ಇಂದು ನಟಿ ಲೀಲಾವತಿ ದೇಗುಲ ಉದ್ಘಾಟನೆ

KannadaprabhaNewsNetwork | Published : Dec 5, 2024 12:32 AM

ಸಾರಾಂಶ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕನ್ನಡದ ಮೇರು ನಟಿ ಡಾ. ಲೀಲಾವತಿ ಅವರ ಸ್ಮರಣಾರ್ಥ ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಕಲಾತ್ಮಕ ಭವ್ಯ ಮಂದಿರ(ಸಮಾಧಿ) ಡಿ.5ರಂದು ಗುರುವಾರ ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲೋಕಾರ್ಪಣೆಯಾಗಲಿದೆ ಎಂದು ವಿನೋದ್‌ರಾಜ್‌ ಹೇಳಿದರು.

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕನ್ನಡದ ಮೇರು ನಟಿ ಡಾ. ಲೀಲಾವತಿ ಅವರ ಸ್ಮರಣಾರ್ಥ ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಕಲಾತ್ಮಕ ಭವ್ಯ ಮಂದಿರ(ಸಮಾಧಿ) ಡಿ.5ರಂದು ಗುರುವಾರ ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲೋಕಾರ್ಪಣೆಯಾಗಲಿದೆ ಎಂದು ವಿನೋದ್‌ರಾಜ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಶಾಸಕ ಎನ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ, ಕೃಷಿ ಸಚಿವ ಚಲುವರಾಯಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಭಿಮಾನಿಗಳು, ಚಿತ್ರನಟರು, ಕಲಾವಿದರು ಭಾಗವಹಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಚಲನಚಿತ್ರ ನಟರು, ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು. ಕಲಾಮಂದಿರದ ಒಳ ಆವರಣದ ಸುತ್ತಲೂ ಅಪರೂಪದ ಅವರ 62 ಚಿತ್ರ ಪಟಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಅಮ್ಮನ ಆಸೆಯಂತೆ ಚಿಕ್ಕ ರಂಗಮಂದಿರ ನಿರ್ಮಿಸಲಾಗಿದೆ. ಸಣ್ಣಪುಟ್ಟ ರಂಗ ಪ್ರದರ್ಶನ, ಸಭೆ ಸಮಾರಂಭಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. ಪ್ರಕೃತಿ ಮಡಿಲಲ್ಲಿ ಮಂದಿರ: ನೆಲಮಂಗಲ ಪಟ್ಟಣದಿಂದ 8 ಕಿ.ಮೀ. ದೂರದ ಪ್ರಕೃತಿ ಮಡಿಲಲ್ಲಿ ಮಂದಿರ ನಿರ್ಮಿಸಲಾಗಿದೆ. ನಿತ್ಯ ಮಂದಿರ ವೀಕ್ಷಣೆಗೆ ಬರುವವರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಮಂದಿರ ತೆರೆದಿರುತ್ತದೆ. ಸುಸಜ್ಜಿತ ಪಾಕಶಾಲೆ, ಭೋಜನಾಲಯವಿದೆ. ಅಭಿಮಾನದಿಂದ ಅಮ್ಮನ ಮಡಿಲಲ್ಲಿ ಒಂದೆರಡು ದಿನ ಕಳೆಯ ಬೇಕೆನ್ನುವವರಿಗೆ ವಸತಿ ವ್ಯವಸ್ಥೆಗಾಗಿ ಅಲ್ಲಿಯೆ ಸುಸಜ್ಜಿತ ಎರಡು ಕೊಠಡಿ ಹಾಗೂ ಉದ್ಯಾನವನ ನಿರ್ಮಿಸಲಾಗುತ್ತಿದೆ ಎಂದು ವಿನೋದ್‍ರಾಜ್ ವಿವರಿಸಿದರು.

ಲೀಲಾವತಿ ಅಮ್ಮನವರು ಯಕ್ಷಗಾನದಲ್ಲಿ ಪಾರಂಗತರು, ಸಂಗೀತ, ಸಾಕು ಪ್ರಾಣಿ ಪ್ರಿಯರು. ಅದಮ್ಯ ಜೀವನ ಪ್ರೀತಿಯ ಲೀಲಮ್ಮನವರಿಗೆ ಕೃಷಿ ಎಂದರೆ ಬಲು ಪ್ರೀತಿ, ವಿಶೇಷ ತಳಿಗಳ ಪರಿಷ್ಕರಣೆ ನಡೆಸಿದ ಅಮ್ಮನಿಗೆ ಪಶು ಸಂಗೋಪನೆ, ಗ್ರಾಮೀಣ ಬದುಕು ಆಪ್ಯಾಯಮಾನ. ಅವರ ಆಕಾಂಕ್ಷೆಯಂತೆ ಸೋಲದೇವನಹಳ್ಳಿಯಲ್ಲಿ ಜನರ ಹಾಗೂ ಜಾನುವಾರು ಆಸ್ಪತ್ರೆ ನಿರ್ಮಿಸಿದ್ದಾರೆ. ಬಡ ಕಲಾವಿದರಿಗೆ ಅವರು ಆರಂಭಿಸಿದ್ದ ಮಾಸಾಶನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆಂದು ಎಂದು ತಿಳಿಸಿದರು.

ಡಿ.8ರಂದು ಅಮ್ಮನ ವರ್ಷದ ಕಾರ್ಯ ನಡೆಯಲಿದೆ. ಭೂತಾಯಿ, ನಾಡು ನುಡಿಯ ಕಲಾ ಸೇವೆಯನ್ನು ಕೊನೆಯವರೆಗೂ ಸಲ್ಲಿಸಿದ ಮಾತೆಗೆ ಕೃತಜ್ಞತೆ ಸಲ್ಲಿಸುವ ಸಮಾರಂಭ ಅದು ಆಗಲಿದೆ. ಹೆತ್ತವರಿಗೆ ವಿಧೇಯರಾಗಿ ಅವರ ಆಶೋತ್ತರಗಳನ್ನು ಈಡೇರಿಸುವ ಮಕ್ಕಳು ನಾವಾಗಬೇಕು ಎನ್ನುವ ಸಂದೇಶವನ್ನು ನಾಡಿಗೆ ತಲುಪಿಸುವ ಸಣ್ಣ ಪ್ರಯತ್ನ ಎಂದರು.

ಪೋಟೋ 1 * 2 : ಕನ್ನಡದ ಹಿರಿಯ ನಟಿ ಡಾ.ಲೀಲಾವತಿ ಸವಿನೆನಪಿಗಾಗಿ ಪುತ್ರ ವಿನೋದ್‍ರಾಜ್ ನಿರ್ಮಿಸಿರುವ ದೇವಾಲಯ.

ಪೋಟೋ 3 :

ಕನ್ನಡದ ಹಿರಿಯ ನಟಿ ಡಾ.ಲೀಲಾವತಿ ಭಾವಚಿತ್ರ

ಪೋಟೋ 4 :

ನಟ ವಿನೋದ್‍ರಾಜ್ ಭಾವಚಿತ್ರ

Share this article