ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ 500 ಬೀದಿ ನಾಯಿಗಳಿಗೆ ಒಂದು ವರ್ಷ ಪ್ರತಿನಿತ್ಯ ಎರಡು ಬಾರಿ ಚಿಕನ್‌ ರೈಸ್‌ ಆಹಾರ ನೀಡುವುದು ಸೇರಿದಂತೆ ಆಶ್ರಯ ಕಲ್ಪಿಸಲು 1.83 ಕೋಟಿ ರು. ವೆಚ್ಚ ಮಾಡಲು ಮುಂದಾಗಿದೆ.

ಬೆಂಗಳೂರು : ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ 500 ಬೀದಿ ನಾಯಿಗಳಿಗೆ ಒಂದು ವರ್ಷ ಪ್ರತಿನಿತ್ಯ ಎರಡು ಬಾರಿ ಚಿಕನ್‌ ರೈಸ್‌ ಆಹಾರ ನೀಡುವುದು ಸೇರಿದಂತೆ ಆಶ್ರಯ ಕಲ್ಪಿಸಲು 1.83 ಕೋಟಿ ರು. ವೆಚ್ಚ ಮಾಡಲು ಮುಂದಾಗಿದೆ.

ದಕ್ಷಿಣ ನಗರ ಪಾಲಿಕೆಯಿಂದ ಟೆಂಡರ್‌

ಈ ಕುರಿತು ಬೆಂಗಳೂರು ದಕ್ಷಿಣ ನಗರ ಪಾಲಿಕೆಯಿಂದ ಟೆಂಡರ್‌ ಆಹ್ವಾನಿಸಲಾಗಿದ್ದು, ಎಸ್‌.ಬಿಂಗಿಪುರದಲ್ಲಿ ಬೀದಿ ನಾಯಿಗಳಿಗೆ ಆಶ್ರಯ ತಾಣ ಮಾಡಲಾಗಿದೆ. 500 ಬೀದಿ ನಾಯಿಗಳಿಗೆ ಅಲ್ಲಿ ಆಹಾರ ನೀಡಿ ನಿರ್ವಹಣೆ ಮಾಡಲು 1,83,60,000 ರು., ವೆಚ್ಚದ ಯೋಜನೆ ರೂಪಿಸಲಾಗಿದ್ದು, ಗುತ್ತಿಗೆ ಪಡೆದ ಸಂಸ್ಥೆಯು 12 ತಿಂಗಳು 500 ಬೀದಿ ನಾಯಿಗೆ ಆಹಾರ ಮತ್ತು ಆಶ್ರಯ ನೀಡಬೇಕಿದೆ.

500 ನಾಯಿ ಹಿಡಿಯುವುದು ಸೇರಿದಂತೆ ಮೊದಲ ಒಂದು ತಿಂಗಳಿಗೆ ಪ್ರತಿ ನಾಯಿಗೆ 3,335 ರು. ವೆಚ್ಚ ಮಾಡಲಾಗುವುದು. ಎರಡನೇ ತಿಂಗಳಿನಿಂದ ನಾಯಿ ಹಿಡಿಯುವ ಶುಲ್ಕ ಮೊತ್ತ 300 ಕಡಿತಗೊಳಿಸಿ 3,035 ರು. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. 3,035 ರು.ವೆಚ್ಚದಲ್ಲಿ ದಿನಕ್ಕೆ ಎರಡು ಬಾರಿ ಚಿಕನ್‌ ರೈಸ್‌ ಆಹಾರ ನೀಡಲು, ಸಿಬ್ಬಂದಿ ವೆಚ್ಚ, ನಿರ್ವಹಣೆ ವೆಚ್ಚ ಎಲ್ಲವನ್ನೂ ಒಳಗೊಂಡಿದೆ.

500 ನಾಯಿ ವೆಚ್ಚದ ವಿವರ (ತಿಂಗಳಿಗೆ)

* ನಾಯಿ ಹಿಡಿಯುವುದು, ಸಾಗಾಣಿಕೆ, ಲಸಿಕೆಗೆ ₹1,50,000 (ಏಕ ಬಾರಿ ವೆಚ್ಚ)

* ಆಹಾರ ₹7,50,000 (ದಿನಕ್ಕೆ 2 ಬಾರಿ)

* ಸಿಬ್ಬಂದಿ ವೇತನ ₹1,18,483 (ಒಬ್ಬ ಪ್ಯಾರಾವೆಟ್‌, ನಾಲ್ವರು ಸಹಾಯಕರು)

* ಔಷಧಿ ವೆಚ್ಚ ₹15,000

* ಸ್ವಚ್ಛತಾ ಸಾಮಗ್ರಿ ₹10,000

* ಆಡಳಿತ ವೆಚ್ಚ ₹10,000