ಖಾಸಗಿ ಆಸ್ಪತ್ರೆಗೆ ದಾಖಲಿಸಲು ತಿಳಿಸಿದರೆ ಕ್ರಮ

KannadaprabhaNewsNetwork |  
Published : Jan 17, 2025, 12:49 AM IST
ಹೊಳೆನರಸೀಪುರದಲ್ಲಿ ಶಾಸಕ ಎಚ್.ಡಿ.ರೇವಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆ ವ್ಯಾಪ್ತಿಯ ಕೆಲವು ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಕೆಲವೊಮ್ಮೆ ಅಗತ್ಯ ಚಿಕಿತ್ಸೆಗೆಂದು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ತುರ್ತು ಚಿಕಿತ್ಸಾ ವಾಹನದಲ್ಲಿ ಕಳುಹಿಸುವಾಗ ಹಾಸನದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲು ತಿಳಿಸುತ್ತಾರಂತೆ. ಇದನ್ನ ತಡೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ಬಡ ಕೂಲಿ ಕಾರ್ಮಿಕರು, ಹಣ ನೀಡದಿದ್ದರೆ ಹೊಟ್ಟೆಗೆ ಏನು ತಿಂತ್ತಾರೆ, ಅವರಿಗೆ ಮೊದಲು ಸಂಬಳ ಕೊಡುವ ವ್ಯವಸ್ಥೆ ಮಾಡಿ ಎಂದಿದ್ದೇನೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಜಿಲ್ಲೆ ವ್ಯಾಪ್ತಿಯ ಕೆಲವು ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಕೆಲವೊಮ್ಮೆ ಅಗತ್ಯ ಚಿಕಿತ್ಸೆಗೆಂದು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ತುರ್ತು ಚಿಕಿತ್ಸಾ ವಾಹನದಲ್ಲಿ ಕಳುಹಿಸುವಾಗ ಹಾಸನದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲು ತಿಳಿಸುತ್ತಾರಂತೆ. ಇದನ್ನ ತಡೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 600 ನೌಕರರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ 6 ತಿಂಗಳಿಂದ ಸಂಬಳ ಕೊಟ್ಟಿಲ್ಲವಂತೆ, ಏನರ್ಥರೀ ಇದು. ನಾ ಏಜೆಂಟರಿಗೆ ಇದರ ಬಗ್ಗೆ ಪ್ರಶ್ನಿಸಿದಾಗ ಸರ್ಕಾರದಿಂದ ಹಣ ಬಂದಿಲ್ಲ, ನಾ ಏನು ಮಾಡಲಿ ಅಂತಾ ನೊಂದು ನುಡಿದರು. ಆಗ ನಾನು ಅದೆಲ್ಲಾ ಗೊತ್ತಿಲ್ಲಾ, ಬಡ ಕೂಲಿ ಕಾರ್ಮಿಕರು, ಹಣ ನೀಡದಿದ್ದರೆ ಹೊಟ್ಟೆಗೆ ಏನು ತಿಂತ್ತಾರೆ, ಅವರಿಗೆ ಮೊದಲು ಸಂಬಳ ಕೊಡುವ ವ್ಯವಸ್ಥೆ ಮಾಡಿ ಎಂದಿದ್ದೇನೆ ಎಂದರು.

36ಕೋಟಿ ರು. ವೆಚ್ಚದಲ್ಲಿ ಹಂಗರಹಳ್ಳಿ ಮೇಲ್ಸೇತುವೆ ಪಕ್ಕದಲ್ಲಿ ಇನ್ನೊಂದು ಪ್ಲೈ ಓವರ್ ಮಾಡಲಾಗುತ್ತೆ. ಅದೇ ರೀತಿ ಬೇಲೂರಿನಿಂದ ಬಿಳಕೆರೆ ತನಕ 2 ಸಾವಿರ ಕೋಟಿ ರು. ವೆಚ್ಚದಲ್ಲಿ ರಸ್ತೆ ಮಾಡಲಾಗುತ್ತೆ. ಇನ್ನೊಂದು ಬದಿಯಲ್ಲಿ ರೈಲ್ವೆ ಫ್ಲಾಟ್‌ಫಾರಂ ಮಾಡಲು ಭೂ ಸ್ವಾಧೀನ ಪಡಿಸಿಕೊಳ್ಳವಿಕೆ ಪ್ರಾರಂಭವಾಗುತ್ತೆ. ಪಟ್ಟಣದ ರೈಲ್ವೆ ಅಂಡರ್‌ಪಾಸ್ ಸಮೀಪದಿಂದ ಕನಕಭವನ ತನಕ 29 ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಾಗಾರಿ ನಾಲ್ಕೈದು ದಿನದಲ್ಲಿ ಪ್ರಾರಂಭ ಮಾಡಲಾಗುತ್ತೆ ಎಂದರು.

ಪೇಟೆ ಮುಖ್ಯ ರಸ್ತೆ ಚರಂಡಿಯಲ್ಲಿ ಹೂಳು ಸಮಸ್ಯೆ ಕುರಿತು ಗಮನ ಸೆಳೆದಾಗ ಸರ್ಕಾರದಿಂದ ಯಾವುದೇ ಗ್ರಾಂಟ್ ಬರುತ್ತಿಲ್ಲ, ಸ್ವಚ್ಛತಾ ಕಾರ್ಯಕ್ಕೆ ಸುಮಾರು 2 ಕೋಟಿ ರು. ಬೇಕಾಗುತ್ತೆ, ನಾ ಏನು ಮಾಡಲಿ ಎಂದು ಅಸಹಾಯತೆಯಿಂದ ನುಡಿದು, ರಸ್ತೆ ಕಾಮಗಾರಿ ಹಣವನ್ನ ಕುಮಾರಣ್ಣನ ಆಡಳಿತದಲ್ಲಿ ಮಂಜೂರು ಮಾಡಲಾಗಿತ್ತು ಎಂದರು.ಸುದ್ದಿಗೋಷ್ಠಿಗೂ ಮುನ್ನ ದೇವೇಗೌಡರ ಒಡನಾಡಿಯಾಗಿದ್ದ ಮಾಜಿ ಎಂಎಲ್‌ಸಿ ಪಟೇಲ್ ಶಿವಾರಾಂ ಅವರು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಜನಾನುರಾಗಿಯಾಗಿದ್ದರು. ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಜೆಡಿಎಸ್ ಪಕ್ಷದ ಸಕ್ರೀಯವಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಜತೆಗೆ ಅಘಾತ ತಂದಿದೆ. ಅವರ ಕುಟುಂಬ ಸದಸ್ಯರಿಗೆ ದುಃಖ ತಡೆಯುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ