ನಮ್ಮ ಪಾಲಿನ ನೀರಿನ ಸದ್ಬಳಕೆಗೆ ಕ್ರಮ

KannadaprabhaNewsNetwork |  
Published : Jun 04, 2025, 03:05 AM IST
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು ರವರು ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಹೇಮಾವತಿ ನಾಲೆಯ ತಾಲೂಕಿನ ಸಾಸಲು ಭಾಗದಿಂದ ಕೆರೆಗಳಿಗೆ ಹರಿಯಬೇಕಿರುವ ನಮ್ಮ ಪಾಲಿನ ನೀರನ್ನು ಸಂಪೂರ್ಣವಾಗಿ ಹರಿಸಲು ಎಲ್ಲಾ ಕ್ರಮಕೈಗೊಳ್ಳಲಾಗುವುದೆಂದು ಶಾಸಕ ಸಿ.ಬಿ. ಸುರೇಶ್‌ಬಾಬು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಹೇಮಾವತಿ ನಾಲೆಯ ತಾಲೂಕಿನ ಸಾಸಲು ಭಾಗದಿಂದ ಕೆರೆಗಳಿಗೆ ಹರಿಯಬೇಕಿರುವ ನಮ್ಮ ಪಾಲಿನ ನೀರನ್ನು ಸಂಪೂರ್ಣವಾಗಿ ಹರಿಸಲು ಎಲ್ಲಾ ಕ್ರಮಕೈಗೊಳ್ಳಲಾಗುವುದೆಂದು ಶಾಸಕ ಸಿ.ಬಿ. ಸುರೇಶ್‌ಬಾಬು ಭರವಸೆ ನೀಡಿದರು.

ಹೇಮಾವತಿ ನೀರಿಗಾಗಿ ತಾಲೂಕಿನ ರೈತರು ಹೋರಾಟ ನಡೆಸಲು ಸಜ್ಜಾದ ಹಿನ್ನೆಲೆಯಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು ಪಟ್ಟಣದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಈಚೆಗೆ ನಮ್ಮ ಕ್ಷೇತ್ರದ ಕೆಲ ರೈತರು ಹೇಮಾವತಿ ನೀರಿಗಾಗಿ ಹೋರಾಟದ ಹಾದಿಹಿಡಿದಿರುವುದು ಸಂತಸ ತಂದಿದೆ, ಇದಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಯೋಜನೆ ಇನ್ನೂ ಹಲವು ಕಾರಣದಿಂದ ಅಪೂರ್ಣವಾಗಿದೆ. ಅಗಸರಹಳ್ಳಿಯಿಂದ ದಬ್ಬೆಗಟ್ಟ ಮಾರ್ಗದ ನಾಲಾ ಕೆಲಸವಾದರೆ ಅಲ್ಲಿಂದ ಎರಡು ಮಾರ್ಗದಲ್ಲಿ ಗುರುತ್ವಾಕರ್ಷಣೆಯ ಮೂಲಕ ನವಿಲೆಕೆರೆಗೆ ಹಾಗೂ ಇನ್ನೊಂದು ಮಾರ್ಗದಲ್ಲಿ ಚಿಕ್ಕನಾಯಕನಹಳ್ಳಿ ಕೆರೆಯ ಮೂಲಕ ಕಂದಿಕೆರೆ ಹೋಬಳಿಯ ಕೆಲಕರೆಗಳಿಗೆ ಹರಿಯಲಿದೆ. ಈ ಯೋಜನೆ ಮುಗಿಸುವ ನಿಟ್ಟಿನಲ್ಲಿ ನಾನು ಆಗಿನಿಂದಲೂ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಆದರೆ ಕೆಲವೊಂದು ರೈತರು ಪರಿಹಾರದಹಣ ಬಂದ ನಂತರ ಭೂಮಿ ಬಿಡುವುದಾಗಿ ಹಠಹಡಿದಿದ್ದಾರೆ, ಹಲವು ಬಾರಿ ಅವರೊಂದಿಗೆ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಲಾಗಿದೆ, ಮತ್ತೊಮ್ಮೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ವಿಶ್ವಾಸಹೊಂದಿದ್ದೇನೆ ಎಂದರು. ಈ ಪ್ರಕ್ರಿಯೆ ಪೂರ್ಣಗೊಂಡರೆ ನಮ್ಮ ಭಾಗದ ಕೆರೆಗಳಿಗೆ ಹರಿಯಬೇಕಾದ ನೀರನ್ನು ಶತಾಯಗತಾಯ ಹರಿಸಲಾಗುವುದೆಂದರು.

ಸಾಸಲು ಮಾರ್ಗದ ನಾಲೆಯ ಹೂಳುತೆರವು ಖಚಿತ : ಪ್ರಸ್ತುತ ಸಾಸಲು ಕೆರೆಯ ಮೂಲಕ ಶೆಟ್ಟಿಕೆರೆ, ಹೆಸರಳ್ಳಿ, ತಿಮ್ಲಾಪುರದೆಡೆ ಹರಿಯವ ಮಾರ್ಗವನ್ನು ಸರಿಪಡಿಸಬೇಕಿದೆ. ಈ ಮಾರ್ಗ ಅತ್ಯಂತ ಪ್ರಮುಖ ಮಾರ್ಗವಾಗಿದ್ದು ಕಳೆದೆರಡುವರ್ಷದಿಂದ ಈ ನಾಲೆಯಲ್ಲಿ ಹರಿಸಿದ ನೀರಿನಿಂದಾಗಿ ತಾಲ್ಲೂಕಿನ ಅಂತರ್ಜಲದ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಸ್ತುತ ಹೇಮಾವತಿ ನಾಲೆಯಿಂದ ಸಾಸಲುವರೆಗಿ ಆಳದ ನಾಲೆಯಲ್ಲಿ ಕೆಲವಡೆ ಹೂಳು ತುಂಬಿದ್ದು ಸದರಿ ಹೂಳು ತೆಗೆಯಲು ೨೮ಲಕ್ಷರು.ಗಳ ಟೆಂಡರ್ ಆಗಿದ್ದು ಶೀಘ್ರದಲ್ಲಿಯೇ ಅಲ್ಲಿರುವ ಗಟ್ಟಿ ಅಂಟುಮಣ್ಣಿನ ಹೂಳನ್ನು ಯಾವುದೆ ಹವಾಮಾನ ಸ್ಥಿತಿಯಲ್ಲಿಯೂ ಕೆಲಸ ನಿಲ್ಲಿಸದೆ ತೆಗೆಸಿ ಈ ಭಾಗಕ್ಕೆ ಸದ್ಯದಲ್ಲಿಯೇ ಹರಿಯಲಿರುವ ನೀರಿನ ಪಾಲನ್ನು ಸಂಪೂರ್ಣವಾಗಿ ಬಳಸಲಾಗುವುದು ಎಂದರು.

ಪ್ರತಿವರ್ಷ ನಾಲೆಯಲ್ಲಿ ಹೂಳು ತುಂಬಿ ಅಡಚಣೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದ್ದು,ಈ ಸಮಸ್ಯೆ ಶಾಶ್ವತವಾಗಿ ಇಲ್ಲವಾಗಿಸಲು ಕಟ್ ಆ್ಯಂಡ್ ಕವರ್ ಮಾದರಿಯಲ್ಲಿ ನಾಲೆ ಸಿದ್ದಪಡಿಸಲು ರು.೧೫೦ಕೋಟಿ ಅಂದಾಜು ಮೊತ್ತದ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಜಿಲ್ಲೆಯ ಸಂಸದರಲ್ಲಿಯೂ ಮನವಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಜಾತ್ಯಾತೀತತೆ ನನ್ನ ಸಿದ್ದಾಂತ: ಜಾತಿಯ ಹಿನ್ನಲೆಯಲ್ಲಿ ರಾಜಕಾರಣ ಮಾಡುವ ಸ್ವಭಾವ ನನ್ನದಲ್ಲ, ನನ್ನ ರಾಜಕೀಯ ಇತಿಹಾಸ ಅರಿತಿರುವ ಯಾರೂ ಸಹ ನನ್ನನ್ನು ಆದೃಷ್ಠಿಯಲ್ಲಿ ಕನಸು ಮನಸಿನಲ್ಲಿಯೂ ನೋಡುವುದಿಲ್ಲ, ಕುಲದ ನಂಬಿಕೆಯಡಿ ನಡೆಯುತ್ತಿದ್ದ ಅರ್ಥವಿಲ್ಲದ ಆಚರಣೆಗಳನ್ನು ಹಲವರ ವಿರೋಧದ ನಡುವೆಯೂ ಸಮರ್ಥವಾಗಿ ನಿಲ್ಲಿಸಿದ್ದೇನೆ. ಆದರೆ ನನ್ನ ಒಡನಾಡಿ ಚಿತ್ರನಿರ್ದೇಶಕ ಬಿ.ಎಸ್. ಲಿಂಗದೇವರು ಯಾವ ಮನಸ್ಥಿತಿಯಲ್ಲಿ ನನ್ನಮೇಲೆ ಜಾತಿಯ ಆರೋಪ ಹೊರೆಸಿದ್ದಾರೂ ಅರ್ಥವಾಗುತ್ತಿಲ್ಲವೆಂದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ