-21 ಕೋಟಿ ರು.ಗಳ ವೆಚ್ಚದ ವಿದ್ಯುತ್ ಉಪ ಕೇಂದ್ರ ಉದ್ಘಾಟಿಸಿದ ಶಾಸಕ ಕಂದಕೂರು
ಕನ್ನಡಪ್ರಭ ವಾರ್ತೆ ಗುರುಮಠಕಲ್
ಮತಕ್ಷೇತ್ರದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಪಂಪಸೆಟ್‌ಗಳ ಹಾಗೂ ವಿದ್ಯುತ್ ಸಂಪರ್ಕದ ಅವಲಂಬನೆಯಿಂದ ತಮ್ಮ ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಸೂಕ್ತ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಜೆಸ್ಕಾಂ ಅಧಿಕಾರಿಗಳ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.ತಾಲೂಕಿನ ಚಾಮನಳ್ಳಿ ಗ್ರಾಮದ ಹತ್ತಿರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 21 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣವಾದ 110/11 ಕೆವಿ ವಿದ್ಯುತ್ ಉಪ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿ ಹೊಸದಾಗಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಿಂದ ಚಾಮನಳ್ಳಿ, ಕಂಚಗಾರಹಳ್ಳಿ, ಮುದ್ನಾಳ ಹಾಗೂ ಇತರ ಹಳ್ಳಿಗಳು ಸೇರಿದಂತೆ ನಗರ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗುವುದನ್ನು ತಪ್ಪಿಸಿ, ಸಮರ್ಪಕ ಮತ್ತು ಉತ್ತಮ ಗುಣಮಟ್ಟದ ವಿದ್ಯುತ್‌ನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಜೆಸ್ಕಾಂ ಹಿರಿಯ ಅಧಿಕಾರಿಗಳಾದ ಚಂದ್ರಕಾಂತ ಪಾಟೀಲ್, ರಾಜೇಶ ಹಿಪ್ಪರಗಿ, ಬಸವಂತಕುಮಾರ, ರಾಘವೇಂದ್ರ, ಮಾಣಿಕರಾವ ಕುಲಕರ್ಣಿ, ಆನಂದ, ಶಂಕರ ಗುತ್ತಿ, ಬಂದಳ್ಳಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಸಂತೋಷ ಚವ್ಹಾಣ, ಭೋಜಣ್ಣಗೌಡ ಯಡ್ಡಳ್ಳಿ, ಬಸ್ಸುಗೌಡ ಚಾಮನಹಳ್ಳಿ, ಅಯ್ಯಣ್ಣಗೌಡ ಮಾಲಿ ಪಾಟೀಲ್, ಶರಣಗೌಡ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಇದ್ದರು.
----23ವೈಡಿಆರ್8: ಗುರುಮಠಕಲ್ ತಾಲೂಕಿನ ಚಾಮನಳ್ಳಿ ಗ್ರಾಮದ ಹತ್ತಿರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 21 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣವಾದ 110/11 ಕೆವಿ ವಿದ್ಯುತ್ ಉಪ ಕೇಂದ್ರವನ್ನು ಶಾಸಕ ಶರಣಗೌಡ ಕಂದಕೂರು ಅವರು ಉದ್ಘಾಟಿಸಿದರು.