ಏಪ್ರಿಲ್‌ 23ರಿಂದ ಅಡವಿಮಹಾಸ್ವಾಮಿಗಳ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Apr 22, 2026, 02:30 AM IST
ಹಾನಗಲ್ಲ ತಾಲೂಕಿನ ಬಾಳೂರಿನಲ್ಲಿ ಪಟ್ಟಾಧಿಕಾರ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಮಠಾಧೀಶರು, ಗಣ್ಯರು. | Kannada Prabha

ಸಾರಾಂಶ

ಬಾಳೂರು ಅಡವಿಸ್ವಾಮಿಮಠದ ೧೨ನೇ ಪೀಠಾಧಿಕಾರಿಯಾಗಿ ಶ್ರೀಗುರುಪ್ರಸಾದ ದೇವರ ನಿರಂಜನ ಚರ ಪಟ್ಟಾಧಿಕಾರ ಹಾಗೂ ಅಡವಿಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಏ. ೨೩ರಿಂದ ೩೦ರ ವರೆಗೆ ನಡೆಯಲಿದೆ ಎಂದು ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ತಿಳಿಸಿದರು.

ಹಾನಗಲ್ಲ: ಬಾಳೂರು ಅಡವಿಸ್ವಾಮಿಮಠದ ೧೨ನೇ ಪೀಠಾಧಿಕಾರಿಯಾಗಿ ಶ್ರೀಗುರುಪ್ರಸಾದ ದೇವರ ನಿರಂಜನ ಚರ ಪಟ್ಟಾಧಿಕಾರ ಹಾಗೂ ಅಡವಿಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಏ. ೨೩ರಿಂದ ೩೦ರ ವರೆಗೆ ನಡೆಯಲಿದೆ ಎಂದು ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ತಿಳಿಸಿದರು.ಹಾನಗಲ್ಲ ತಾಲೂಕಿನ ಬಾಳೂರು ಅಡವಿಸ್ವಾಮಿ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಏ. ೨೩ರಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಶ್ರೀಗಳು, ಶಿವಮೊಗ್ಗ ಜಿಲ್ಲೆ ಆನಂದಪುರ ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಜೆ ೭ ಗಂಟೆಗೆ ಆಧ್ಯಾತ್ಮ ಪ್ರವಚನ ಪ್ರಾರಂಭವಾಗುವುದು. ಡಾ. ಚನ್ನರುದ್ರಮುನಿ ಶಿವಾಚಾರ್ಯರು ಪ್ರವಚನ ಮಾಡುವರು.

ಏ.೨೭ರಂದು ಬೆಳಗ್ಗೆ ೮ ಗಂಟೆಗೆ ಲಿಂಗದೀಕ್ಷೆ ಅಯ್ಯಾಚಾರ ಕಾರ್ಯಕ್ರಮಗಳು ಕೂಡಲದ ಗುರುನಂಜೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವವು. ಏ. ೨೯ರಂದು ಬೆಳಗ್ಗೆ ೮ ಗಂಟೆಗೆ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮಗಳು ನಡೆಯುವವು. ಸಂಜೆ ೬ ಗಂಟೆಗೆ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಜಗದ್ಗುರು ಫಕೀರದಿಂಗಾಲೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪ್ರವಚನ ಮಂಗಲ ನಡೆಯಲಿದೆ. ಪಟ್ಟಾಧಿಕಾರ ಮಹೋತ್ಸವ ಸಮಿತಿ ಅಧ್ಯಕ್ಷ ರಾಜಣ್ಣ ಅಂಕಸಖಾನಿ ಅವರು ಅಧ್ಯಕ್ಷತೆವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು.

ಏ. ೩೦ರಂದು ಬ್ರಾಹ್ಮೀ ಮಹೂರ್ತದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಶ್ರೀಗಳ ಸಾನಿಧ್ಯದಲ್ಲಿ ಗುರುಪ್ರಸಾದ ದೇವರಿಗೆ ಷಟಸ್ಥಲ ಬ್ರಹ್ಮೋಪದೇಶ, ಚಿನ್ಮಯಾನುಗ್ರಹ ನಡೆದು ಶ್ರೀಗುರುಪ್ರಸಾದ ದೇಶೀಕರೆಂದು ಅಭಿಧಾನ, ಹಾವೇರಿ ಹುಕ್ಕೇರಿ ಮಠದ ಡಾ. ಸದಾಶಿವ ಮಹಾಸ್ವಾಮಿಗಳವರಿಂದ ಪ್ರಸಾದಿ ಸ್ಥಳ ದೀಕ್ಷೆ ನಡೆಯುವುದು. ೧೦ ಗಂಟೆಗೆ ಶೂನ್ಯ ಸಿಂಹಾಸನಾರೋಹಣ, ಸಮಾಜ ಸೇವಾ ದೀಕ್ಷೆ ಕಾರ್ಯಕ್ರಮ ನಡೆಯಲಿದ್ದು, ಸವಣೂರು ಬಾಳೂರು ಮಠದ ಪೀಠಾಧಿಪತಿ ಕುಮಾರಮಹಾಸ್ವಾಮಿಗಳು ಅಧ್ಯಕ್ಷತೆವಹಿಸುವರು. ಜನಪ್ರತಿನಿಧಿಗಳು, ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ ೪ ಗಂಟೆಗೆ ಶ್ರೀ ಅಡವಿಸ್ವಾಮಿಗಳ ಮಹಾರಥೋತ್ಸವ ಸಲಕ ವಾದ್ಯ ವೈಭವಗಳಿಂದ ನಡೆಯುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸವಣೂರು ಬಾಳೂರು ಮಠದ ಪೀಠಾಧಿಪತಿ ಕುಮಾರಮಹಾಸ್ವಾಮಿಗಳು, ಪಟ್ಟಾಧಿಕಾರ ಸಮಿತಿ ಅಧ್ಯಕ್ಷ ರಾಜಣ್ಣ ಅಂಕಸಖಾನಿ, ಕಾರ್ಯದರ್ಶಿ ಶಿವಕುಮಾರ ದೇಶಮುಖ, ರಾಜಪ್ಪ ಮಳಗಿ, ಸದಾನಂದ ಮೆಳ್ಳಳ್ಳಿ, ದೇವೇಂದ್ರಪ್ಪ ಬಕ್ಕಣ್ಣನವರ, ಉದಯ ವಿರುಪಣ್ಣನವರ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೋಷ ತಿದ್ದಿಕೊಂಡು ನಡೆಯುವಂತಾಗಲಿ: ಮಾಧವಾನಂದಭಾರತೀ ಸ್ವಾಮಿಗಳು
ವಿಜೃಂಭಣೆಯ ಉಜ್ಜಯನಿ ಮರಳುಸಿದ್ದೇಶ್ವರ ಮಹಾರಥೋತ್ಸವ