ನಕಲಿ ಜಾತಿ ಪ್ರಮಾಣಪತ್ರ ಪಡೆಯುವವರ ವಿರುದ್ಧ ಕ್ರಮವಾಗಲಿ: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

KannadaprabhaNewsNetwork |  
Published : Jan 02, 2025, 12:30 AM IST
ಫೋಟೋವಿವರ-(31ಎಂಎಂಎಚ್‌1) ಮರಿಯಮ್ಮನಹಳ್ಳಿ ವಾಲ್ಮೀಕಿ ಭವನದಲ್ಲಿ ನಡೆದ ವಾಲ್ಮೀಕಿ ಜಾತ್ರೆ -​ 2025 ರ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ಜಾತ್ರೆ -​ 2025 ರ ಫೋಸ್ಟರ್‌ನ್ನು ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ವಾಲ್ಮೀಕಿ, ನಾಯಕ, ತಳವಾರ ಹೆಸರಿನಲ್ಲಿ ಅನ್ಯ ಜಾತಿಯವರು ಪರಿಶಿಷ್ಟ ಪಂಗಡ ಪ್ರಮಾಣಪತ್ರ ಪಡೆಯುತ್ತಿದ್ದಾರೆ.

ಮರಿಯಮ್ಮನಹಳ್ಳಿ: ವಾಲ್ಮೀಕಿ, ನಾಯಕ, ತಳವಾರ ಹೆಸರಿನಲ್ಲಿ ಅನ್ಯ ಜಾತಿಯವರು ಪರಿಶಿಷ್ಟ ಪಂಗಡ ಪ್ರಮಾಣಪತ್ರ ಪಡೆಯುತ್ತಿದ್ದು, ಇಂಥವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಾಲ್ಮೀಕಿ ಗುರು ಪೀಠದ ವಾಲ್ಮೀಕಿ ಪ್ರಸನ್ನ ಶ್ರೀ ಹೇಳಿದರು.ಇಲ್ಲಿನ ವಾಲ್ಮೀಕಿ ಭವನದಲ್ಲಿ ನಡೆದ ವಾಲ್ಮೀಕಿ ಜಾತ್ರೆ -​ 2025 ರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೀಸಲಾತಿಯ ಮೂಲ ಉದ್ದೇಶವನ್ನು ಬುಡಮೇಲು ಮಾಡುವ ಇಂಥವರನ್ನು ಸರ್ಕಾರ ಶಿಕ್ಷೆಗೆ ಒಳಪಡಿಸಿ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಜಾತ್ರೆ 2025ರ ಫೆಬ್ರವರಿ 8 ಮತ್ತು 9ನೇ ತಾರೀಕು ರಾಜನಹಳ್ಳಿಯ ಗುರುಪೀಠದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಜಾತ್ರೆಯು ವಾಲ್ಮೀಕಿ ಚಿಂತನೆಗಳನ್ನು ಸಮಾಜಕ್ಕೆ ತಿಳಿಸುವುದು ಹಾಗೂ ಸಮಾಜದ ಜಾಗೃತಿಗಾಗಿ, ಸಮಾಜದ ಏಳಿಗೆಗಾಗಿ ಜಾತ್ರೆಯನ್ನು ವಾಲ್ಮೀಕಿ ನಾಯಕ ಸಮುದಾಯದವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಾತ್ರೆಯ ಯಶಸ್ವಿಗಾಗಿ ವಾಲ್ಮೀಕಿ ನಾಯಕ ಸಮಾಜದ ಪ್ರತಿಯೊಬ್ಬರು ಶ್ರಮಿಸಬೇಕು. ಹೆಚ್ಚಿನ ಜನಸಂಖ್ಯೆಯನ್ನು ಜಾತ್ರೆಗೆ ಕರೆ ತರಬೇಕು ಮತ್ತು ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಲು ತಾವೆಲ್ಲರೂ ಮುಂದಾಗಿ ಹಾಗೂ ಸಮಾಜದಲ್ಲಿ ಹೆಚ್ಚು ಶೈಕ್ಷಣಿಕವಾಗಿ ಮುಂದುವರೆದ ಯುವಕರನ್ನು ಗುರುತಿಸಿ ಅವರಿಗೆ ಸಮಾಜದ ಕಳಕಳಿಯ ಬಗ್ಗೆ ಮಾಹಿತಿ ನೀಡಿ ಸಮಾಜವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಬಯಲಾಟ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಕಲಾವಿದ ಕೆ.ರಾಮಚಂದ್ರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ವಾಲ್ಮೀಕಿ ಜಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ವಾಲ್ಮೀಕಿ ನಾಯಕ ಸಮಾಜದ ಮರಿಯಮ್ಮನಹಳ್ಳಿ ಹೋಬಳಿಯ ಅಧ್ಯಕ್ಷ ಮರಡಿ ಹನುಮಂತ, ಮರಿಯಮನಹಳ್ಳಿ ಪಟ್ಟಣ ಅಧ್ಯಕ್ಷ ರೋಗಾಣಿ ಮಂಜುನಾಥ, ಕಾರ್ಯದರ್ಶಿಗಳಾದ ಎಸ್. ನವೀನಕುಮಾರ್, ಬಿ.ಪರಶುರಾಮ, ಸಮಾಜದ ಮುಖಂಡರಾದ ಎನ್.ಸತ್ಯನಾರಾಯಣ, ಗೋವಿಂದರ ಪರಶುರಾಮ, ಗರಗ ಪ್ರಕಾಶ, ರಂಗ ಕಲಾವಿದೆ ಡಾ.ಕೆ.ನಾಗರತ್ನಮ್ಮ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್‌. ಜಂಬಯ್ಯ ನಾಯಕ, ಹೊಸಪೇಟೆ ಕಟಗಿ ವಿಜಯಕುಮಾರ್, ತಳವಾರ ಹುಲುಗಪ್ಪ, ನಂದಿಹಳ್ಳಿ ಹುಲುಗಪ್ಪ, ಯು.ವೆಂಕಟೇಶ, ಹರಪನಹಳ್ಳಿ ಮಂಜುನಾಥ, ಗುಂಡ ಸೋಮಣ್ಣ, ನಾರಾಯಣಪ್ಪ, ಕಲ್ಲಾಳ್ ಪರಶುರಾಮ ನಿವೃತ್ತ ಶಿಕ್ಷಕರಾದ ಡಿ. ಯಮನೂರಪ್ಪ, ಸೋಮಶೇಖರ, ಎಂ.ಅಂಜಿನಪ್ಪ, ತಳವಾರ್ ಬಸವರಾಜ, ಟೈಲರ್ ಅಂಕ್ಲೇಶ್, ಬಾಪುರಿ ಅಂಜಿನಿ, ತಳವಾರ್ ಶ್ರೀಕಾಂತ, ಕಚಾಟಿ ಮಂಜುನಾಥ, ರಾಘವೇಂದ್ರ, ದಾಸರ ವೆಂಕಟೇಶ, ಬಿ. ಸುರೇಶ್, ಹನುಮಂತಪ್ಪ, ಪಪಂ ಸದಸ್ಯರಾದ ಮರಡಿ ಸುರೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಎಚ್.ರಮೇಶ ಸೇರಿದಂತೆ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಹನುಮನಹಳ್ಳಿ, ಡಣಾಪುರ, ದೇವಲಾಪುರ, ತಿಮ್ಮಲಾಪುರ, ಚಿಲಕನಹಟ್ಟಿ, ಹಾರುವನಹಳ್ಳಿ, ಜಿ ನಾಗಲಾಪುರ, ಗರಗ ಗೊಲ್ಲರಹಳ್ಳಿ, ಬ್ಯಾಲಕುಂದಿ ಸೇರಿದಂತೆ ಇತರ ಹಳ್ಳಿಗಳ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಯುವಕರು ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.

ಮರಿಯಮ್ಮನಹಳ್ಳಿ ವಾಲ್ಮೀಕಿ ಭವನದಲ್ಲಿ ನಡೆದ ವಾಲ್ಮೀಕಿ ಜಾತ್ರೆ -​ 2025 ರ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ಜಾತ್ರೆ -​ 2025 ರ ಫೋಸ್ಟರ್‌ನ್ನು ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಕಳಕಳಿಯ ಎಸ್ಎಸ್‌ ಅಪ್ರತಿಮ ನಾಯಕ: ಸೈಯದ್‌ ನುಡಿನಮನ
ಶಿವಶಂಕರಪ್ಪ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ