ಆರ್ಥಿಕ ಬೆಳವಣಿಗೆಗೆ ಪ್ರವಾಸೋದ್ಯಮವೇ ಶಕ್ತಿ: ಪ್ರೊ.ಆರ್.ಆರ್.ಬಿರಾದಾರ

KannadaprabhaNewsNetwork |  
Published : Sep 27, 2026, 01:30 AM IST
 | Kannada Prabha

ಸಾರಾಂಶ

ಪ್ರವಾಸೋದ್ಯಮ ಕ್ಷೇತ್ರವು ಇಂದು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿಯಾಗಿ ರೂಪಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಇವುಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಮಾಡಿದಲ್ಲಿ ಪ್ರದೇಶದಲ್ಲಿ ಕ್ಷಿಪ್ರ ಆರ್ಥಿಕ ಬೆಳವಣಿಗೆ ಸಾಧ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಆರ್.ಆರ್.ಬಿರಾದಾರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರವಾಸೋದ್ಯಮ ಕ್ಷೇತ್ರವು ಇಂದು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿಯಾಗಿ ರೂಪಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಇವುಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಮಾಡಿದಲ್ಲಿ ಪ್ರದೇಶದಲ್ಲಿ ಕ್ಷಿಪ್ರ ಆರ್ಥಿಕ ಬೆಳವಣಿಗೆ ಸಾಧ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಆರ್.ಆರ್.ಬಿರಾದಾರ ಅಭಿಪ್ರಾಯಪಟ್ಟರು.ಶುಕ್ರವಾರ ಕಲಬುರಗಿ ಕೋಟೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಶರಣಬಸವ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜಿಲ್ಲೆಯ ಐತಿಹಾಸಿಕ ಪರಂಪರೆ ಸಾರುವ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ‘ಪರಂಪರೆ ನಡಿಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ 65 ಐತಿಹಾಸಿಕ ಪ್ರವಾಸಿ ತಾಣಗಳಿದ್ದು, ಇತ್ತ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುವುದು ಅತ್ಯಗತ್ಯವಿದೆ ಎಂದರು.ಪ್ರವಾಸಿ ತಾಣಗಳ, ಐತಿಹಾಸಿಕ ಸ್ಮಾರಕಗಳನ್ನು ಸ್ವಚ್ಛವಾಗಿ ಇಡುವುದು ಪ್ರತಿಯೊಬ್ಬ ಪ್ರವಾಸಿಗನ ಕರ್ತವ್ಯ. ಸ್ವಚ್ಛತೆ ಇಲ್ಲದೆ ಪ್ರವಾಸಿಗರು ಬರಲು ಸಾಧ್ಯವಿಲ್ಲ. ಇಂತಹ ಐತಿಹಾಸಿಕ ಸ್ಥಳದಲ್ಲಿ ಪರಿಸರ ಸಂರಕ್ಷಣೆ ಜವಾಬ್ದಾರಿಯನ್ನು ನಾವು ಮರೆಯುವಂತಿಲ್ಲ ಎಂದರು.ದೇಶದ ಒಟ್ಟಾರೆ ಜಿಡಿಪಿ 346 ಕೋಟಿ ರು. ಇದ್ದು, ಇದರಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಪಾಲು ಶೇ.6ರಷ್ಟಿದೆ. ಪ್ರತಿ ವರ್ಷ ಭಾರತದಾದ್ಯಂತ 303 ಕೋಟಿ ಜನ ಪ್ರವಾಸಿಗರು ವಿವಿಧ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ವಿದೇಶಿಯರ ಸಂಖ್ಯೆ 9.9 ಕೋಟಿ ಇದೆ. ಪ್ರವಾಸೋದ್ಯಮ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ ಎಂದು ಪ್ರೊ. ಆರ್.ಆರ್.ಬಿರಾದರ ಅಭಿಪ್ರಾಯಪಟ್ಟರು.ದೇವಸ್ಥಾನವರೆಗೆ ಕಾಲ್ನಡಿಗೆ: ಕಲಬುರಗಿ ಕೋಟೆಯಿಂದ ನಡೆದ ಪರಂಪರೆ ನಡಿಗೆಗೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಬೇಬಿ ಮೊಗೇರ್ ಚಾಲನೆ ನೀಡಿದರು. ಕೋಟೆಯಲ್ಲಿ ಜಾಮೀಯಾ ಮಸೀದಿ, ಉದ್ದದ ತೋಪು ನೋಡಿದ ವಿದ್ಯಾರ್ಥಿ ತಂಡ ಕಾಲ್ನಡಿಗೆ ಮೂಲಕ ಶ್ರೀ ಶರಣಬಸವೇಶ್ವರ ದೇವಸ್ಥಾನದ ವರೆಗೆ ಸಾಗಿ ಸಂಪನ್ನಗೊಂಡಿತ್ತು. ನಡಿಗೆಯುದ್ದಕ್ಕೂ ಇಂಟೆಕ್ ಕಲಬುರಗಿಯ ಅಧ್ಯಾಯದ ಡಾ.ಶಂಭುಲಿಂಗ ವಾಣಿ ಅವರು ಕೋಟೆ ಇತಿಹಾಸ, ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.ಪ್ರವಾಸಿ ಅಧಿಕಾರಿ ಅರುಣಕುಮಾರ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ಶಾಲೆಯ ಡೀನ್ ಪ್ರೊ. ಪಾಂಡುರಂಗ ಪಟ್ಟಿ, ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಮಹೇಂದ್ರ ಜಿ., ಪ್ರಾಧ್ಯಾಪಕಿ ಪ್ರೊ. ಅಂಕತಿ ರಘು, ಅಸೋಸಿಯೇಟ್ ಪ್ರೊಫೆಸರ್ ಡಾ. ಗೌತಮ್, ಸ್ವಚ್ಛತಾ ಹೀ ಸೇವಾ ಅಭಿಯಾನ ಸಂಯೋಜಕ ಪ್ರೊ. ಗಣಪತಿ ಬಿ. ಸಿನ್ನೂರ್, ಕೆ.ಟಿ.ಎಫ್ ಕಲಬುರಗಿಯ ಸ್ಯಾಮಿವಲ್ ಸಂಧ್ಯಾರಾಜ್, ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಕಲ್ಯಾಣ ರಾವ್ ಪಾಟೀಲ್, ಎ.ಎಸ್.ಐ. ಅಧಿಕಾರಿ ನಂದಕುಮಾರ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಗಳು, ನೀರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ಹಾವಳಿ ಗ್ರಾಮಸ್ಥರ ಆಕ್ರೋಶ ಸಾಕು ಪ್ರಾಣಿಗಳ ಮೇಲೆ ದಾಳಿ
ಜನಪದ ಸಾಹಿತ್ಯಕ್ಕೆ ಪ್ಲೀಟ್ ಕೊಡುಗೆ ಅನನ್ಯ: ಕೊಡಂಬಲ್