
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ಶನಿವಾರ ಪ್ರಜಾಸೇವೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶ ಜನರು ತಮ್ಮ ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡಿಸುವ ತಪ್ಪಿಸುವುದಕ್ಕಾಗಿ ಮತ್ತು ಸ್ಥಳದಲ್ಲಿಯೇ ಪರಿಹಾರ ಮತ್ತು ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಕಾರ್ಯಕ್ರಮ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಸರ್ಕಾರದ ಪಿಂಚಣಿ ಯೋಜನೆಗಳು ವೃದ್ಯಾಪ್ಯ ಅಂಗವಿಕಲ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮೈತ್ರಿ, ಮನಸ್ವಿನಿ ಯೋಜನೆಯ ಅಡಿಯಲ್ಲಿ ಕೆಲವರು 30 -40 ವರ್ಷದೊಳಗಿನ ಜನರು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಯೋಜನೆ ಪಡೆಯುತ್ತಿದ್ದಾರೆ ಅಂತವರ ಸರ್ವ ಕಾರ್ಯ ನಡೆಯುತ್ತಿದೆ ಎಂದರು
ಚಿಂಚೋಳಿ ತಾಲೂಕಿನ ಐನಾಪುರ್ ಸುಲೇಪೇಟ್ ಹಾಗೂ ಚಿಂಚೋಳಿ ಪಟ್ಟಣದಲ್ಲಿ ಈಗಾಗಲೇ ಪ್ರಜಾಸೇವೆ ಕಾರ್ಯಕ್ರಮವನ್ನು ನಡೆಸಲಾಗಿದೆ. ತಾಲೂಕಿನಲ್ಲಿ ಭೀಕರ ಬರಗಾಲ ಇರುವುದರಿಂದ ಸಾಕಷ್ಟು ರೈತರು ಬೆಳೆ ನಷ್ಟ ಹೊಂದಿದ್ದಾರೆ. ತಾಲೂಕಿನಲ್ಲಾದ ಬೆಳೆ ಹಾನಿ ಕುರಿತು ಕೃಷಿ ಮತ್ತು ಕಂದಾಯ ಇಲಾಖೆ ವತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 46,6೦4 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರೈತರು ತಪ್ಪದೆ ಎಫ್.ಐ.ಡಿ ಮಾಡಿಸಿಕೊಳ್ಳಬೇಕು. ಇದನ್ನು ಮಾಡಿಸಿಕೊಂಡ ರೈತರಿಗೆ ಸರ್ಕಾರದಿಂದ ರೈತರಿಗೆ ತಪ್ಪದೇ ಬೆಳೆ ಪರಿಹಾರ ಬರಲಿದೆ ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಚೌವ್ಹಾಣ್ ಮಾತನಾಡಿ, ತಾಲೂಕಿನಲ್ಲಿ ವಿಕಸಿತ ಭಾರತ್ ಯೋಜನೆ ಅಡಿಯಲ್ಲಿ ಚಿಂಚೋಳಿ ತಾಲೂಕಿನಲ್ಲಿ ಈ ಯೋಜನೆ ಪ್ರಾರಂಭವಾದಾಗ 12,000 ಕೂಲಿ ಕಾರ್ಮಿಕರು, ಕುಂಚಾವರಂ ಗಡಿ ಪ್ರದೇಶದಲ್ಲಿ 6000 ಜನರು ಕೆಲಸ ಮಾಡುತ್ತಿದ್ದರು. ಈಗ ಕೂಲಿ ಕಾರ್ಮಿಕರ ಸಂಖ್ಯೆ 4000 ಕಡಿಮೆ ಇದೆ ಎಂದರು