ಬಮುಲ್‌ ಆಧುನೀಕರಣಕ್ಕೆ ಕ್ರಮ: ಶಾಸಕ ಶರತ್ ಬಚ್ಚೇಗೌಡ

KannadaprabhaNewsNetwork |  
Published : Nov 14, 2026, 02:00 AM IST
ಫೋಟೋ: 12 ಹೆಚ್ ಎಸ್ ಕೆ 4ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರು ಬಳಿ ಇರುವ ಬಮುಲ್ ಹೊಸಕೋಟೆ ಶಿಬಿರ ಕಚೇರಿಯಲ್ಲಿ  ತಾಲೂಕಿನ ವಿವಿಧ ಹಾಲು ಉತ್ಪಾದಕ ಸಂಘಗಳಿಗೆ, ಸದಸ್ಯರಿಗೆ ಪ್ರೋತ್ಸಾಹ ಧನದ ಚೆಕ್‌ಗಳನ್ನು ಶಾಸಕ ಶರತ್ ಬಚ್ಚೇಗೌಡ, ಬಮುಲ್ ನಿರ್ದೇಶಕ ಬಿವಿ.ಸತೀಶ್‌ಗೌಡ ವಿತರಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ಬೆಂಗಳೂರು ಹಾಲು ಒಕ್ಕೂಟದ ಅಭಿವೃದ್ಧಿಗಾಗಿ ಅಧ್ಯಕ್ಷ ಡಿ.ಕೆ.ಸುರೇಶ್ ಕೈಗೊಳ್ಳುತ್ತಿರುವ ಹಲವು ಸುಧಾರಣಾ ಕ್ರಮಗಳು ಶ್ಲಾಘನೀಯವಾಗಿದ್ದು, 2 ಕೋಟಿ ವೆಚ್ಚದಲ್ಲಿ ಹೊಸಕೋಟೆ ಹಾಲು ಸಂಸ್ಕರಣಾ ಕೇಂದ್ರವನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಲಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು

ಹೊಸಕೋಟೆ: ಬೆಂಗಳೂರು ಹಾಲು ಒಕ್ಕೂಟದ ಅಭಿವೃದ್ಧಿಗಾಗಿ ಅಧ್ಯಕ್ಷ ಡಿ.ಕೆ.ಸುರೇಶ್ ಕೈಗೊಳ್ಳುತ್ತಿರುವ ಹಲವು ಸುಧಾರಣಾ ಕ್ರಮಗಳು ಶ್ಲಾಘನೀಯವಾಗಿದ್ದು, 2 ಕೋಟಿ ವೆಚ್ಚದಲ್ಲಿ ಹೊಸಕೋಟೆ ಹಾಲು ಸಂಸ್ಕರಣಾ ಕೇಂದ್ರವನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಲಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಚಿಕ್ಕಹುಲ್ಲೂರು ಬಳಿಯ ಬಮುಲ್ ಹೊಸಕೋಟೆ ಶಿಬಿರ ಕಚೇರಿಯಲ್ಲಿ ತಾಲೂಕಿನ ವಿವಿಧ ಹಾಲು ಉತ್ಪಾದಕ ಸಂಘಗಳಿಗೆ, ಸದಸ್ಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಮಾತನಾಡಿದ ಅವರು, ಬೆಂಗಳೂರು ಡೇರಿ ಮಾದರಿಯಲ್ಲಿ ಹೊಸಕೋಟೆ ಘಟಕದಲ್ಲಿಯೂ ಯಾಂತ್ರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಗ್ರಾಹಕರಿಗೆ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಹೊಸಕೋಟೆ ಘಟಕದಲ್ಲಿ ಶುಭಂ, ಎಸ್‌ಎನ್‌ಐ ಸ್ಕೀಮ್ಡ್ ಮಿಲ್ಕ್, ಸಾಮಾನ್ಯ ಹಾಲು ಹಾಗೂ ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಪ್ರತಿದಿನ 2 ಲಕ್ಷ ಲೀಟರ್ ಸಂಸ್ಕರಿಸುವ ಸಾಮರ್ಥ್ಯವಿದೆ. ಪ್ರಸ್ತುತ ಬಮುಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡರ ವ್ಯಾಪ್ತಿಯ 170 ಡೇರಿಗಳಿಂದ ಪ್ರತಿದಿನ 1.60 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹೊಸಕೋಟೆ ತಾಲೂಕಿನ 206 ಡೇರಿಗಳಿಂದ 1.41 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಚಿಕ್ಕಬಳ್ಳಾಪುರದಿಂದ ಬರುವ ಹಾಲು ಸೇರಿದಂತೆ ಪ್ರತಿದಿನ ಸುಮಾರು 1.80 ಲಕ್ಷ ಲೀಟರ್ ಹಾಲು ಸಂಸ್ಕರಣೆಯಾಗುತ್ತಿದೆ ಎಂದು ತಿಳಿಸಿದರು.

ಹೈನುಗಾರರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ದಿನಕ್ಕೆ 10 ಲೀಟರ್ ಹಾಲು ನೀಡುವ ಹಸುವಿನಿಂದ 20 ಲೀಟರ್ ಹಾಲು ಪಡೆಯುವಂತಹ ವೈಜ್ಞಾನಿಕ ಹೈನುಗಾರಿಕೆಗೆ ರೈತರನ್ನು ಪ್ರೋತ್ಸಾಹಿಸುವುದು, ಸಾಗಾಣಿಕೆ ವೆಚ್ಚ ಕಡಿಮೆ ಮಾಡುವುದು ಹಾಗೂ ಹಾಲು ಸಂಸ್ಕರಣಾ ಘಟಕಗಳನ್ನು ಆಧುನೀಕರಿಸುವತ್ತ ಬಮುಲ್ ಗಮನ ಹರಿಸುತ್ತಿದೆ. ಯಂತ್ರೋಪಕರಣಗಳು ಎಷ್ಟೇ ಅತ್ಯಾಧುನಿಕವಾಗಿದ್ದರೂ ಅವುಗಳನ್ನು ನಿರ್ವಹಿಸುವ ಸಿಬ್ಬಂದಿಯ ಕೌಶಲ್ಯ, ಶ್ರಮ ಮತ್ತು ಜವಾಬ್ದಾರಿ ಮುಖ್ಯ. ಪ್ಯಾಕೇಜಿಂಗ್ ಯಂತ್ರದಿಂದ ಹಿಡಿದು ಇಡೀ ಘಟಕದ ಉತ್ಪಾದನೆ ಹಾಗೂ ಗುಣಮಟ್ಟ ಕಾಪಾಡುವಲ್ಲಿ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ಸ್ವಚ್ಛತೆ ಕೇವಲ ಪೊರಕೆ ಹಿಡಿದು ಮಾಡುವ ಕೆಲಸವಲ್ಲ, ಸಿಬ್ಬಂದಿಯ ಮನಸ್ಥಿತಿ, ಕಾಳಜಿ ಮತ್ತು ಜವಾಬ್ದಾರಿಯಿಂದ ಮಾತ್ರ ಸ್ವಚ್ಛತೆ ಕಾಪಾಡಲು ಸಾಧ್ಯ. ಬಮುಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡರಂತಹ ನಾಯಕತ್ವ ಸಿಬ್ಬಂದಿಯ ಬೆಂಬಲಕ್ಕೆ ನಿಂತು, ಸಂಸ್ಥೆಯ ಅಭಿವೃದ್ಧಿ ಹಾಗೂ ಕಾರ್ಮಿಕರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕರು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಬಮುಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ, ಶಿಬಿರದ ವ್ಯವಸ್ಥಾಪಕ ಮಧುಸೂದನ್, ಉಪ ವ್ಯವಸ್ಥಾಪಕ ವಿನಯ್ ಕುಮಾರ್, ವಿಸ್ತರಣಾಧಿಕಾರಿಗಳಾದ ರಮೇಶ್, ಆನಂದ್, ರಘುನಾಥ್, ಪವಿತ್ರ, ವಿದ್ಯಾಶ್ರೀ, ಕೃಷಿ ಅಧಿಕಾರಿ ಸೌಮ್ಯ ಇತರರು ಉಪಸ್ಥಿತರಿದ್ದರು.

ಫೋಟೋ: 12 ಹೆಚ್ ಎಸ್ ಕೆ 4

ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರು ಬಳಿಯ ಬಮುಲ್ ಹೊಸಕೋಟೆ ಶಿಬಿರ ಕಚೇರಿಯಲ್ಲಿ ತಾಲೂಕಿನ ವಿವಿಧ ಹಾಲು ಉತ್ಪಾದಕ ಸಂಘಗಳಿಗೆ, ಸದಸ್ಯರಿಗೆ ಪ್ರೋತ್ಸಾಹ ಧನದ ಚೆಕ್‌ಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು. ಬಮುಲ್ ನಿರ್ದೇಶಕ ಸತೀಶ್‌ಗೌಡ, ಶಿಬಿರ ವ್ಯವಸ್ಥಾಪಕ ಮಧುಸೂದನ್, ಉಪ ವ್ಯವಸ್ಥಾಪಕ ವಿನಯ್ ಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ