ಕನ್ನಡಪ್ರಭ ವಾರ್ತೆ ಬಾದಾಮಿ
ಭಾನುವಾರ ಕಾನಿಪ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಮಹೇಶ ಹೊಸಗೌಡ್ರ, ಬಾದಾಮಿ ಪುರಸಭೆ ಅಧ್ಯಕ್ಷ ಪಾಂಡು ಕಟ್ಟೀಮನಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವು ಹಿರೇಮಠ, ಪುರಸಭೆ ಸದಸ್ಯ ಮಂಜು ಹೊಸಮನಿ ಮಾತನಾಡಿ, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಆ.30 ರಂದು ಘಟನೆ ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವ ಪೊಲೀಸ್ ಇಲಾಖೆಯ ಕಾರ್ಯ ವೈಖರಿ ಶ್ಲಾಘಿಸಿದರು. ಇದರಲ್ಲಿ ಕಾಣದ ಕೈಗಳು ಪಿತೂರಿ ಮಾಡಿದ್ದರು. ಆರೋಪಿಗಳನ್ನು ಬಂಧಿಸಿ ಅವರ ಬಾಯಿಂದ ಹೆಸರು ಕೇಳಿ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾ.ಪಂ ಸದಸ್ಯ ಬಸವರಾಜ ತಳವಾರ, ಗುತ್ತಿಗೆದಾರ ಬಾಲಪ್ಪ ನಂದೆಪ್ಪನ್ನವರ ಮಾತನಾಡಿ, ಗುಳೇದಗುಡ್ಡ ಘಟನೆ ಬಗ್ಗೆ ಕಾಂಗ್ರೆಸ್ ಪಕ್ಷದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಘಟಕ ಸೇರಿದಂತೆ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ರಜಾಕ ರಾಜೂರ, ಬೇಲೂರಪ್ಪ ಬೇಲೂರಪ್ಪನ್ನವರ, ಹನಮಂತ ಅಪ್ಪನ್ನವರ, ಭರಮಪ್ಪ ಕಾಟನ್ನವರ, ಲಕ್ಷ್ಮಣ ಕೊಚಲ, ಶೌಕತ್ ವಾಚಮೇಕರ, ರಂಗನಾಥ ಮೇಟಿಕಲ್, ಬಸವರಾಜ ಡೊಳ್ಳಿನ, ಹುಲ್ಲಪ್ಪ ಬಿಳೆಕಲ್, ಮುತ್ತಣ್ಣ ಬಾಗಲೆ, ಸೂರಪ್ಪ ಕೊಪ್ಪನ್ನವರ, ಶರಣಪ್ಪ ತಮಿನಾಳ, ಶಫಿ ಜಲಗೇರಿ, ನಾಗಪ್ಪ ತಳವಾರ, ಚಿದಾನಂದ ತಳವಾರ, ಶಿವಯ್ಯ ಹಿರೇಮಠ, ಹನಮಂತ ಡೊಳ್ಳಿ, ಮಂಜುನಾಥ ಹಟ್ಟಿ, ಸಾಗರ ವಡ್ಡರ, ಸಂತೋಷ ಕಟಾಪೂರ, ಆನಂದ ಕೋಟಿ, ಬಸವರಾಜ ಪಾತ್ರೋಟಿ ಸೇರಿದಂತೆ ಇತರ ಮುಖಂಡರು ಭಾಗವಸಿದ್ದರು.