ದಪ್ಪಗುಳಿ ದೇಗುಲ ಅಭಿವೃದ್ಧಿಪಡಿಸಲು ಕ್ರಮ: ಶಾಸಕ ಮಂಜುನಾಥ್

KannadaprabhaNewsNetwork |  
Published : Sep 30, 2025, 12:00 AM IST
29ಸಿಎಚ್‌ಎನ್‌54ಹನೂರು ತಾಲೂಕಿನ ಗಡಿ ಗ್ರಾಮವಾದ ದಂಟಲ್ಲಿ ಗ್ರಾಮಕ್ಕೆ  ಶಾಸಕ ಎಂಆರ್ ಮಂಜುನಾಥ್  ಭೇಟಿ ನೀಡಿ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. | Kannada Prabha

ಸಾರಾಂಶ

ತಾಲೂಕಿನ ಗಡಿ ಗ್ರಾಮವಾದ ದಂಟಲ್ಲಿ ಗ್ರಾಮಕ್ಕೆ ಶಾಸಕ ಎಂ. ಆರ್‌. ಮಂಜುನಾಥ್ ಭೇಟಿ ನೀಡಿ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಗಡಿ ಗ್ರಾಮವಾದ ದಂಟಲ್ಲಿ ಗ್ರಾಮಕ್ಕೆ ಶಾಸಕ ಎಂ. ಆರ್‌. ಮಂಜುನಾಥ್ ಭೇಟಿ ನೀಡಿ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು.

ಗ್ರಾಮಕ್ಕೆ ಬೇಕಾಗಿರುವ ರಸ್ತೆ ಹಾಗೂ ನದಿಯಿಂದ ಶಾಶ್ವತ ನೀರು ಸರಬರಾಜು ಮಾಡಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು. ದಪ್ಪಗುಳಿ ದೇವಸ್ಥಾನಕ್ಕೆ ಬೆಂಗಳೂರು ಹಾಗೂ ಅಂತರರಾಜ್ಯದಿಂದ ದಿನನಿತ್ಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಈ ಕ್ಷೇತ್ರಕ್ಕೆ ಸಮರ್ಪಕ ರಸ್ತೆ ಸಂಪರ್ಕ ಕಲ್ಪಿಸಲು ಶಾಸಕ ಮಂಜುನಾಥ್‌ಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈಗಾಗಲೇ ಇದಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಕೆಲಸಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರ ನೀಡಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ಸರ್ಕಾರದ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಸಂಪರ್ಕ ರಸ್ತೆ ಸುಗಮ ಸಂಚಾರಕ್ಕೆ ಹಾಗೂ ದೇವಾಲಯ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು.

ತಾಲೂಕಿನ ದಂಟಲ್ಲಿ ಗ್ರಾಮದ ರೈತರು ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಕಾಡುಪ್ರಾಣಿಗಳಿಂದ ರೈತ ಹಸು, ಮೇಕೆ, ಎಮ್ಮೆ ಮೃತಪಟ್ಟರೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸೂಕ್ತ ನೀಡುತ್ತಿಲ್ಲ. ಪರಿಹಾರ ನೀಡಲು ಸ್ಥಳಕ್ಕೆ ಭೇಟಿ ನೀಡಿ ಅದರ ವರದಿಯ ತರಿಸಿಕೊಂಡು ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸುಮಾರು ಹಲವಾರು ವರ್ಷಗಳಿಂದ ಸುಮಾರು 5000 ಸಾವಿರ ಎಕರೆಯಷ್ಟು ರೈತರು ವ್ಯವಸಾಯ ಮಾಡುತ್ತಿದ್ದು ಇದಕ್ಕೆ ಯಾವುದೇ ರೀತಿಯ ಹಕ್ಕು ಪತ್ರಗಳು ಇಲ್ಲದಿರುವುದರಿಂದ ಅದಕ್ಕೆ ಬೇಕಾಗುವ ದಾಖಲೆಗಳನ್ನು ಒದಗಿಸಿ ಕೊಡಲು ಕ್ರಮ ಕೈಗೊಳ್ಳಲಾಗುವುದು. ಇದೇ ದಂಟಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿ ಹಾಗೂ ಸುಮಾರು ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಬೇಕಾಗಿರುವ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಶಿವಣ್ಣ, ವೆಂಕಟಪ್ಪ, ಲಕ್ಷ್ಮಣ, ಶಿವು,ಮಹಾದೇವಪ್ಪ, ಹರೀಶ್, ನಾಗರಾಜು, ಚಿನ್ನವೆಂಕಟ, ಕೃಷ್ಣ, ರಂಗಶೆಟ್ಟಿ, ವಸಂತ, ಡಿಕೆ ರಾಜು, ತಂಗವೇಲು, ರಾಜು ಉಪಸ್ಥಿತರಿದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ