ಕೇಂದ್ರದ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ, ರಾಜ್ಯದ ತಂಬಾಕು ಪರವಾನಗಿ ಇಲ್ಲದ ಕಾರ್ಡ್‌ದಾರರ ತಂಬಾಕು ಬೆಳಗಾರರಿಗೆ ತಂಬಾಕು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಮಾರಾಟ ಮಾಡಲು ಶ್ರೀಘವೇ ಅವಕಾಶ ಕಲ್ಪಿಸುವೆ - ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಹಾಸನ : ಕೇಂದ್ರದ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ, ರಾಜ್ಯದ ತಂಬಾಕು ಪರವಾನಗಿ ಇಲ್ಲದ ಕಾರ್ಡ್‌ದಾರರ ತಂಬಾಕು ಬೆಳಗಾರರಿಗೆ ತಂಬಾಕು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಮಾರಾಟ ಮಾಡಲು ಶ್ರೀಘವೇ ಅವಕಾಶ ಕಲ್ಪಿಸುವೆ. ಸ್ಥಳೀಯ ಶಾಸಕರು ಮತ್ತು ರೈತರು ನನ್ನ ಗಮನಕ್ಕೆ ತಂದಿದ್ದಾರೆ.
ಈ ಬಗ್ಗೆ ತಂಬಾಕು ಬೆಳಗಾರರು ಅತಂಕಪಡುವುದು ಬೇಡ. ಇದಕ್ಕೆ ಕೇಂದ್ರ ವಾಣಿಜ್ಯ ಸಚಿವರ ಹತ್ತಿರ ಮಾತನಾಡಿ ಪರಹಾರ ಕಲ್ಪಿಸುವುದಾಗಿ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಗೌಡಗೆರೆ ಶ್ರೀ ಗುರುಜಂಗಮ ದೇವರ ಮಠದ ಪರಮಪೂಜ್ಯ ಪ್ರಣವ ಸ್ವರೂಪಿ ಶ್ರೀ ನಟರಾಜಮಹಾ ಸ್ವಾಮೀಜಿ 50ನೇ ವರ್ಷದ ಚರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಹರಗುರು ಚರಮೂರ್ತಿಗಳ ಮತ್ತು ಗಣ್ಯಮಾನ್ಯರ ಸಮ್ಮುಖದಲ್ಲಿ ಪೂಜ್ಯ ಶ್ರೀ ಶ್ರೀ ನಟರಾಜಮಹಾ ಸ್ವಾಮೀಜಿಯವರಿಗೆ ರುದ್ರಾಕ್ಷಿ ಕಿರೀಟಾಧಾರಣೆ, ಧಾನ್ಯಗಳ ತುಲಭಾರ ಹಾಗೂ ಬೆಳ್ಳಿ ಕಿರೀಟಾಧಾರಣೆ ನಾಣ್ಯಗಳ ತುಲಭಾರ ಸೇವೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿರುವ ರಾಮನಾಥಪುರ ,ಪಿರಿಯಾಟ್ಣಣ, ಹುಣಸೂರು ಮುಂತಾದ ಕಡೆಗಳಲ್ಲಿ ವಾಣಿಜ್ಯ ಬೆಳೆ ತಂಬಾಕು ಮಾರುಕಟ್ಟೆಗಳು ಇದ್ದು ರೈತರು ಬೆಳೆಗಾರರ ಸಂಕಷ್ಟ ನನಗೆ ಅರಿವಿದ್ದು, ಶ್ರೀಘವೇ ಕೇಂದ್ರದ ವಾಣಿಜ್ಯ ಸಚಿವರು ಪಿಯೂಷ್ ಗೋಯಲ್ ಅವರೊಂದಿಗೆ ಮಾತನಾಡಿ ಅವಕಾಶ ಕಲ್ಪಿಸಿಕೊಡುತ್ತೇನೆ.
ಈ ನೆಲದ ಸಂಸ್ಕೃತಿ, ಅಧುನಿಕ ತಂತ್ರಜ್ಞಾನದ ಲಾಭ, ಸವಲತ್ತುಗಳನ್ನು ಪಢಯುತ್ತಿರುವ ನಾವು ಕುಟುಂಬದ ಮತ್ತು ಸಮಾಜದಲ್ಲಿನ ನಮ್ಮ ಸಂಬಂಧಗಳನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ, ಅದರೆ ಇಂತಹ ಮಠಮಾನ್ಯಗಳು ಮಾತ್ರ ಮಾನವನ ಸಂಬಂಧಗಳನ್ನು ಉಳಿಸಬಲ್ಲ ಶಕ್ತಿ ಹೊಂದಿವೆ.
ಇಂತಹ ನೆಲದ ಇತಿಹಾಸ ಹಾಗೂ ಸಾಮಾಜಿಕ ಬಾಂಧವ್ಯ ಉಳಿಸಿ ಬೆಳಸಲು ಮಠಗಳು ಗುರುಕುಲದ ಪರಂಪರೆಯನ್ನು ಮರುಸ್ಥಾಪಿಸುವ ಅಗತ್ಯವಿದೆ. ಇಂತಹ ಸಂದರ್ಭಗಳಲ್ಲಿ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಭಾರತ ವಿಶ್ವದ 5ನೇ ಸ್ಥಾನದಲ್ಲಿದ್ದು ಮುಂದಿನ ದಿವಸಗಳಲ್ಲಿ 3 ಸ್ಥಾನಕ್ಕೇರುವತ್ತ ಮುನ್ನುಗುತ್ತಿದೆ. ಇಂತಹ ಗ್ರಾಮೀಣ ಪ್ರದೇಶಗಳಲ್ಲಿ ಅನಾಥ ಮಕ್ಕಳಿಗೆ ದಾಸೋಹ ಸೇವೆ, ವಿದ್ಯಾದಾನ ನೀಡುತ್ತಿರುವ ಮೂಲಕ ಮಾತೃ ಹೃದಯದೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ನಮ್ಮೆಲ್ಲರ ಪುಣ್ಯ ಎಂದು ಎಚ್.ಡಿ. ಕುಮಾರಸ್ವಾಮಿ ಕೊಂಡಾಡಿದರು.
ಪರಮಪೂಜ್ಯ ಸುತ್ತೂರು ಜಗದ್ಗುರುಗಳು, .ಸಾಲೂರು ಮಠದ ಶ್ರೀಗಳು, ಗೌಡಗೆರೆ ಮಠದ ಶ್ರೀಗಳು, ಬೆಟ್ಟದಪುರ ಮಠದ ಶ್ರೀಗಳು, ಪಡಗೂರು ಅಡವಿ ಮಠ ಶ್ರೀಗಳು, ಮಾದಳ್ಳಿ ಮಠ ಶ್ರೀಗಳು, ಶ್ರೀರಂಗಪಟ್ಟಣದ ಚಂದ್ರವನ ಅಶ್ರಮ ಮಠದ ಶ್ರೀಗಳು, ಅರೆಮೇರಿ ಮಠ ಶ್ರೀಗಳು, ತಣ್ಣಿರುಹಳ್ಳ ಮಠದ ಶ್ರೀಗಳು, ಮಾಯಿಗೌಡನಹಳ್ಳಿ ಮಠದ ಶ್ರೀಗಳು, ಕಿರಿಕೊಡ್ಲಿ ಮಠದ ಶ್ರೀಗಳು, ಕಲ್ಲುಮಠ ಶ್ರೀಗಳು, ಕೆಸವತ್ತೂರು ಮಠ ಶ್ರೀಗಳು, ಮುಂತಾದ ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು ಶ್ರೀಮಠದ ಭಕ್ತರು ಭಾಗವಹಿಸಿದ್ದರು.