ಹಾನಗಲ್ಲ: ತಾಲೂಕಿನ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಹುಬ್ಬಳ್ಳಿಯ ಹೆಸ್ಕಾಂ ಕಚೇರಿ ಸಭಾಂಗಣದಲ್ಲಿ ಹೆಸ್ಕಾಂ ಅಧ್ಯಕ್ಷರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಶಾಸಕ ಶ್ರೀನಿವಾಸ ಮಾನೆ ಸಭೆ ನಡೆಸಿದರು.ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಗಲು ಹೊತ್ತಿನಲ್ಲಿ ಸಹ ಬೀದಿದೀಪ ಉರಿಯುತ್ತಿದ್ದು, ಬಿಲ್ ಹೊರೆ ಗ್ರಾಪಂಗಳ ಮೇಲೆ ಬೀಳುತ್ತಿದೆ. ಇನ್ನೊಂದು ಲೈನ್ ಅಳವಡಿಸುವ ಮೂಲಕ ಹಗಲು ಹೊತ್ತಿನಲ್ಲಿ ಬೀದಿದೀಪ ಉರಿಯದಂತೆ ಕ್ರಮ ಕೈಗೊಂಡರೆ ಗ್ರಾಪಂಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಗುತ್ತಲ: ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ಭ್ರಷ್ಟಾಚಾರ ಅಡ್ಡಿಯಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ ಬೆಂಗಳೂರು ವಿಭಾಗದ ವಿಚಕ್ಷಣಾ ಅಧಿಕಾರಿ ಶರತಚಂದ್ರ ಪದಿಹರಿ ತಿಳಿಸಿದರು.ಪಟ್ಟಣ ಪಂಚಾಯಿತಿ ಆವರಣದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ವಿಚಕ್ಷಣಾ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ಭ್ರಷ್ಟಾಚಾರ ಎಂಬ ಪಿಡುಗನ್ನು ತೊಲಗಿಸಲು ಸರ್ಕಾರ, ನಾಗರಿಕರು ಒಟ್ಟಾಗಿ ಹೋರಾಡಿದಾಗ ಸಾಧ್ಯವಾಗುತ್ತದೆ. ಪ್ರತಿಯೊಬ್ಬ ನಾಗರಿಕನು ಜಾಗೂರಕನಾಗಿರಬೇಕು ಮತ್ತು ಎಲ್ಲ ಸಮಯದಲ್ಲೂ ಪ್ರಾಮಾಣಿಕತೆ ಹಾಗೂ ಸಮಗ್ರತೆಯ ಮಾನದಂಡಗಳಿಗೆ ಬದ್ಧರಾಗಿರಬೇಕು ಎಂದರು.ವಿಚಕ್ಷಣಾ ಜಾಗೃತಿ ಅಭಿಯಾನದ ಪ್ರತಿಜ್ಞೆಯನ್ನು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಗುತ್ತಲ ಶಾಖಾ ಮ್ಯಾನೇಜರ್ ಸುನೀಲ ಕೆ., ಪಪಂ ಅಧ್ಯಕ್ಷೆ ಮಾಳವ್ವ ಗೊರವರ, ಉಪಾಧ್ಯಕ್ಷ ಪರಶುರಾಮ ಯಲಗಚ್ಚ, ಮುಖ್ಯಾಧಿಕಾರಿ ದೇವಾನಂದ ದೊಡ್ಡಮನಿ ಬ್ಯಾಂಕಿನ ಸಿಬ್ಬಂದಿ ವೀರಣ್ಣ ಬಾರ್ಕಿ ಸೇರಿದಂತೆ ಅನೇಕರಿದ್ದರು.