ಯತ್ನಾಳ ಪರ ಜನಾಭಿಪ್ರಾಯದ ವರದಿ ಆಧರಿಸಿ ಪಕ್ಷಕ್ಕೆ ಸೇರಿಸಿಕೊಳ್ಳಿ : ಬಿಜೆಪಿ ಮುಖಂಡ ಧರೇಪ್ಪ ಟಕ್ಕಣ್ಣವರ

KannadaprabhaNewsNetwork | Updated : Apr 03 2025, 12:46 PM IST

ಸಾರಾಂಶ

ಯತ್ನಾಳರ ಉಚ್ಚಾಟನೆಯಿಂದ ಬಿಜೆಪಿ ಪಕ್ಷದಿಂದ ಯುವಕರು ದೂರವಾಗುತ್ತಿದ್ದಾರೆ. ಪಕ್ಷದ ಮುಖಂಡರು ಶೀಘ್ರವಾಗಿ ಸಮಿತಿ ರಚಿಸಿ ಜನಾಭಿಪ್ರಾಯ ಸಂಗ್ರಹಿಸಬೇಕು. 

  ಅಥಣಿ :  ಯತ್ನಾಳರ ಉಚ್ಚಾಟನೆಯಿಂದ ಬಿಜೆಪಿ ಪಕ್ಷದಿಂದ ಯುವಕರು ದೂರವಾಗುತ್ತಿದ್ದಾರೆ. ಪಕ್ಷದ ಮುಖಂಡರು ಶೀಘ್ರವಾಗಿ ಸಮಿತಿ ರಚಿಸಿ ಜನಾಭಿಪ್ರಾಯ ಸಂಗ್ರಹಿಸಬೇಕು. ಜನಾಭಿಪ್ರಾಯದ ವರದಿ ಆಧರಿಸಿ ಪಕ್ಷಕ್ಕೆ ಸೇರಿಸಿಕೊಳ್ಳಿ. ಇಲ್ಲವಾದರೇ ಪಕ್ಷಕ್ಕೆ ನಷ್ಟವಿದೆ ಎಂದು ಬಿಜೆಪಿ ಮುಖಂಡ ಧರೇಪ್ಪ ಟಕ್ಕಣ್ಣವರ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಯತ್ನಾಳ ಉಚ್ಚಾಟನೆ ಖಂಡಿಸಿ ಮಂಗಳವಾರ ಹಿಂದೂ ಕಾರ್ಯಕರ್ತರು ಹಮ್ಮಿಕೊಂಡ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ಬಿಜೆಪಿಯನ್ನು ಯುವಕರು ಹಿಂದೂತ್ವಕ್ಕಾಗಿ ನೆಚ್ಚಿಕೊಂಡಿದ್ದಾರೆ. ಆದರೆ, ಪಕ್ಷದವರು ಹಿಂದುತ್ವಕ್ಕಾಗಿ ಹೋರಾಟದ ಮಾಡುತ್ತಿರುವ ನಮ್ಮ ನಾಯಕರನ್ನು ಉಚ್ಚಾಟಣೆ ಮಾಡುವುದು ಎಷ್ಟು ಸರಿ?, ಈಗಲೂ ಕಾಲ ಮಿಂಚಿಲ್ಲ ವರಿಷ್ಠರು ಯತ್ನಾಳ ಅವರ ಬಗ್ಗೆ ತಿಳಿದುಕೊಳ್ಳಲು ಒಂದು ಸಮಿತಿ ರಚನೆ ಮಾಡಿ ವರದಿ ತರಸಿಕೊಳ್ಳಿ. ಖಂಡಿತವಾಗಿ ಅವರ ಪರವಾದ ವರದಿ ಬರುತ್ತೆ. ಆಗಲಾದರೂ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಆಗ್ರಹಿಸಿದರು.

ವಿಜಯಪುರದ ಮುಖಂಡ ಡಾ.ಬಸನಗೌಡ ಪಾಟೀಲ (ನಾಗರಾಳ ಹುಲಿ) ಮಾತನಾಡಿ, ವಾಜಪೇಯಿ ಅವರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಬಸನಗೌಡ ಪಾಟೀಲ ಅವರ ಕರ್ನಾಟಕದಲ್ಲಿ ಹಿರಿಯ ನಾಯಕರು, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ರಾಜಕಾರಣಿ. ಬಿಜೆಪಿ ಅಧಿಕಾರಕ್ಕೆ ಬರಲು ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡಿರುವುದು ಒಂದು ಇದೆ.

 ಅದೆ ಒಂದು ಉದ್ದೇಶವನ್ನು ಯತ್ನಾಳ ಅವರು ಸಹ ಇಟ್ಟುಕೊಂಡು ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ದೂರ ಮಾಡಬೇಕೆಂದು ಹೋರಾಟ ಮಾಡುತ್ತ ಬಂದಿದ್ದಾರೆ. ಹೊಂದಾಣಿಕೆ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು. ರಾಜ್ಯದಲ್ಲಿ ಹಿಂದುತ್ವಕ್ಕೆ ಹಿನ್ನಡೆಯಾದಾಗ ಹಿಂದುತ್ವಕ್ಕಾಗಿದೆ ಎದ್ದು ನಿಂತವರು ಬಸನಗೌಡ ಪಾಟೀಲ ಅವರು ಕೋಟ್ಯಂತರ ಜನ ಹಿಂದೂ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. 

ಶೀಘ್ರವಾಗಿ ಅವರ ಉಚ್ಚಾಟನೆಯನ್ನು ಮರು ಪರಿಶೀಲಿಸಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು.ಈ ವೇಳೆ ಮುಖಂಡರಾದ ಶಶಿಕಾಂತ ಪಡಸಲಗಿ, ಎಸ್.ಎಸ್.ಪಾಟೀಲ, ಸತ್ಯಪ್ಪ ಬಾಗೆನ್ನವರ, ನಿಶಾಂತ ದಳವಾಯಿ ಸೇರಿದಂತೆ ಅನೇಕರು ಯತ್ನಾಳ ಉಚ್ಚಾಟಣೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮುಖಂಡರಾದ ನಾನಾಸಾಬ ಅವತಾಡೆ, ವಿರೇಂದ್ರ ಕಾಗವಾಡೆ, ಅಶೋಕ ದಾನಗೌಡರ, ಅಣ್ಣಪ್ಪ ಹಳ್ಳೂರ, ಪ್ರಕಾಶ ಚನ್ನಣ್ಣವರ, ಪ್ರಶಾಂತ ತೋಡಕರ, ಡಿ.ಸಿ.ನಾಯಿಕ, ಸಂಗಮೇಶ ಇಂಗಳಿ‌, ಸಿದ್ದು ಪಾಟೀಲ, ಅವಿನಾಶ ಜಾದವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article