ಚಳ್ಳಕೆರೆ:ಅಪ್ರಾಪ್ತ ಬಾಲಕಿಯನ್ನು ಬಲವಂತದಿಂದ ಕರೆದೊಯ್ದು ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ತಾಲೂಕಿನ ರಂಗವ್ವನಹಳ್ಳಿ ಗ್ರಾಮದ ಕಾರುಚಾಲಕ ಪಿ.ಪವನ್(೨೮) ಅದೇ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವ ಆಮಿಷವೊಡ್ಡಿ ಬಲವಂತದಿಂದ ವಾಹನವೊಂದರಲ್ಲಿ ಕರೆದೊಯ್ದು ಆಕೆಯ ಮೇಲೆ ದೈಹಿಕ ಸಂಪರ್ಕ ನಡೆಸಿದ ಹಿನ್ನೆಲೆಯಲ್ಲಿ ನೊಂದ ಬಾಲಕಿಯ ಅಜ್ಜಿ ಬಜ್ಜಮ್ಮ ದೂರು ನೀಡಿದ್ದು, ಪಿಎಸ್‌ಐ ಜೆ.ಶಿವರಾಜ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಪಿ.ಪವನ್‌ನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.