ಹೊಸಕೋಟೆ: ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅನುದಾನ ಒದಗಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಕೆಕೆ ಬಡಾವಣೆಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ನೂತನ ಕೊಳವೆಬಾವಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ವಾರ್ಡ್‌ಗಳಲ್ಲಿ ಸೌಕರ್ಯ ಕಲ್ಪಿಸಲು ಕೋಟ್ಯಂತರ ರು. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡದೆ ತ್ವರಿತವಾಗಿ ಪೂರ್ಣಗೊಳಿಸಿ ಗುಣಮಟ್ಟಕ್ಕೆ ಮುಂದಾಗಬೇಕು ಎಂದರು.ಕೆಕೆ ಬಡಾವಣೆಯಲ್ಲಿ ಮಳೆ ಬಂದಾಗ ನೀರು ಸರಾಗವಾಗಿ ಹರಿಯಲಾಗದೆ ಮನೆಗಳಿಗೆ ನುಗ್ಗುವ ಬಗ್ಗೆ ನಾಗರಿಕರು ಶಾಸಕ ಶರತ್ ಬಚ್ಚೇಗೌಡರ ಗಮನ ಸೆಳೆದರು. ಅದಕ್ಕೆ ಮಳೆ ನೀರನ್ನು ವರದಾಪುರ ಕೆರೆಗೆ ಸೇರುವಂತೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಈ ವೇಳೆ ಉದ್ಯಮಿ ಬಿವಿ ಬೈರೇಗೌಡ, ಮುಖಂಡರಾದ ಡಾ.ಎಚ್.ಎಂ. ಸುಬ್ಬರಾಜ್, ಡಿಸಿ ನಾಗರಾಜ್, ನಿಸಾರ್ ಅಹಮದ್, ಹರೀಶ್ ಗೌಡ, ಮೋಹನ್ ಬಾಬು, ಕುಮಾರ್, ಸವಿತಾ ಶ್ರೀನಿವಾಸ್, ಪುಷ್ಪಮ್ಮ, ಸಾವಿತ್ರಿ, ಪವಿತ್ರ, ಗುತ್ತಿಗೆದಾರ ಈರಣ್ಣ, ತಗ್ಲಿ ನಾರಾಯಣಸ್ವಾಮಿ ಇತರರು ಹಾಜರಿದ್ದರು.ಬಾಕ್ಸ್ ...........ಕಾಂಗ್ರೆಸ್ ಶಾಸಕರಲ್ಲಿ ಒಗ್ಗಟ್ಟಿನ ಬಲವಿದೆ
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಉಪೇಂದ್ರರೆಡ್ಡಿ ಅವರು ಸೋಲನುಭವಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಬಳಿ ಗೆಲುವಿಗೆ ಅಗತ್ಯ ಶಾಸಕರ ಸಂಖ್ಯಾಬಲ ಇಲ್ಲದಿದ್ದರೂ ಕುಪೇಂದ್ರ ರೆಡ್ಡಿ ಅವರನ್ನ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಸೋಲನುಭಸುವಂತಾಯಿತು. ಆದರೆ ಕಾಂಗ್ರೆಸ್ ಪಕ್ಷದಿಂದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಮೇಲಿನ ವಿಶ್ವಾಸವನ್ನ ಕಾಂಗ್ರೆಸ್ ಶಾಸಕರು ಎಂದಿಗೂ ಕಳೆದುಕೊಂಡಿಲ್ಲ. ಬದಲಾಗಿ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ಫೋಟೋ : 29 ಹೆಚ್‌ಎಸ್‌ಕೆ 2
ಹೊಸಕೋಟೆಯ ಕೆಕೆ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.