ಪೌತಿ ಖಾತೆ ವಿಲೇವಾರಿಗೆ ಮೊದಲ ಆದ್ಯತೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

KannadaprabhaNewsNetwork |  
Published : Sep 27, 2026, 01:30 AM IST
ಮಧುಗಿರಿ ತಾಲೂಕನ  ಐ.ಡಿ.ಹಳ್ಳಿ ಬಸ್ ನಿಲ್ದಾಣದಲ್ಲಿ  ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾ ಸೇವಾ ಅಂದೋಲನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಉದ್ಘಾಟಿಸಿ ಮಾತನಾಡಿದರು.  | Kannada Prabha

ಸಾರಾಂಶ

ದಾಖಲೆಗಳು ಸರಿ ಇಲ್ಲದಿದ್ದರೆ ಸೌಲಭ್ಯ ಪಡೆಯಲು ಆಗದು .. ಆದ್ದರಿಂದ ರೈತರು ತಮ್ಮ ಜಮೀನುಗಳ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಒದಗಿಸಿ ಪೌತಿ ಖಾತೆ ತ್ವರಿತವಾಗಿ ಮಾಡಿಸಿಕೊಳ್ಳಿ.

ಐ.ಡಿ.ಹಳ್ಳಿ ಬಸ್ ನಿಲ್ದಾಣದಲ್ಲಿ ಜಿಲ್ಲಾ, ತಾಲೂಕು ಆಡಳಿತದಿಂದ ಹೋಬಳಿ ಮಟ್ಟದ ಪ್ರಜಾ ಸೇವಾ ಆಭಿಯಾನಕನ್ನಡಪ್ರಭವಾರ್ತೆ, ಮಧುಗಿರಿ

ಜಿಲ್ಲೆಯಲ್ಲಿ ಸುಮಾರು 2.5 ಲಕ್ಷ ಪೌತಿ ಖಾತೆ ಬಾಕಿ ಉಳಿದಿದ್ದು, ತ್ವರಿತವಾಗಿ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಗ್ರಾಮ ಆಡಳಿತ ಅಧಿಕಾರಿ ಪ್ರತಿದಿನ ಕನಿಷ್ಠ ಒಂದು ಪೌತಿ ಖಾತೆ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ತಾಲೂಕಿನ ಐ.ಡಿ.ಹಳ್ಳಿ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾ ಸೇವಾ ಆಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಖಾತೆ ಹಾಗೂ ಪಹಣಿ ದಾಖಲೆಗಳು ಸರಿಯಾಗಿದ್ದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ. . ದಾಖಲೆಗಳು ಸರಿ ಇಲ್ಲದಿದ್ದರೆ ಸೌಲಭ್ಯ ಪಡೆಯಲು ಆಗದು .. ಆದ್ದರಿಂದ ರೈತರು ತಮ್ಮ ಜಮೀನುಗಳ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಒದಗಿಸಿ ಪೌತಿ ಖಾತೆ ತ್ವರಿತವಾಗಿ ಮಾಡಿಸಿಕೊಳ್ಳಿ ಎಂದರು.

ಕಂದಾಯ ಇಲಾಖೆಯ ಕಾರ್ಯವೈಖರಿ ಕುರಿತು ತಹಶೀಲ್ದಾರ್ ಹಾಗೂ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ 580 ವಿಎ ವೃತ್ತಗಳಿದ್ದು, ಪ್ರತಿ ವಿಎ ವ್ಯಾಪ್ತಿಯಲ್ಲಿ ನಿತ್ಯ ಒಂದು ಪೌತಿ ಖಾತೆ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ತಾಕೀತು ಮಾಡಿದರು.

ಮನೆ ಬಾಗಿಲಿಗೆ ಸೇವೆ ಃ

ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದೇ ಪ್ರಜಾ ಸೇವಾ ಆಂದೋಲನದ ಪ್ರಮುಖ ಉದ್ದೇಶ. ಜಿಲ್ಲೆಯ 10 ತಾಲೂಕುಗಳ 50 ಹೋಬಳಿಗಳಲ್ಲಿ ಪ್ರತಿ ಶನಿವಾರ ಪ್ರಜಾ ಸೇವಾ ಆಂದೋಲನ ನಡೆಸಲಾಗುತ್ತಿದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿಯೇ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡಿದರೆ ಆಂದೋಲನಕ್ಕೆ ಬರುವ ಅರ್ಜಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದರು. ಪೌತಿ ಖಾತೆ ವಿಲೇವಾರಿ, ಕಂದಾಯ ಗ್ರಾಮಗಳ ರಚನೆ, ಪಡಿತರ ಚೀಟಿಯ ಇ-ಕೆವೈಸಿ, ಪಿಂಚಣಿ ಸೇರಿದಂತೆ ಸಾರ್ವಜನಿಕರ ವಿವಿಧ ಸಮಸ್ಯೆಗಳಿಗೆ ಆದ್ಯತೆ ನೀಡಿ ಪರಿಹಾರ ಕಲ್ಪಿಸಬೇಕು ಎಂದು ತಿಳಿಸಿದರು.

ಬೆಸ್ಕಾಂಗೆ ಸ್ಪಂದನೆ ಸೂಚನೆಃ

ರೈತರು ಹಾಗೂ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಕರೆ ಮಾಡಿದಾಗ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಸ್ಪಂದಿಸಬೇಕು. ಸಾರ್ವಜನಿಕರ ಕರೆಗಳಿಗೆ ಸಮರ್ಪಕವಾಗಿ ಸ್ಪಂದಿಸಿದರೆ ಜಿಲ್ಲಾ ಮಟ್ಟಕ್ಕೆ ದೂರುಗಳು ಬರುವುದನ್ನು ತಪ್ಪಿಸಬಹುದು. ಈ ಹಿನ್ನೆಲೆಯಲ್ಲಿ ಫೋನ್-ಇನ್ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಜಾ ಸೇವೆ ಮಾಡಲು ಇದು ಸುವರ್ಣಾವಕಾಶ. ವಿವಿಧ 30 ಇಲಾಖೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಸೇವಾ ಮನೋಭಾವದಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಕಚೇರಿಗಳಲ್ಲಿಯೇ ಪರಿಹಾರ ದೊರೆಯುವಂತೆ ಮಾಡಿದಾಗ ಪ್ರಜಾ ಸೇವಾ ಆಂದೋಲನದ ಉದ್ದೇಶ ಈಡೇರುತ್ತದೆ ಎಂದರು.

ಸಮಾರಂಭದಲ್ಲಿ ತಹಶೀಲ್ದಾರ್ ನಂದಿನಿ, ಇಒ ಉತ್ತಮ್ , ಪಿಡಬ್ಲ್ಯೂಡಿ ಇಇ ಹನುಮಂತರಾವ್, ಬೆಸ್ಕಾಂ ಇಇ ಜಗದೀಶ್, ವಲಯ ಅರಣ್ಯಾಧಿಕಾರಿ ಎಚ್.ಎಂ. ಸುರೇಶ್, ಬಿಇಒ ಕೆ.ಎನ್. ಹನುಮಂತರಾಯಪ್ಪ, ಅಬಕಾರಿ ಡಿವೈಎಸ್ಪಿ ದೀಪಕ್, ಎಡಿಎಲ್‌ಆರ್ ರಂಗನಾಥ್, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮಂಜುಕಿರಣ್, ಟಿಎಚ್‌ಒ ಆನಂದ್, ಎಡಿಎ ಧನಂಜಯ್, ಆಹಾರ ಇಲಾಖೆ ನಿರೀಕ್ಷಕ ಮಹಮ್ಮದ್ ನಸ್ರುದ್ದೀನ್, ಪ್ರಭಾರ ಕಂದಾಯ ತನಿಖಾಧಿಕಾರಿ ರವಿಕುಮಾರ್, ಪಿಡಿಒಗಳಾದ ಆಂಜನೇಯಲು, ಸವಿತಾ, ನಾಗರಾಜು, ಕೆ. ಜಯಪ್ರಕಾಶ್, ಶಿವಕುಮಾರ್ ಕಂದಾಯ ಅಧಿಕಾರಿಗಳಾದ ರವಿಕುಮಾರ್, ತನುಜಾ, ಮೋಹನ್ ಕುಮಾರ್, ಜಗದೀಶ್, ಕಿರಣ್ ಕುಮಾರ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ಹಾವಳಿ ಗ್ರಾಮಸ್ಥರ ಆಕ್ರೋಶ ಸಾಕು ಪ್ರಾಣಿಗಳ ಮೇಲೆ ದಾಳಿ
ಜನಪದ ಸಾಹಿತ್ಯಕ್ಕೆ ಪ್ಲೀಟ್ ಕೊಡುಗೆ ಅನನ್ಯ: ಕೊಡಂಬಲ್