ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಟ ಪುನೀತ್ ಅವರು ನಮ್ಮನ್ನು ಅಗಲಿ 4 ವರ್ಷಗಳಾಗಿವೆ. ಅವರ ನೆನಪು ಮಾತ್ರ ನೂರು ವರ್ಷ ಇರುತ್ತದೆ ಎಂದರು.
ದೊಡ್ಡ ಮನೆಯಲ್ಲಿ ಹುಟ್ಟಿ ಬೆಳೆದು ಅವರು ಮಾಡಿರುವ ನೂರಾರು ಸತ್ಕಾರ್ಯಗಳು ಜನರಲ್ಲಿ ಉಳಿದಿವೆ. ಅಭಿಮಾನಿಗಳಾದ ನಾವುಗಳು ಅವರ ನೆನಪುಗಳ ಮೂಲಕ ಮುನ್ನೆಡಲು ಮುಂದಾಗಿದ್ದೇವೆ. ಬಡ ಜನರ ಪರವಾಗಿ ನಿಲ್ಲುವ ಕೆಲಸ ಮಾಡುತ್ತೇವೆ. ಇದರಿಂದ ಪುನೀತ್ ಅವರ ಆತ್ಮಕ್ಕೂ ಸಮಾಧಾನ ತರುತ್ತದೆ ಎಂದರು.ಇದಕ್ಕೂ ಮುನ್ನ ನಟ ಪುನೀತ್ ಅಭಿಮಾನಿಗಳು ಪುನೀತ್ ಅವರ ಭಾವಚಿತ್ರ ವಿರಿಸಿ, ಪುಷ್ಪಾಲಂಕಾರ ಮಾಡಿ, ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸೇರಿದಂತೆ ನೂರಾರು ಮಂದಿಗೆ ಪ್ರಸಾದ ವಿತರಿಸಿದರು.
ಇಂದಿನಿಂದ ಶ್ರೀಕಾಳಮ್ಮ, ಶ್ರೀಮಾರಮ್ಮ ದೇವರ ಕಳಸ ಪ್ರತಿಷ್ಠಾಪನೆ
ನಗರದ ಸ್ವರ್ಣಸಂದ್ರದ ಶ್ರೀಕಾಳಮ್ಮ ಮತ್ತು ಶ್ರೀಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ನೂತನ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗೂ ನೂತನ ಕಳಸ ಪ್ರತಿಷ್ಠಾಪನಾ ಕುಂಭಾಭಿಷೇಕ ಸಮಾರಂಭ ಅ.೩೦ ಹಾಗೂ ೩೧ರಂದು ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಅ.೩೧ರಂದು ಕಲಶ ಪ್ರತಿಷ್ಠೆ ಕಲಶಾರಾಧನೆ, ಗಣಹೋಮ, ನಿತ್ಯಹೋಮ, ಮೂರ್ತಿಹೋಮ, ಪ್ರತಿಷ್ಠಾಂಗ ಹೋಮ, ದುರ್ಗಾಹೋಮ, ಮಹಾಪೂರ್ಣಾಹುತಿ, ಕುಂಭ ಉದ್ವಾಸನೆ ನಡೆಯಲಿದೆ.
ಅದೇ ದಿನ ಸಂಜೆ ೬ ಗಂಟೆಗೆ ನಡೆಯುವ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಹಿಸುವರು. ಉದ್ಘಾಟನೆಯನ್ನು ಶಾಸಕ ಪಿ.ರವಿಕುಮಾರ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮಹಿಳಾಧ್ಯಕ್ಷೆ ಎಚ್.ಬಿ.ಶುಭದಾಯಿನಿ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಸೇರಿದಂತೆ ಇತರರು ಭಾಗವಹಿಸುವರು.