜ್‌ಬಾವಡಿಯನ್ನು ಸಂಕಲ್ಪ ತೊಟ್ಟು ಪುನರುಜ್ಜೀವನಗೊಳಿಸಲಾಗಿದೆ. ಹತ್ತಾರು ಬೃಹತ್ ಜೆಸಿಬಿ ಹಿಟಾಚಿ ಮಾದರಿಯ ಯಂತ್ರಗಳನ್ನು ಬಳಸಿ, ಬೃಹತ್ ಮೋಟಾರುಗಳನ್ನು ನೀರಿನ ಆಳಕ್ಕೆ ಇಳಿಸಿ ನೀರನ್ನು ಹೊರಹಾಕಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಭಿವೃದ್ದಿಗೊಳಿಸಲಾಗುವುದು. ತಾಜ್‌ಬಾವಡಿಯನ್ನು ಅಭಿವೃದ್ದಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿ ಪ್ರವಾಸಿಗರನ್ನು ವಿಜಯಪುರಕ್ಕೆ ಆಕರ್ಷಿಸಲಾಗುವುದು.

-ಡಾ.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ.

Share this article