ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಮಡಿವಾಳ ಮಾಚಿದೇವ ದೇವಸ್ಥಾನ ನಿರ್ಮಾಣಗೊಳ್ಳಲು ಸಮಾಜದ ಒಗ್ಗಟ್ಟು ಕಾರಣವಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಎಂ. ರಾಮಣ್ಣ ತಿಳಿಸಿದರು.
ತಾಲೂಕು ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಟ್ಟಿಮನಿ ಮಾತನಾಡಿ, ಮಡಿವಾಳ ಮಾಚಿದೇವರು ವೃತ್ತಿಯ ಜತೆಗೆ ಅಂತರಂಗ ಮತ್ತು ಬಹಿರಂಗ ಶುದ್ಧಿ ಕುರಿತಾಗಿ ಧಾರ್ಮಿಕ ನೆಲೆಗಟ್ಟಿನಲ್ಲಿ ತಮ್ಮದೇ ಆದ ಚಿಂತನೆಗಳನ್ನು ಬಿಚ್ಚಿಟ್ಟಿದ್ದಾರೆ. ಸಮಸಮಾಜ ನಿರ್ಮಿಸುವಲ್ಲಿ ಶರಣರ ತತ್ವಾದರ್ಶಗಳು ಮಾರ್ಗದರ್ಶಿ ಸೂತ್ರಗಳಂತಿವೆ ಎಂದರು. ಮುಖಂಡರಾದ ಎಂ. ಹುಲುಗಪ್ಪ, ಎ. ಪ್ರಕಾಶ, ಎಂ. ಮಂಜುನಾಥ, ಎಂ. ಅಶೋಕ, ರಾಘವೇಂದ್ರ, ಮೇಘರಾಜ, ಮಾರುತಿ, ಗಜೇಂದ್ರ ಮಾಚಿ, ವರದಪ್ಪ, ತಿಮ್ಮಣ್ಣ, ಹನುಮಂತಪ್ಪ ಸೊಬಟಿ ಇತರರಿದ್ದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಉಪ ತಹಸೀಲ್ದಾರ್ ಶಿವಕುಮಾರಗೌಡ ಮಡಿವಾಳರ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಂದಾಯ ಇಲಾಖೆ ಅಧಿಕಾರಿಗಳಾದ ಶಿಲ್ಪಾ ಮೇಟಿ, ರಮೇಶ್ ದಂಡಿನ್, ಮಡ್ಡಿಕಟ್ಟಿ ನಾಗರಾಜ, ಪುಷ್ಪರಾಣಿ, ಮಂಜುಳಾ, ಶಾಂತಮ್ಮ, ಗೋಪಾಲ ಇತರರಿದ್ದರು.