ಆರ್‌ಸಿಬಿ ಚಾಂಪಿಯನ್‌ ಆಗಲಿ; ಬಿಜೆಪಿ ಯುವ ಮೋರ್ಚಾದಿಂದ ವಿಶೇಷ ಪೂಜೆ

KannadaprabhaNewsNetwork |  
Published : Jun 04, 2025, 03:04 AM IST
3ಎಚ್‌ಪಿಟಿ1ಹೊಸಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆರ್‌ಸಿಬಿ ಗೆಲುವಿಗಾಗಿ ಮಂಗಳವಾರ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕ್ರಿಕೆಟ್‌ ತಂಡ ಐಪಿಎಲ್‌ ಪಂದ್ಯಾವಳಿ ಫೈನಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಲಿ ಎಂದು ವಿಜಯನಗರ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿಗೆ ಮಂಗಳವಾರ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ವಿಜಯನಗರ ಜಿಲ್ಲೆಯಾದ್ಯಂತ ಆರ್‌ಸಿಬಿ ಪರ ಜಯಘೋಷಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕ್ರಿಕೆಟ್‌ ತಂಡ ಐಪಿಎಲ್‌ ಪಂದ್ಯಾವಳಿ ಫೈನಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಲಿ ಎಂದು ವಿಜಯನಗರ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿಗೆ ಮಂಗಳವಾರ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ವೇಳೆ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಆರ್‌ಸಿಬಿ ತಂಡ ಐಪಿಎಲ್‌ ಚಾಂಪಿಯನ್‌ ಆಗುವುದನ್ನು ಇಡೀ ಜಗತ್ತು ಕಾಯುತ್ತಿದೆ. ಸಣ್ಣಕ್ಕಿ ವೀರಭದ್ರೇಶ್ವ ದೇವಸ್ಥಾನದಲ್ಲಿ 18 ತೆಂಗಿನ ಕಾಯಿಗಳನ್ನು ಒಡೆಯುವ ಮೂಲಕ ವಿಶೇಷ ಪೂಜೆ ನೆರವೇರಿಸಿದ್ದೇವೆ. ಈ ಬಾರಿ ಕಪ್‌ ನಮ್ಮದೇ ಎಂದರು.

ಬಿಜೆಪಿ ಮಂಡಳ ಅಧ್ಯಕ್ಷ ಶಂಕರ್ ಮೇಟಿ, ಮುಖಂಡರಾದ ಸಾಲಿ ಸಿದ್ದಯ್ಯಸ್ವಾಮಿ, ರೇವಣಸಿದ್ದಪ್ಪ, ಚಂದ್ರು ದೇವಲಾಪುರ, ಮಧುರಚನ್ನಶಾಸ್ತ್ರಿ, ಜಯಶ್ರೀ, ವಿಜಯೇಂದ್ರ, ಬಸವರಾಜ್ ಗೌಳಿ, ಅನುರಾಧ, ಉಮಾದೇವಿ, ಲಲಿತಾ, ಬೋಜರಾಜ್, ಶಶಿಧರ್ ಸ್ವಾಮಿ, ಮಣಿಕಂಠ ಮತ್ತಿತರರಿದ್ದರು.

ಎಲ್ಲೆಡೆ ಆರ್‌ಸಿಬಿ ಹವಾ ಬಲು ಜೋರು:

ವಿಜಯನಗರ ಜಿಲ್ಲೆಯಾದ್ಯಂತ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಗೆಲ್ಲಲ್ಲಿ, ವಿರಾಟ್‌ ಕೊಹ್ಲಿ ಅಭೂತಪೂರ್ವ ಆಟವಾಡಲಿ, ಈ ಬಾರಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸಿ ಬೆಂಗಳೂರಿಗೆ ಕಪ್‌ ತರಲಿ ಎಂದು ಕ್ರಿಕೆಟ್‌ ಅಭಿಮಾನಿಗಳು ಎಲ್ಲೆಡೆ ಆಶಿಸುತ್ತಿದ್ದಾರೆ. ನಗರದ ಸವೆನ್‌ ಕ್ರಿಕೆಟ್‌ ಅಕಾಡೆಮಿಯ ಆಟಗಾರರು ಹಾಗೂ ಕೋಚ್‌ಗಳು ಮತ್ತು ಈ ಅಕಾಡೆಮಿ ಮಾಲೀಕರು ಕೂಡ ಈ ಬಾರಿ ಆರ್‌ಸಿಬಿ ತಂಡ ಜಯಶಾಲಿ ಆಗಲಿ ಎಂದು ಆಶಿಸಿದ್ದಾರೆ

ಆರ್‌ಸಿಬಿ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಪೂಜೆ:

ಐಪಿಎಲ್ 18ನೇ ಆವೃತ್ತಿಯ ಕೊನೆಯ ಪಂದ್ಯ ಮಂಗಳವಾರ ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳ ಮಧ್ಯ ಜರುಗಲಿದ್ದು, ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಲೆಂದು ಪಾರ್ಥಿಸಿ ಕಂಪ್ಲಿಯ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.ವಿಶ್ವದಾದ್ಯಂತ ಅಭಿಮಾನಿಗಳ ಮನಸ್ಸು ಗೆದ್ದಿರುವ ಆರ್‌ಸಿಬಿ ತಂಡಕ್ಕೆ ಈ ವರೆಗೂ ಟ್ರೊಫಿ ಲಭಿಸಿಲ್ಲ. ಈ ಬಾರಿಯ ಅವೃತ್ತಿ 18, ಅಲ್ಲದೇ ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ ಸಹ 18 ಆಗಿದ್ದು, ಈ ಬಾರಿ ಕಡಾಖಂಡಿತವಾಗಿ ಬೆಂಗಳೂರು ತಂಡ ಟ್ರೊಫಿ ಮುಡಿಗೇರಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸಿದರು.ಈ ವೇಳೆ ಶ್ರೀ ಸೋಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಆರ್‌ಸಿಬಿ ತಂಡದ ಪರ ಘೋಷಣೆ ಕೂಗುವ ಮೂಲಕ ತಂಡಕ್ಕೆ ಶುಭಕೋರಲಾಯಿತು.

ಈ ಸಂದರ್ಭ ಅರ್ಚಕರಾದ ಎಸ್.ಎಂ. ವೀರೇಶ್, ಅಭಿಮಾನಿಗಳಾದ ಸುನಿಲ್, ಬಳ್ಳಾರಿ ಪ್ರಶಾಂತ್, ಬಿ.ಎಚ್.ಎಂ. ಅಮರಾನಾಥ ಶಾಸ್ತ್ರಿ, ಕಟ್ಟೆ ನವೀನ್, ಜಯಂತ್, ಮೌನೇಶ್, ದೇವರಾಜ್, ಅನಿಲ್, ಕಿಶೋರ್, ಕೃಷ್ಣ, ಸುಹಾಸ್ ಇದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ