ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ವಿಹಿಂಪ ಕಾರ್ಯಕರ್ತರು ಐದು ಅಡಕೆ ಹಿಂಗಾರವನ್ನು ಅರ್ಚಕರಿಂದ ಪಡೆದುಕೊಂಡರು.
ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಈ ಕುರಿತು ಮಾಹಿತಿ ನೀಡಿ, ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಯಾದ ನಂತರ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಕರಸೇವಕರು, ವಿಹಿಂಪ ಕಾರ್ಯಕರ್ತರಿಗೆ ಆಯೋಧ್ಯೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ಚಿಕ್ಕಮಗಳೂರು ಜಿಲ್ಲೆಯಿಂದ 75 ಜನ ಕಾರ್ಯಕರ್ತರಿಗೆ ಪಾಸ್ ವ್ಯವಸ್ಥೆ ಲಭ್ಯವಾಗಿದ್ದು, ರೈಲು ಮೂಲಕ ಎಲ್ಲರೂ ಒಗ್ಗೂಡಿ ತೆರಳಿ ಬಾಲರಾಮನ ದರ್ಶನ ಮಾಡಲಿದ್ದೇವೆ. ದರ್ಶನದ ಸಂದರ್ಭದಲ್ಲಿ ಲೋಕಕಲ್ಯಾಣದ ಚಿಂತನೆ ಹೊಂದಿ, ಪ್ರಾರ್ಥನೆ ಸಲ್ಲಿಸುವ ನಿರ್ಧಾರ ಸ್ಥಳೀಯ ಕಾರ್ಯಕರ್ತರು ಕೈಗೊಳ್ಳಲಾಗಿದೆ.
ಈ ಸಮಸ್ಯೆಗಳನ್ನು ಬಾಲರಾಮನು ನಿವಾರಿಸುವನು ಎಂಬುದು ನಮ್ಮ ಬಲವಾದ ನಂಬಿಕೆಯಾಗಿದ್ದು, ಈ ಹಿನ್ನೆಲೆ ಅಯೋಧ್ಯೆ ಯಾತ್ರೆಗೆ ತೆರಳುತ್ತಿರುವ ಸ್ಥಳೀಯ ಕಾರ್ಯಕರ್ತರು ರೈತರಿಂದ ಅಡಕೆ ಹಿಂಗಾರ ಸಂಗ್ರಹ ಮಾಡಿ ಕೊಂಡೊಯ್ಯುತ್ತಿದ್ದೇವೆ. ಇದರೊಂದಿಗೆ ಮಲೆನಾಡಿನ ಅಡಕೆ, ಕಾಫಿ, ಭತ್ತ ಸಹ ತೆಗೆದುಕೊಂಡು ಹೋಗಲಾಗುತ್ತಿದೆ.
ರಾಮಲಲ್ಲಾ ವಿಗ್ರಹಕ್ಕೆ ಈಗಾಗಲೇ ಹಲವು ಬಗೆ ಅಲಂಕಾರಗಳು ನೆರವೇರಿದ್ದು, ಫೆ.೧೯ರ ಸೋಮವಾರ ಮಲೆನಾಡಿನ ಅಡಕೆ ಹಿಂಗಾರದ ಅಲಂಕಾರವನ್ನು ಮಾಡುವ ವ್ಯವಸ್ಥೆಯಾಗಿದೆ. ಇದಕ್ಕೆ ಈಗಾಗಲೇ ಸಂಘದ ಹಿರಿಯರು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೊಂದಿಗೆ ಮಾತುಕಥೆ ನಡೆಸಿ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರೊಂದಿಗೆ ಟ್ರಸ್ಟ್‌ಗೆ ಭಿನ್ನಹ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಘಟನೆ ಪ್ರಮುಖರಾದ ಮಹೇಶ್ಚಂದ್ರ, ಬಿ.ವೆಂಕಟೇಶ್, ರತ್ನಾಕರ ಗಡಿಗೇಶ್ವರ, ಗುರುಪ್ರಸಾದ್, ಉಮೇಶ್, ಅರುಣ್‌ಕುಮಾರ್, ರವೀಂದ್ರ ಆಚಾರ್ಯ, ಅಜಿತ್ ಕಳಸ, ಪ್ರೇಮಲತಾ, ಮಂಜು ಹಲಸೂರು, ಸಂದೀಪ್‌ಶೆಟ್ಟಿ, ಶರತ್‌ಪೂಜಾರಿ, ಭೂಮಿಕಾ ಆರ್.ಆಚಾರ್ಯ, ಸಾಮ್ರಾಟ್, ನಾರಾಯಣ್, ಅಶೋಕ್ ಮತ್ತಿತರರು ಹಾಜರಿದ್ದರು.