ಮಾನವ ದಿನಗಳ ಸೃಜನೆ ಮಾಡದಿದ್ದರೇ ಕ್ರಮ: ಜಿಪಂ ಸಿಇಒ

KannadaprabhaNewsNetwork |  
Published : Oct 10, 2026, 02:15 AM IST
9 ರೋಣ 1.   ತಾಲೂಕ ಪಂಚಾಯತ ಸಭಾ ಭವನದಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಮಾತಮಾಡಿದರು. | Kannada Prabha

ಸಾರಾಂಶ

ವಿಬಿಜಿ-ರಾಮ್‌ಜಿ ಯೋಜನೆಯಡಿ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ತುಂಬಾ ಕಡಿಮೆಯಿದ್ದು, ಮಾನವ ದಿನಗಳ ಸೃಜನೆಗೆ ಒತ್ತು ಕೊಟ್ಟು ಜನರಿಗೆ ಕೆಲಸ ಕೊಡದಿದ್ದರೆ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ರೋಣ

ವಿಬಿಜಿ-ರಾಮ್‌ಜಿ ಯೋಜನೆಯಡಿ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ತುಂಬಾ ಕಡಿಮೆಯಿದ್ದು, ಮಾನವ ದಿನಗಳ ಸೃಜನೆಗೆ ಒತ್ತು ಕೊಟ್ಟು ಜನರಿಗೆ ಕೆಲಸ ಕೊಡದಿದ್ದರೆ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ವಿಬಿಜಿ-ರಾಮ್‌ಜಿ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶುಕ್ರವಾರ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ವಿಬಿಜಿ-ರಾಮ್‌ಜಿ ಯೋಜನೆಯಡಿ ವರ್ಷದಲ್ಲಿ 125 ದಿನಗಳು ಜನರಿಗೆ ಕೆಲಸ ಕೊಡಲು ಸಾಕಷ್ಟು ಅವಕಾಶಗಳು ಇವೆ, ಏಕೆ ನೀವು ಆ ಅವಕಾಶಗಳನ್ನು ಜನರಿಗೆ ತಲುಪಿಸುತ್ತಿಲ್ಲ, ಯಾವುದೇ ನೆಪ ಹೇಳದೇ ಜನರಿಗೆ ಕೆಲಸ ಒದಗಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಯೋಜನೆಯಡಿ ಕೆಲಸ ಕೊಡಬೇಕು ಎಂದು ಸೂಚನೆ ನೀಡಿದರು.

ಇನ್ನು ಕೆಲಸ ಕೊಡದೇ ಇರಲು ಕಾರಣಗಳನ್ನು ಏನು? ಯಾಕೆ? ಎಂದು ಕೆಲವು ಪಿಡಿಒಗಳನ್ನು ಕೇಳಿದ ಅವರು, ಸಾಮೂಹಿಕ ಕಾಮಗಾರಿಗಳು ತಮ್ಮ ಗ್ರಾಪಂ ಕ್ರಿಯಾ ಯೋಜನೆಯಲ್ಲಿ ಇಲ್ಲದೇ ಹೋದರೆ ಕಾಮಗಾರಿಗಳನ್ನು ಗುರುತಿಸಿ ಹೆಚ್ಚುವರಿ ಕ್ರಿಯಾ ಯೋಜನೆಯನ್ನು ತಯಾರಿಸಿ ಕೊಡಿ, ಅದಕ್ಕೆ ಅನುಮೋದನೆ ದೊರೆತ ಕೂಡಲೇ ಕೆಲಸವನ್ನು ಪ್ರಾರಂಭಿಸಲು ಸೂಚನೆ ನೀಡಿದರು.

ಪಂಚಾಯತ್‌ ರಾಜ್ ಇಲಾಖೆ ಎಇಇ ಪುರೋಹಿತಗೆ ಗ್ರಾಪಂ ನೂತನ ಕಟ್ಟಡ ವಿಚಾರವಾಗಿ ಎಸ್ಟಿಮೇಟ್ ತಯಾರಿಸದ ಹಿನ್ನೆಲೆ ಗರಂ ಆಗಿ, ಇಲ್ಲಸಲ್ಲದ ಕಾರಣ ಹೇಳದೇ ನೀತಿ ಸಂಹಿತೆ ಬಳಿಕ ಟೆಂಡರ್ ಕರೆದು ಕೆಲಸ ಪ್ರಾರಂಭಿಸಯವಂತೆ ತಿಳಿಸಿದರು. ಇನ್ನು ಮಲ್ಲಾಪೂರ ಗ್ರಾಮದಲ್ಲಿ ಕೆಲಸ ಕೊಡದೇ ಇರುವ ಪಿಡಿಓ ಲಕ್ಷ್ಮೀ ಗೋಡಿ ಅವರಿಗೆ ಕಾರಣ ಕೇಳಿದ ಅವರು ನೀವು ಬಂದಾಗಿನಿಂದ ಶೂನ್ಯ ಮಾನವ ದಿನಗಳು ಸೃಜನೆ ಆಗಿವೆ ಅಂತಾ ಗರಂ ಆದರು. ಗ್ರಾಪಂ ಮಟ್ಟದಲ್ಲಿ ಗ್ರಾಮ ಸಭೆಗಳನ್ನು (ನೀತಿಸಂಹಿತೆ) ಮುಗಿದ ಬಳಿಕ ನಿಯಮಾನುಸಾರ ಮಾಡಿ ಪಂಚತಂತ್ರದಲ್ಲಿ ಅಳವಡಿಸಲು ಸೂಚಿಸಿದರು.

ಇನ್ನುಳಿದ ವಿಷಯಗಳ ಕುರಿತು ಪರಿಶೀಲನೆ ನಡೆಸಿದ ಅವರು ಸಂಜೀವಿನಿ ಯೋಜನೆ, ಹೌಸಿಂಗ್, ಬಿ.ಆರ್.ಎಸ್, ವಸತಿ ಯೋಜನೆ, ಸಕಾಲ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಒಂದು ವಾರದ ಒಳಗೆ ಪ್ರಗತಿ ಸಾಧಿಸಲು ಸೂಚನೆ ನೀಡಿದರು.

ಈ ಸಂದರ್ಭ ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ಯೋಜನಾ ನಿರ್ದೇಶಕ ಎಂ.ವ್ಹಿ. ಚಳಗೇರಿ, ರೋಣ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ, ತಾಪಂ ಸಹಾಯಕ ಲೆಕ್ಕಾಧಿಕಾರಿ ದೇವರಾಜ್ ಸಜ್ಜನಶೆಟ್ಟರ, ತಾಲೂಕು ಯೋಜನಾಧಿಕಾರಿ ಸಿ.ಎಸ್. ನಿಲಗುಂದ, ತಾಲೂಕಿನ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿಗಳು, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ಅಧಿಕಾರಿಗಳು ಸೇರಿ ತಾಲೂಲು ವಿಬಿಜಿ-ರಾನ್‌ಜಿ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು, ಕೂಲಿ ಕಾರ್ಮಿಕರು ಹಾಜರಿದ್ದರು. ಗ್ರಾಪಂ ಸಹಾಯಕ ನಿರ್ದೇಶಕ ಶಿವನಗೌಡ ಮೆಣಸಗಿ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡು ಕಂಡ ಅಪ್ರತಿಮ ಶಿವಯೋಗಿಗಳಲ್ಲಿ ಕುಮಾರ ಶಿವಯೋಗಿಗಳು ಒಬ್ಬರು: ಶೇಖರಯ್ಯ ಶಾಸ್ತ್ರೀಗಳು
ಬೆಣಚಮಟ್ಟಿ ಗ್ರಾಮದ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ