ಪುರಸಭೆ ಮೇಲ್ದರ್ಜೆಗೆ ಕ್ರಮ: ಸಚಿವ ರಾಜಣ್ಣ

KannadaprabhaNewsNetwork |  
Published : Sep 20, 2024, 01:50 AM IST
ಮಧುಗಿರಿ ಪುರಸಭೆ ಸಭಾಂಗಣದಲ್ಲಿ ಗುರುವಾರ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಕ್ಷ ಲಾಲಪೇಟೆ ಮಂಜುನಾಥ್‌, ಉಪಾಧ್ಯಕ್ಷೆ ಸುಜಾತ ಇ್ದದಾರೆ.  | Kannada Prabha

ಸಾರಾಂಶ

ಮಧುಗಿರಿದಿನದಿಂದ ದಿನಕ್ಕೆ ಅತಿ ವೇಗವಾಗಿ ಬೆಳೆಯುತ್ತಿರುವ ಮಧುಗಿರಿ ಪುರಸಭೆಯನ್ನು ಮುಂಬರುವ ದಿನಮಾನಗಳಲ್ಲಿ ಉನ್ನತ ಮೇಲ್ದದರ್ಜೆಗೇರಿಸಿ ನಗರಸಭೆಯನ್ನಾಗಿ ರೂಪಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ದಿನದಿಂದ ದಿನಕ್ಕೆ ಅತಿ ವೇಗವಾಗಿ ಬೆಳೆಯುತ್ತಿರುವ ಮಧುಗಿರಿ ಪುರಸಭೆಯನ್ನು ಮುಂಬರುವ ದಿನಮಾನಗಳಲ್ಲಿ ಉನ್ನತ ಮೇಲ್ದದರ್ಜೆಗೇರಿಸಿ ನಗರಸಭೆಯನ್ನಾಗಿ ರೂಪಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಭರವಸೆ ನೀಡಿದರು.

ಗುರುವಾರ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಏರ್ಪಟಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹೊಸ ತನವನ್ನು ಮೈಗೂಡಿಸಿಕೊಳ್ಳುತ್ತಿರುವ ಮಧುಗಿರಿ ಪುರಸಭೆಯನ್ನು ಉನ್ನತ ದರ್ಜೆಗೇರಿಸಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಮಧುಗಿರಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ 25 ಕೋಟಿ, ಅಲ್ಪಸಂಖ್ಯಾತ ನಿಗಮದಿಂದ 5 ಕೋಟಿ ಇದಲ್ಲದೆ ಅಮೃತ ಯೋಜನೆಯಡಿ 30 ಕೋಟಿ ಒಟ್ಟು 60 ಕೋಟಿ ರು. ಮಂಜೂರಾಗಿದೆ. ಇದನ್ನು ಪಟ್ಟಣದ ಅಭಿವೃದ್ಧಿಗೆ ಬಳಸಿಕೊಂಡು ಹೈಟೆಕ್‌ ಮಾದರಿ ನಗರವನ್ನಾಗಿ ಅಭಿವೃದ್ಧಿಗೊಳಿಸುವ ಜೊತೆಗೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಗರದ ಎಲ್ಲ ನಿವಾಸಿಗಳು ಪಟ್ಟಣದ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು.ಪಟ್ಟಣವನ್ನು ಸುಂದರ ನಗರವನ್ನಾಗಿ ರೂಪಿಸಿ, ಜನರ ಹಿತ ಕಾಪಾಡುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪಟ್ಟಣದ ಜನತೆಗೆ ವಾರಕ್ಕೆ ಎರಡು ದಿನ ನೀರು ಬಿಡುವ ಬಗ್ಗೆ ದೂರುಗಳು ಬಂದಿದ್ದು, ನೀರಿಲ್ಲವೆಂದರೆ ಬೇಡ, ಆದರೆ ನೀರಿದ್ದರೂ ಬಿಡಲು ಏನೂ ಕಷ್ಟ, ವಿದ್ಯುತ್ ಕೊರತೆಯಿಲ್ಲ, ಆದರೂ ನೀರು ಸರಬರಾಜು ಮಾಡಲು ನಿಮಗೆ ಏನೂ ಸಮಸ್ಯೆ ಎಂದು ಕಿಡಿಕಾರಿದ ಸಚಿವರು, ವಾಟರ್‌ ಮ್ಯಾನ್‌ಗಳ ಏನೂ ಮಾಡುತ್ತಿದ್ದೀರಾ? ನಿಮಗೆ ನೀರು ಬಿಡಲು ಆಗಲಿಲ್ಲವೆಂದರೆ ಬಿಟ್ಟು ಹೋಗಿ ಬೇರೆಯವರನ್ನು ನೇಮಿಸಿಕೊಂಡು ನೀರು ಬಿಡುತ್ತೇವೆ. ಇನ್ನೂ ಮುಂದೆ ಎಲ್ಲ ವಾರ್ಡ್‌ಗಳಿಗೂ ಗಾಂಧಿ ಜಯಂತಿ ದಿನದಿಂದ ಪ್ರತಿದಿನ ನೀರು ಬಿಡಬೇಕು ಎಂದು ಎಂಜಿನಿಯರ್‌ ಸಂಜೀವ ಮೂರ್ತಿಯವರಿಗೆ ಸೂಚಿಸಿದರು.

ಪುರಸಭೆ ಅಂಗಡಿ ಮಳಿಗೆಗಳ ಬಾಡಿಗೆ, ತಾಪಂ ಮಳಿಗೆ ಬಾಡಿಗೆ ಶಾಲೆಗೆ ನೀಡುವ, ಹಾಗೂ ಸಿಎ ಸೈಟ್‌ ವಿಚಾರದಲ್ಲಿ ಅಗತ್ಯ ಕ್ರಮಕ್ಕೆ ಸೂಚಿಸಿದ ಸಚಿವರು, ಮುಂದಿನ ತಿಂಗಳು ಮಧುಗಿರಿಗೆ ಶೃಂಗೇರಿ ಶ್ರೀಗಳು ಆಗಮಿಸಲಿದ್ದು ಈ ಭಾಗದಲ್ಲ ಉತ್ತಮ ರಸ್ತೆ ನಿರ್ಮಿಸಿ , ಸ್ವಚ್ಚತೆಗೆ ಆದ್ಯತೆ ನೀಡಿ ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌, ಉಪಾಧ್ಯಕ್ಷೆ ಜಿ.ಆರ್‌.ಸುಜಾತ ಶಂಕರನಾರಾಯಣ್‌, ಎಸಿ ಗೋಟೂರು ಶಿವಪ್ಪ, ಚೀಫ್‌ ಆಫೀಸರ್‌ ಸುರೇಶ್‌, ಮಾಜಿ ಅಧ್ಯಕ್ಷರಾದ ಎಂ.ವಿ.ಗೋವಿಂದರಾಜು, ಸದಸ್ಯರಾದ ರಾಧಿಕ,ಆಸೀಯಾ ಬಾನು, ನಸೀಮಬಾನು, ಎಂ.ಎಲ್‌.ಗಂಗರಾಜು, ನಟರಾಜು, ಪಾರ್ವತಮ್ಮ, ಎಂ.ವಿ.ಮಂಜುನಾಥ್ ಆಚಾರ್‌, ಶೋಭರಾಣಿ, ಶ್ರೀಧರ್, ಶಕೀಲ್‌, ಗಾಯಿತ್ರಿ, ಕೆ.ನಾರಾಯಣ್‌, ಎಂ.ಆರ್‌.ಜಗನ್ನಾಥ್‌, ಎಂ.ಎಸ್‌.ಚಂದ್ರಶೇಖರ್‌, ನಾಗಲತ ಹಾಗೂ ನಾಮ ನಿರ್ದೇಶಿತ ಸದಸ್ಯರುಗಳು ಇದ್ದ

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?