ಆದರ್ಶ ಶಿಕ್ಷಕರ ವೇದಿಕೆಯ ಪೆನಲ್ ಭರ್ಜರಿ ಗೆಲುವು

KannadaprabhaNewsNetwork |  
Published : Feb 04, 2025, 12:35 AM IST
೩ಬಿಎಸ್ವಿ೦೨- ಬಸವನಬಾಗೇವಾಡಿ ತಾಲೂಕಾ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಆದರ್ಶ ಶಿಕ್ಷಕರ ವೇದಿಕೆ, ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಅವರ ಪೆನಲ್‌ದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವದರಿಂದ ಈ ಪೆನಲ್ ಬಸವೇಶ್ವರ ದೇವಸ್ಥಾನದ ಮುಂಭಾಗ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಅಖಂಡ ತಾಲೂಕಿನಲ್ಲಿ ತೀವ್ರ ಕುತೂಹಲ ಉಂಟು ಮಾಡಿದ್ದ ಬಸವನಬಾಗೇವಾಡಿ ತಾಲೂಕು ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಆದರ್ಶ ಶಿಕ್ಷಕರ ವೇದಿಕೆ ಬೆಂಬಲಿತ ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಅವರ ಪೆನಲ್‌ನ 11 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟು ೧೩ ಸದಸ್ಯ ಬಲದ ಆಡಳಿತ ಮಂಡಳಿಗೆ ೧೧ ಸದಸ್ಯರು ಜಯ ಸಾಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಅಖಂಡ ತಾಲೂಕಿನಲ್ಲಿ ತೀವ್ರ ಕುತೂಹಲ ಉಂಟು ಮಾಡಿದ್ದ ಬಸವನಬಾಗೇವಾಡಿ ತಾಲೂಕು ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಆದರ್ಶ ಶಿಕ್ಷಕರ ವೇದಿಕೆ ಬೆಂಬಲಿತ ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಅವರ ಪೆನಲ್‌ನ 11 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟು ೧೩ ಸದಸ್ಯ ಬಲದ ಆಡಳಿತ ಮಂಡಳಿಗೆ ೧೧ ಸದಸ್ಯರು ಜಯ ಸಾಧಿಸಿದ್ದಾರೆ.ಬಸವನಬಾಗೇವಾಡಿ ತಾಲೂಕು ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಐದು ವರ್ಷದ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ೧೩ ಸ್ಥಾನಗಳಿಗೆ ಹಿರಿಯರ ಪೆನಲ್‌ನಿಂದ ೧೩ ಜನ ಅಭ್ಯರ್ಥಿಗಳು, ಆದರ್ಶ ಶಿಕ್ಷಕರ ವೇದಿಕೆ, ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಪೆನಲ್‌ನ ೧೩ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಸೊಸೈಟಿಯಲ್ಲಿ ಒಟ್ಟು ೭೮೦ ಮತದಾರರಿದ್ದಾರೆ. ಇದರಲ್ಲಿ ೭೬೧ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಇದರಲ್ಲಿ ಮಹೇಶ ಪೂಜಾರಿ, ಅಮರೇಶ ನಾಡಗೌಡ ಅವರು ಹಿರಿಯರ ಪೆನಲ್‌ನ ಆಯ್ಕೆಯಾದ ಅಭ್ಯರ್ಥಿಗಳಾದರೆ ಉಳಿದ ೧೧ ಸ್ಥಾನಗಳಿಗೆ ಆದರ್ಶ ಶಿಕ್ಷಕರ ವೇದಿಕೆಯ ಬೆಂಬಲಿತ ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಪೆನಲ್‌ಗೆ ಸೇರಿದವರಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಬಸವರಾಜ ಚಿಂಚೋಳಿ, ಶಿವಪ್ಪ ಮಡಿಕೇಶ್ವರ, ಹೊನ್ನಪ್ಪ ಗೊಳಸಂಗಿ, ಸಂಗಣ್ಣ ಹುನಗುಂದ, ನಿಂಗೇಶ ಕಾಳಗಿ, ಬಾಷಾಸಾಬ ಮನಗೂಳಿ, ಅಮರೇಶ ನಾಡಗೌಡ, ಮಹಿಳಾ ಕ್ಷೇತ್ರದಿಂದ ಶಂಕ್ರಮ್ಮ ಕವಿಶೆಟ್ಟಿ, ಪಾರ್ವತೆವ್ವ ಹೊಸಮಠ, ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಮಹೇಶ ಪೂಜಾರಿ, ಹಿಂದುಳಿದ ಬ ವರ್ಗ ಕ್ಷೇತ್ರದಿಂದ ಸುರೇಶ ಹುರಕಡ್ಲಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕೃಷ್ಣಾ ರಜಪೂತ, ಮಲ್ಲಿಕಾರ್ಜನ ರಾಜನಾಳ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.ವಿಜಯೋತ್ಸವದಲ್ಲಿ ಆದರ್ಶ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕೌಲಗಿ, ಎಚ್.ಬಿ.ಬಾರಿಕಾಯಿ, ಎಂ.ಎನ್.ಯಾಳವಾರ, ಎಂ.ಎಸ್.ಅವಟಿ, ಸಲೀಂ ದಡೇದ, ಎಂ.ಎಸ್.ಮೂಕರ್ತಿಹಾಳ, ಅಶೋಕ ಗಿಡ್ಡಪ್ಪಗೋಳ, ಎಂ.ಎಂ.ಮುಲ್ಲಾ, ಗೋಪಾಲ ಲಮಾಣಿ, ಸಿದ್ದಪ್ಪ ಅವಜಿ, ಬಿ.ಪಿ.ನಾಗಾವಿ, ಎಂ.ವ್ಹಿ.ಗಬ್ಬೂರ, ಎಸ್.ಬಿ.ಮುತ್ತಗಿ, ಕೊಟ್ರೇಶ ಹೆಗ್ಡಾಳ, ಬಿ.ವ್ಹಿ.ಚಕ್ರಮನಿ, ಎಂ.ಆರ್.ಮಕಾನದಾರ, ಜಗದೀಶ ಚಿಕ್ಕಮಠ, ಎಸ್.ಎಸ್.ಕಮತ, ಸಂಗಮೇಶ ದುದಗಿ, ಆನಂದ ಪವಾರ, ಡಾ.ಮಹಾದೇವ ಗುಡಿ, ನಾಗು ಅರಳಚಂಡಿ, ಶ್ರೀಕಾಂತ ಬಡಿಗೇರ, ಜೆ.ಡಿ.ಪಾಟೀಲ, ಸಿ.ಎಂ.ಹೊರ್ತಿ, ವಿಜೇತ ಅಭ್ಯರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

ಕೋಟ್‌

ಚುನಾವಣೆಯಲ್ಲಿ ನಮ್ಮ ಪೆನಲ್‌ ಅಭ್ಯರ್ಥಿಗಳು ಹೆಚ್ಚು ಆಯ್ಕೆಯಾಗಿದ್ದರೂ ಇದು ಅಖಂಡ ಬಸವನಬಾಗೇವಾಡಿ ತಾಲೂಕಿನ ಶಿಕ್ಷಕ ಬಾಂಧವರ ಗೆಲುವು. ಈ ಗೆಲವು ಎಲ್ಲ ಶಿಕ್ಷಕರ ಬಾಂಧವರ ಶ್ರಮದ ಫಲ. ಎಲ್ಲ ಶಿಕ್ಷಕ ಬಾಂಧವರು ಒಂದಾಗಿ ಎಲ್ಲರ ಸಹಾಯ-ಸಹಕಾರೊಂದಿಗೆ ಅಖಂಡ ತಾಲೂಕಿನ ಈ ಸೊಸೈಟಿಯನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುವುದು. ನಮ್ಮ ಸಂಘ ಸರ್ವಜನಾಂಗದ ಶಾಂತಿಯ ತೋಟದಂತಿದೆ.

ಉಮೇಶ ಕೌಲಗಿ,ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ

PREV

Recommended Stories

ಸರ್ಕಾರಿ ಯೋಜನೆ ತಲುಪಲು ‘ಅರಿವು’ ಕಾರ್ಯಕ್ರಮ ಸಹಕಾರಿ: ಯಶ್ಪಾಲ್‌ ಸುವರ್ಣ
ತಾಯಿ ಹೆಸರಿನಲ್ಲಿ ಒಂದು ಸಸಿ ಹಾಗೂ ಬೀಜದುಂಡೆ ಕಾರ್ಯಕ್ರಮಕ್ಕೆ ಚಾಲನೆ