ಕನ್ನಡಪ್ರಭ ವಾರ್ತೆ ಕಾಗವಾಡ
ಭಾನುವಾರ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದ ಯುವ ಉದ್ಯಮಿ ಬಾಳಾಸಾಹೇಬ ಧೋತ್ರೆ ದಂಪತಿ ಬಿಜೆಪಿ ಸೇರ್ಪಡೆ ಮತ್ತು ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದರು. ನರೇಂದ್ರ ಮೋದಿಯವರ ಕಾರ್ಯ ಮೆಚ್ಚಿ ದಲಿತ ಯುವ ಉದ್ಯಮಿ ಬಾಳಾಸಾಹೇಬ ಧೋತ್ರೆ ದಂಪತಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರ ಸೇರ್ಪಡೆಯಿಂದ ಕಾಗವಾಡ ಮಂಡಲದಲ್ಲಿ ಬಲಗೊಳ್ಳಲಿದೆ. ಕಾಂಗ್ರೆಸ್ ಪದೇ ಪದೆ ಬಿಜೆಪಿಗೆ ದಲಿತ ವಿರೋಧಿ ಪಟ್ಟ ಕಟ್ಟುತ್ತಿದ್ದು, ಇಂದಿನ ಕಾರ್ಯಕ್ರಮದಲ್ಲಿ ಸಾವಿರಾರು ದಲಿತ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿರುವುದು ದಲಿತರ ಪರವಾಗಿ ಯಾರು ಇದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಮಾತನಾಡಿ, ಬಾಳಾಸಾಹೇಬ ಧೋತ್ರೆ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಕಾಗವಾಡ ಮಂಡಲದ ಎಸ್‌ಸಿ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದರು.ನಿಂಗಪ್ಪ ಖೋಖಲೆ, ಶಿವಾನಂದ ಪಾಟೀಲ, ಅಮೃತ ಕುಲಕರ್ಣಿ, ಅಭಯಕುಮಾರ ಅಕಿವಾಟೆ, ಮಹಾವೀರ ಕಾತ್ರಾಳೆ, ಭಮ್ಮಣ್ಣ ಚೌಗುಲೆ, ದಿವ್ಯಾ ಧೋತ್ರೆ, ಶಿವಾನಂದ ನವಿನಾಳೆ, ಉತ್ಕರ್ಷ ಪಾಟೀಲ, ವಿದ್ಯಾಧರ ಮೌರ್ಯ ಸೇರಿದಂತೆ ಬಿಜೆಪಿ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.