ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ತಮ್ಮಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರ 50ನೇ ಜನ್ಮದಿನದ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿ, ತಮ್ಮ ಚಲನಚಿತ್ರಗಳ ಮೂಲಕ ಯುವ ಸಮೂಹಕ್ಕೆ ಆಕರ್ಷಿಕರಾಗಿದ್ದ ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಕಾರ್ಯಗಳು ಜನಪ್ರಿಯವಾಗಿದ್ದವು ಎಂದರು.
ಪುನೀತ್ ಮತೊಮ್ಮೆ ನಮ್ಮ ನಾಡಿನಲ್ಲಿ ಹುಟ್ಟಿ ಬರಬೇಕು. ಚಿಕ್ಕ ವಯಸ್ಸಿನಿಂದಲೂ ಚಿತ್ರರಂಗದಲ್ಲಿ ಅಭಿನಯಿಸಿ ಜನರ ಮನಸ್ಸು ಗೆದ್ದಿದ್ದರು. ಅವರು ಬದುಕಿಲ್ಲದಿದ್ದರೂ ಎಲ್ಲರ ಆತ್ಮದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.ಸಿದ್ದಪ್ಪಾಜಿ ಸೇವಾ ಸಮಿತಿ ಜವರಾಯ, ಶಿವಕುಮಾರ್, ಟಿ.ಸಿ.ಪ್ರಕಾಶ್, ಅಂಗಡಿಸಿದ್ದು, ಕುಮಾರ್, ಸಿದ್ದರಾಜು, ನಾಗಣ್ಣ, ಹುಚ್ಚಯ್ಯ, ಬೆಳ್ಳಪ್ಪ, ಲೋಕೇಶ್, ಸಿದ್ದಪ್ಪ, ಟಿ.ಬಿ.ನಾಗರಾಜು, ಆರತಿ, ನಾಗರತ್ನಮ್ಮ, ಸುಬ್ಬಣ್ಣ, ಅನಿತಾ ಪಾಲ್ಗೊಂಡಿದ್ದರು.
ಶುಕ್ರವಾರ ಪಟ್ಟಣದ ಆನಂತ್ ರಾಂ ವೃತ್ತದ ಬಳಿ ರಾ.ಶಿ.ರಾ.ಪು ಸಂಘದಿಂದ ನಡೆದ ನಟ ದಿ.ಪುನೀತ್ ರಾಜ್ ಕುಮಾರ್ ಜನ್ಮದಿನಾಚರಣೆಯಲ್ಲಿ ಪುರಸಭೆ ಉಪಾಧ್ಯಕ್ಷ ಎನ್.ಬಸವರಾಜು ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರು ಚಿತ್ರನಟರಾಗಿದ್ದು ಕೊಂಡೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದು ಶ್ಲಾಘಿಸಿದರು.
ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಪುನೀತ್ ರಾಜ್ ಕುಮಾರ್ ಕೇವಲ ನಟರಾಗಿರಲಿಲ್ಲ. ಬದಲಾಗಿ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಾಡಿನ ಯುವ ಸಮೂಹಕ್ಕೆ ಸ್ಪೂರ್ತಿಯಾಗಿದ್ದರು ಎಂದರು.
ಇದೇ ವೇಳೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಾಜಣ್ಣ, ಪರಿಸರ ಪ್ರೇಮಿ ಸಾಲುಮರದ ನಾಗರಾಜು ಅವರನ್ನು ಅಭಿನಂದಿಸಲಾಯಿತು. ಸಾರ್ವಜನಿಕರಿಗೆ ಅನ್ನಸಂಪರ್ತಣೆ ನಡೆಯಿತು. ಕಾರ್ಯಕ್ರಮದಲ್ಲಿದ್ದ ಗಣ್ಯರು ಪುನೀತ್ ರಾಜ್ ಕುಮಾರ್ ಪೂಜೆ ಸಲ್ಲಿಸಿದರು.