ನಟ ಪುನೀತ್‌ ನಮ್ಮೊಂದಿಗೆ ಸದಾ ಜೀವಂತ: ಪುರಸಭೆ ಅಧ್ಯಕ್ಷಆರ್‌. ಅಶೋಕ್

KannadaprabhaNewsNetwork |  
Published : Mar 21, 2025, 12:35 AM IST
19ಎಚ್ಎಸ್ಎನ್4 : ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಡಾ. ರಾಜಕುಮಾರ್ ಸಂಘದ ವತಿಯಿಂದ ಬೇಲೂರು  ಬಸವೇಶ್ವರ ವೃತ್ತದ ರಾಜಕುಮಾರ್ ವೃತ್ತ  ಮುಂಭಾಗ ಹುಟ್ಟುಹಬ್ಬ ಆಚರಣೆ ಹಾಗೂ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಪುನೀತ್ ರಾಜಕುಮಾರ್ ದೈಹಿಕವಾಗಿ ಕಣ್ಮರೆಯಾಗಿದ್ದರೂ ಮಾನಸಿಕವಾಗಿ ಇಂದಿಗೂ ನಮ್ಮೆಲ್ಲರ ಜೊತೆಗಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಆರ್‌. ಅಶೋಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪುನೀತ್ ರಾಜಕುಮಾರ್ ದೈಹಿಕವಾಗಿ ಕಣ್ಮರೆಯಾಗಿದ್ದರೂ ಮಾನಸಿಕವಾಗಿ ಇಂದಿಗೂ ನಮ್ಮೆಲ್ಲರ ಜೊತೆಗಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಆರ್‌. ಅಶೋಕ್ ಹೇಳಿದರು.

ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಅಂಗವಾಗಿ ಡಾ. ರಾಜಕುಮಾರ್ ಸಂಘದ ವತಿಯಿಂದ ಬಸವೇಶ್ವರ ವೃತ್ತದ ಮುಂಭಾಗ ಹುಟ್ಟುಹಬ್ಬ ಆಚರಣೆ ಮತ್ತು ಅನ್ನದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸುತ್ತಿದ್ದು, ಅವರು ನಮ್ಮ ಜೊತೆ ಇಲ್ಲ ಎಂಬುದು ಅಷ್ಟೇ ದುಃಖಕರವಾಗಿದೆ. ಆದರೆ ಅವರು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರು ಇಂದು ಬದುಕಿದ್ದರೆ ಇನ್ನೂ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದರು. ಅವರ ಆದರ್ಶ ಗುಣಗಳನ್ನು ನಾವು ಯಾವತ್ತಿಗೂ ಮರೆಯಬಾರದು. ಅವರ ಹಾದಿಯಲ್ಲಿ ಇಂದಿನ ಜನಾಂಗ ಸಾಗಬೇಕಿದೆ. ಪಟ್ಟಣದ ಪುರಸಭೆ ಪಕ್ಕ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ಇಡಲು ನಾವು ಈಗಾಗಲೇ ಜಾಗವನ್ನು ಗುರುತಿಸಿ ಅಲ್ಲಿ ಗುದ್ದಲಿ ಪೂಜೆಯನ್ನು ಕೂಡ ಮಾಡಿದ್ದೇವೆ. ಇನ್ನೇನು ಜಾತ್ರೆ ಒಳಗಡೆ ಪುರಸಭೆ ವತಿಯಿಂದ ಪುತ್ಥಳಿ ನಿರ್ಮಿಸಲಾಗುವುದು. ಹಿಂದಿನ ಅಧ್ಯಕ್ಷರಾಗಿದ್ದ ತೀರ್ಥ ಕುಮಾರಿ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಪುತ್ಥಳಿ ಜಾಗ ಗುರುತು ಮಾಡಿದ್ದು, ಸಮಯದ ಅಭಾವದಿಂದ ಅದು ನೆರವೇರಲಿಲ್ಲ. ಇದಕ್ಕೆ ಸಂಘ- ಸಂಸ್ಥೆಗಳು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ, ರಾಜಕುಮಾರ್ ಸಂಘ ಹಾಗೂ ಪುರಸಭೆ ಸದಸ್ಯರ ಜೊತೆ ಚರ್ಚಿಸಿ ಸಮಯ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಸಾಕಷ್ಟಿದ್ದು, ಅವರು ಮಾಡಿದ ಸಾಧನೆಗಳು ಅಮೋಘವಾಗಿವೆ. ಅಂತಹ ಒಬ್ಬ ಸರಳ ಜೀವಿಯನ್ನು ನಾವು ಕಳೆದುಕೊಂಡಿರುವುದು ದುರದೃಷ್ಟಕರ. ಆದಷ್ಟು ಬೇಗ ಇಲ್ಲಿ ಪುನೀತ್ ರಾಜಕುಮಾರ್ ಅವರ ಪುತ್ಥಳಿ ಇಟ್ಟು ಅವರ ನೆನಪನ್ನು ಜನಮಾನಸದಲ್ಲಿ ಶಾಶ್ವತವಾಗಿ ಉಳಿಸಬೇಕೆಂದು ಹೇಳಿದರು.

ಪುರಸಭೆ ಸದಸ್ಯ ಬಿ.ಸಿ. ಜಗದೀಶ್ ಮಾತನಾಡಿ, ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಸುಮಾರು ಮೂರು ವರ್ಷಗಳು ಕಳೆದಿವೆ. ಅದನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ಈಗಿನ ಪುರಸಭಾ ಅಧ್ಯಕ್ಷರು ಆಸಕ್ತಿ ವಹಿಸಿ ಆದಷ್ಟು ಬೇಗ ಇಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿಯನ್ನು ಇಡಬೇಕೆಂದು ಮನವಿ ಮಾಡಿದರು.

ಈ ವೇಳೆ ಬಂದಂತಹ ಅಭಿಮಾನಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಪುರಸಭೆ ಸದಸ್ಯರಾದ ಅಶೋಕ್, ಪ್ರಭಾಕರ್, ಸುಬ್ರಹ್ಮಣ್ಯ , ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ತೀರ್ಥಂಕರ್, ಡಾ. ಪುನೀತ್ ರಾಜಕುಮಾರ್ ಸಂಘದ ಅಧ್ಯಕ್ಷ ರವೀಂದ್ರ, ಫಣೀಂದ್ರ, ಎಸ್‌ ಬಿಐ ಮಂಜು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ