ಬೇಸಿಗೆಯಲ್ಲಿ ರೈತರಿಗೆ ವಿದ್ಯುತ್ ಸಮಸ್ಯೆಯಾಗಂತೆ ಕ್ರಮ: ಎಇಇ ನಂದೀಶ್

KannadaprabhaNewsNetwork |  
Published : Feb 29, 2024, 02:07 AM IST
28 ಬೀರೂರು 1ಬೀರೂರಿನ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ ನಡೆಯಿತು. ಚಿಕ್ಕಮಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಲೋಕೇಶ್, ಎಇಇ ನಂದೀಶ್, ಎಇ ರಮೇಶ್, ಯಗಟಿ ಎಇ ರಮೇಶ್,ಹಿರೇನಲ್ಲೂರು ಜೆಇ ಕಿಶೋರ್ ರಾಜ್,ಮತ್ತಿತರಿದ್ದರು. | Kannada Prabha

ಸಾರಾಂಶ

ಬೇಸಿಗೆ ಆರಂಭವಾಗಿದ್ದು ಲೋಡ್ ಶೆಡ್ಡಿಂಗ್‌ ನಿಂದ ರೈತರಿಗೆ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು ಎಂದು ಮೆಸ್ಕಾಂ ಕಾರ್ಯ ಪಾಲಕ ಅಭಿಯಂತರ ನಂದೀಶ್ ತಿಳಿಸಿದರು.

- ಬೀರೂರು ಮೆಸ್ಕಾಂ ಉಪವಿಭಾಗದ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಕನ್ನಡಪ್ರಭವಾರ್ತೆ, ಬೀರೂರು

ಬೇಸಿಗೆ ಆರಂಭವಾಗಿದ್ದು ಲೋಡ್ ಶೆಡ್ಡಿಂಗ್‌ ನಿಂದ ರೈತರಿಗೆ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು ಎಂದು ಮೆಸ್ಕಾಂ ಕಾರ್ಯ ಪಾಲಕ ಅಭಿಯಂತರ ನಂದೀಶ್ ತಿಳಿಸಿದರು.

ಕಚೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಕುಂದುಕೊರತೆ ಆಲಿಸಿ ಮಾತನಾಡಿದರು. ಬರುವ ದೂರುಗಳನ್ನು ತತ್‌ ಕ್ಷಣದಲ್ಲೇ ಪರಿಹರಿಸಲು ಪ್ರಯತ್ನ ನಡೆದಿದ್ದು ಕಳೆದ ಜನ ಸಂಪರ್ಕ ಸಭೆಯಲ್ಲಿ ಬಂದಿದ್ದ ದೂರುಗಳನ್ನು ಪರಿಹರಿಸಲಾಗಿದೆ. ವಿದ್ಯುತ್‌ ಗೆ ಬದಲಾಗಿ ರೈತರ ಜಮೀನುಗಳಲ್ಲಿ ಸೋಲಾರ್ ಪಾನಲ್‌ ಗಳನ್ನು ಅಳವಡಿಸಿ ಅದರಿಂದಲೂ ಬೋರ್‌ ಗಳನ್ನು ಚಾಲು ಮಾಡುವ ಯೋಜನೆ ಶೀಘ್ರದಲ್ಲಿ ಎಲ್ಲಾ ರೈತರಿಗೂ ತಲುಪಿಸುವ ಕಾರ್ಯ ಆರಂಭವಾಗಲಿದೆ ಎಂದರು.ಹುಲ್ಲೇಹಳ್ಳಿ ಗ್ರಾಮದ ರೈತ ವೆಂಕಟೇಶಪ್ಪ ತೋಟದಲ್ಲಿ ಹಾದು ಹೋಗಿರುವ ಹಳೆ ವಿದ್ಯುತ್ ಲೈನ್ ಬದಲಿಸಿ ಹೊಸ ಲೈನ್ ಅಳವಡಿಕೆ ವಿಳಂಬವಾಗಿಡಿದ್ದು ಶಿಘ್ರ ಪರಿಹರಿಸುವಂತೆ ಆಗ್ರಹಿಸಿದರು.

ಜೋಡಿ ತಿಮ್ಮಾಪುರ ಗ್ರಾಮದ ವಸಂತ, ಹನುಮಾಪುರ ಗ್ರಾಮದ ತೋಟದಲ್ಲಿ ಒಂದು ವರ್ಷದಲ್ಲಿ ೨-೩ ಬಾರಿ ವಿದ್ಯುತ್ ಲೈನ್ ತುಂಡಾಗುತ್ತಿದೆ. ಹಳೆಲೈನ್‌ ಸರಿಪಡಿಸಿ ಹೋಗುತ್ತಿದ್ದಾರೆಯೇ ಹೊರತು ನಮ್ಮ ಮನವಿಯಂತೆ ಹೊಸ ಲೈನ್ ಅಳವಡಿಸಲು ಮುಂದಾಗುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದರು.

ಜೋಡಿ ತಿಮ್ಮಾಪುರ ಗ್ರಾಮಸ್ಥ ಓಂಕಾರಪ್ಪ ರೈಲ್ವೆ ಗೇಟ್ ಬಳಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಅಂಗಡಿ ಮುಂಗಟ್ಟುಗಳನ್ನು ಕಬ್ಬಿಣದ ಶೀಟ್‌ನಿಂದ ನಿರ್ಮಿಸಲಾಗಿದೆ. ಇತ್ತೀಚೆಗೆ ಅವುಗಳ ಮೇಲೆಯೇ ಪವರ್ ಲೈನ್‌ ಎಳೆಯ ಲಾಗಿದೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ? ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಬೀರೂರಿನ 9ನೇ ವಾಡ್ ಶಿವಕುಮಾರ್‌ ಅವರ ಮನೆ ಬಾಗಿಲಲ್ಲಿರುವ ವಿದ್ಯುತ್ ಕಂಬ ತೆರವು ಮಾಡುವಂತೆ ಕಳೆದ ಒಂದು ವರ್ಷದಿಂದ ಮನವಿ ಮಾಡಿದರೂ ಕ್ರಮವಹಿಸಿದ ಬಗ್ಗೆ ಶಿವಕುಮಾರ್ ಮೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ ತೆಗೆದು ಕೊಂಡರು. ತಕ್ಷಣ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಂಬ ಸ್ಥಳಾಂತರಿಸುವ ಬಗ್ಗೆ ಕ್ರಮವಹಿಸುವ ಭರವಸೆ ನೀಡಿದರು.

ವಿಭಾಗೀಯ ಕಚೇರಿ ಅಭಿಯಂತರ ಲಿಂಗರಾಜು ಪ್ರತಿಕ್ರಿಯಿಸಿ, ಗ್ರಾಮಗಳಲ್ಲಿರುವ ಸಮಸ್ಯೆಗಳ ಅರಿವಿದೆ. ಕಾಮಗಾರಿಗೆ ಅಂದಾಜುಪಟ್ಟಿ ತಯಾರಿಸಲಾಗಿದೆ. ಜೋಡಿತಿಮ್ಮಾಪುರ ರೈಲ್ವೆ ಗೇಟ್ ಅಂಗಡಿಗಳ ಮೇಲೆ ಎಳೆದಿರುವ ವಿದ್ಯುತ್ ಲೈನ್ನ ಬಗ್ಗೆ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು.

ಸಭೆಯಲ್ಲಿ ಚಿಕ್ಕಮಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಲೋಕೇಶ್, ಎಇ ರಮೇಶ್, ಯಗಟಿ ಎಇ ರಮೇಶ್, ಹಿರೇನಲ್ಲೂರು ಜೆಇ ಕಿಶೋರ್ ರಾಜ್, ಎಇ ಸುಧಾ, ಕಂದಾಯ ಶಾಖೆ ಓಂಕಾರಮ್ಮ ಮತ್ತು ಗ್ರಾಹಕರು, ಸಿಬ್ಬಂದಿ ಇದ್ದರು.

28 ಬೀರೂರು 1

ಬೀರೂರಿನ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ ನಡೆಯಿತು. ಚಿಕ್ಕಮಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಲೋಕೇಶ್, ಎಇಇ ನಂದೀಶ್, ಎಇ ರಮೇಶ್, ಯಗಟಿ ಎಇ ರಮೇಶ್,ಹಿರೇನಲ್ಲೂರು ಜೆಇ ಕಿಶೋರ್ ರಾಜ್,ಮತ್ತಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ