ಬಾಲರಾಮನ ಪಾದ ಸೇರಿದ ಅಡಕೆ ಹಿಂಗಾರ

KannadaprabhaNewsNetwork |  
Published : Feb 22, 2024, 01:50 AM IST
೨೧ಬಿಹೆಚ್‌ಆರ್ ೪: ಬಾಳೆಹೊನ್ನೂರಿನಿಂದ ಕೊಂಡೊಯ್ದಿದ್ದ ಅಡಕೆ ಹಿಂಗಾರವನ್ನು ಬಾಲರಾಮನ ವಿಗ್ರಹದ ಪಾದಗಳಿಗೆ ಅರ್ಪಿಸಿರುವುದು.  | Kannada Prabha

ಸಾರಾಂಶ

ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪಟ್ಟಣದಿಂದ ಕೊಂಡೊಯ್ದಿದ್ದ ಅಡಕೆ ಹಿಂಗಾರ (ಹೊಂಬಾಳೆ )ಅಯೋಧ್ಯೆ ತಲುಪಿ ಪೂಜೆಗೊಂಡು ಬಾಲರಾಮನ ಪಾದ ಹಾಗೂ ರಾಮಲಲ್ಲಾ ಉತ್ಸವ ಮೂರ್ತಿಯ ಅಲಂಕಾರಕ್ಕೆ ಬಳಸಲಾಗಿದೆ ಎಂದು ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದ್ದಾರೆ.

ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪಟ್ಟಣದಿಂದ ಕೊಂಡೊಯ್ದಿದ್ದ ಅಡಕೆ ಹಿಂಗಾರ (ಹೊಂಬಾಳೆ )ಅಯೋಧ್ಯೆ ತಲುಪಿ ಪೂಜೆಗೊಂಡು ಬಾಲರಾಮನ ಪಾದ ಹಾಗೂ ರಾಮಲಲ್ಲಾ ಉತ್ಸವ ಮೂರ್ತಿಯ ಅಲಂಕಾರಕ್ಕೆ ಬಳಸಲಾಗಿದೆ ಎಂದು ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದ್ದಾರೆ.

ಫೆ.17ರಂದು ಪಟ್ಟಣದಿಂದ ಅಯೋಧ್ಯೆ ಯಾತ್ರೆ ಕೈಗೊಂಡಿದ್ದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇಲ್ಲಿಂದ ಐದು ಅಡಕೆ ಹಿಂಗಾರವನ್ನು ವಿಶೇಷ ಸಂಕಲ್ಪ ಹೊಂದಿ ರಾಮ ಮಂದಿರಕ್ಕೆ ಪೂಜೆಗೆ ಸಲ್ಲಿಸಲು ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೊಂಡೊಯ್ದಿದ್ದರು.

ಸೋಮವಾರ ಅಯೋಧ್ಯೆ ತಲುಪಿದ ವಿಹಿಂಪ ಕಾರ್ಯಕರ್ತರು ರಾಮ ಜನ್ಮಭೂಮಿ ಟ್ರಸ್ಟ್ ಪದಾಧಿಕಾರಿಗಳಿಗೆ ಅಡಕೆ ಹಿಂಗಾರ ಹಸ್ತಾಂತರಿಸಿ ಬಾಲರಾಮನ ಪೂಜೆಗೆ ಬಳಸಿ ಮಲೆನಾಡಿನಲ್ಲಿ ಆವರಿಸಿರುವ ಕೃಷಿ ಸಂಬಂಧಿತ ಎಲ್ಲಾ ರೋಗ ರುಜಿನಗಳು ದೂರವಾಗಲಿ ಎಂದು ನಿವೇದಿಸಿಕೊಂಡಿದ್ದೆವು.

ನಮ್ಮ ಕೋರಿಕೆಯಂತೆ ರಾಮ ಜನ್ಮಭೂಮಿ ಟ್ರಸ್ಟ್ ಪದಾಧಿಕಾರಿಗಳು ಹಿಂಗಾರ ಹಾಗೂ ಇಲ್ಲಿಂದ ತೆಗೆದುಕೊಂಡು ಹೋಗಿದ್ದ ಭತ್ತ, ಅಡಕೆ, ಕಾಫಿಯನ್ನು ಸಹ ಪೂಜೆಗೆ ಬಳಸಿಕೊಂಡಿದ್ದು, ಬಾಲರಾಮನ ಪಾದಗಳಿಗೆ ಅಡಕೆ ಹಿಂಗಾರವನ್ನು ಅರ್ಪಿಸಿದ್ದಾರೆ. ಇದರೊಂದಿಗೆ ರಾಮಲಲ್ಲಾ ಉತ್ಸವದ ಪಲ್ಲಕ್ಕಿಗೂ ಸಹ ಅಡಕೆ ಹಿಂಗಾರವನ್ನು ಅಲಂಕಾರಕ್ಕೆ ಬಳಸಿಕೊಂಡಿದ್ದಾರೆ ಎಂದು ತಿಳಿಸಿದರು.೨೧ಬಿಹೆಚ್‌ಆರ್ ೪: ಬಾಳೆಹೊನ್ನೂರಿನಿಂದ ಕೊಂಡೊಯ್ದಿದ್ದ ಅಡಕೆ ಹಿಂಗಾರವನ್ನು ಬಾಲರಾಮನ ವಿಗ್ರಹದ ಪಾದಗಳಿಗೆ ಅರ್ಪಿಸಿರುವುದು. ೨೧ಬಿಹೆಚ್‌ಆರ್ ೫: ರಾಮಲಲ್ಲಾ ಉತ್ಸವದ ಪಲ್ಲಕ್ಕಿಯ ಎರಡೂ ಬದಿಗಳಿಗೆ ಅಡಕೆ ಹಿಂಗಾರದ ಅಲಂಕಾರ ಮಾಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ