ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಿ: ಶಾಸಕ ಕಂದಕೂರ

KannadaprabhaNewsNetwork | Published : May 6, 2024 12:37 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗುವುದು ಖಚಿತ, ಸಂಸದರಾಗಿ ಡಾ. ಜಾಧವ ಆಯ್ಕೆಯಾದರೆ ಇಬ್ಬರೂ ಹಿಂದುಳಿದ ಗುರುಮಠಕಲ್ ಮತಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಲೋಕಸಭಾ ಚುನಾವಣೆಯಲ್ಲಿ ಗುರುಮಠಕಲ್ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಡಾ. ಉಮೇಶ ಜಾಧವ ಅವರನ್ನು ಗೆಲ್ಲಿಸಲು ಶ್ರಮಿಸಬೇಕೆಂದು ಗುರುಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಮನವಿ ಮಾಡಿದರು.

ಭಾನುವಾರ ಗುರುಮಠಕಲ್ ಪಟ್ಟಣದ ಖಾಸಾಮಠದ ಆವರಣದಿಂದ ಬಿಜೆಪಿ ಅಭ್ಯರ್ಥಿ ಡಾ. ಜಾಧವ ಜೊತೆಗೂಡಿ, ಬೈಕ್ ರ‍್ಯಾಲಿ ನಡೆಸಿ, ನಂತರ ಅವರ ಜನಸಂಪರ್ಕ ಕಚೇರಿ ಆವರಣದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ, ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಜೆಡಿಎಸ್ ಪಕ್ಷವು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ ಎಂದರು.

ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಯ್ಕೆಯಾಗುತ್ತಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗುವುದು ಖಚಿತ, ಸಂಸದರಾಗಿ ಡಾ. ಜಾಧವ ಆಯ್ಕೆಯಾದರೆ ಇಬ್ಬರೂ ಹಿಂದುಳಿದ ಗುರುಮಠಕಲ್ ಮತಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲಿದ್ದಾರೆ. ನಾವು ಈ ಭಾಗದಲ್ಲಿ ಯಾರನ್ನು ಬೆಂಬಲಿಸುತ್ತೇವೆಯೋ ಅವರು ಆಯ್ಕೆಯಾಗುತ್ತಾರೆ ಎಂದರು.

ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಮಾತನಾಡಿ, ದೇಶದ ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯದ ಹಾಗೂ ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ದೇಶದ ಒಳಿತಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವದರಿಂದ ಕಲಬುರಗಿ ಕ್ಷೇತ್ರದಲ್ಲಿ ನನಗೆ ಶಕ್ತಿ ಬಂದಿದೆ. ನೀವೆಲ್ಲರೂ ಚುನಾವಣೆಯಲ್ಲಿ ಮರು ಆಯ್ಕೆ ಮಾಡಿದರೆ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.

ಬೆಳ್ತಂಗಡಿ ಶಾಸಕ ಹರೀಶ ಪೂಂಜಾ, ಜೆಡಿಎಸ್ ಮುಖಂಡರಾದ ಜಿ. ತಮ್ಮಣ್ಣ, ಅಜಯರಡ್ಡಿ ಯಲ್ಹೇರಿ, ರಾಜಾ ರಮೇಶಗೌಡ, ಪ್ರಕಾಶ ನೀರಟ್ಟಿ, ಬಸಣ್ಣ ದೇವರಹಳ್ಳಿ, ಪಾಪಣ್ಣ ಮನ್ನೆ, ರವಿ ಪಾಟೀಲ್ ಹತ್ತಿಕುಣಿ, ಸುಭಾಶ್ಚಂದ್ರ ಕಟಕಟಿ ಹೊನಗೇರಾ, ಅನೀಲಕುಮಾರ ಹೆಡಗಿಮದ್ರಾ, ಚಂದ್ರುಗೌಡ ಸೈದಾಪೂರ, ನರಸಪ್ಪ ಕವಡೆ, ಈಶ್ವರ ನಾಯಕ, ಮಾರ್ಥಾಂಡಪ್ಪ ಮಾನೇಗಾರ, ಶರಣು ಆವಂಟಿ, ಬಂದಪ್ಪಗೌಡ ಲಿಂಗೇರಿ, ಗುರುನಾಥ ತಲಾರಿ, ರಮೇಶ ಹೂಗಾರ, ವಿಜಯ ಇಡ್ಲೂರ, ಸುಭಾಷ ಜಾಕಾ ಮಗದಂಪೂರ, ಭೀಮಶಪ್ಪ ಗುಡಸೆ, ಬಾಲು ದಾಸರಿ, ವಿಜಯ ಜಿನಕೇರಾ ತಾಂಡಾ ಇತರರಿದ್ದರು.

Share this article