ಝೂಂಬಿ ಡ್ರಗ್ಸ್ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕ್ರಮ : ಸಿಂಗ್ ಎಚ್ಚರಿಕೆ

KannadaprabhaNewsNetwork |  
Published : Apr 10, 2026, 01:30 AM ISTUpdated : Apr 10, 2026, 10:13 AM IST
Seemant Kumar Singh

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ‘ಝೂಂಬಿ’ ಡ್ರಗ್ಸ್ ಸೇವನೆ ಎಂದು ಸುಳ್ಳು ಸುದ್ದಿ ಪ್ರಚಾರ ನಡೆಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ‘ಝೂಂಬಿ’ ಡ್ರಗ್ಸ್ ಸೇವನೆ ಎಂದು ಸುಳ್ಳು ಸುದ್ದಿ ಪ್ರಚಾರ ನಡೆಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ವೈರಲ್

ಇತ್ತೀಚಿಗೆ ಬಾಗಲೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಅರೆಪ್ರಜ್ಞಾನಾಗಿ ನಡೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸಿ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ವಿಡಿಯೋದಲ್ಲಿರುವ ವ್ಯಕ್ತಿ '''''ಝಾಂಬಿ'''''  ಡ್ರಗ್ಸ್ ತೆಗೆದುಕೊಂಡು ಆ ರೀತಿ ವರ್ತಿಸುತ್ತಿದ್ದಾನೆ ಎಂಬ ಕೆಲವರು ಶಂಕೆ ವ್ಯಕ್ತಪಡಿಸಿದ್ದರು. ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಸಂಸ್ಥೆ ಸಮೀಪ ಆ ವಿಡಿಯೋದಲ್ಲಿ ವ್ಯಕ್ತಿಯನ್ನು ಪತ್ತೆ ಹಚ್ಚಿ ಪೊಲೀಸರು ವೈದ್ಯಕೀಯ ಪರೀಕ್ಷೆಗೊಳಪಡಿಸಿದರು. ಆತನ ತಪಾಸಣೆ ನಡೆಸಿದ ವೈದ್ಯರು, ಆ ವ್ಯಕ್ತಿಯು ಯಾವುದೇ ಮಾದಕ ವಸ್ತು ಅಥವಾ ಮನೋಪ್ರೇರಕ ಪದಾರ್ಥಗಳನ್ನು ಸೇವಿಸಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.

ನೋವು ನಿವಾರಕ ಔಷಧಿಗಳೊಂದಿಗೆ ಮದ್ಯ ಸೇವಿಸಿದ್ದರು

ವಿಚಾರಣೆ ವೇಳೆ ಆ ವ್ಯಕ್ತಿಗೆ ಸಂಧಿವಾತ (ಅರ್ಥೈಟಿಸ್‌) ಇರುವುದು ಗೊತ್ತಾಯಿತು. ವೈದ್ಯರು ನೀಡಿದ ನೋವು ನಿವಾರಕ ಔಷಧಿಗಳೊಂದಿಗೆ ಮದ್ಯ ಸೇವಿಸಿದ್ದರು. ಇದರಿಂದ ಆತ ಒಂದೇ ಕಡೆ ನಿಂತಿರುವ ಸ್ಥಿತಿಯಲ್ಲಿರುವಂತೆ ವಿಡಿಯೋದಲ್ಲಿ ಗೋಚರವಾಗಿತ್ತು. ಕಳೆದ ಮೂರು ತಿಂಗಳಿಂದ ನಗರದಲ್ಲಿ ಆತ ನೆಲೆಸಿದ್ದಾನೆ ಎಂದು ವಿವರಿಸಿದ್ದಾರೆ.

ಝೂಂಬಿ ಡ್ರಗ್ಸ್ ಸೇವನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡಲಾಗಿದೆ. ಈ ರೀತಿಯ ಅಪ ಪ್ರಚಾರ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕೊಲೆ ಕೇಸಲ್ಲಿ ಮಹಿಳೆ ಎಂಬ ಕಾರಣಕ್ಕೆ ಮಾತ್ರ ಬೇಲ್‌ ನೀಡಲಾಗುವುದಿಲ್ಲ: ಹೈಕೋರ್ಟ್‌
ಬೆಂಜ್ ಕಾರಲ್ಲಿ ಯುವಕನ ಕಿಡ್ನಾಪ್‌ ಮಾಡಿದ್ದ 6 ಆರೋಪಿಗಳ ಬಂಧನ