ಕನ್ನಡಪ್ರಭ ವಾರ್ತೆ ಮೈಸೂರು ಶರಣ ಸಾಹಿತ್ಯ ತಾಲೂಕು ಪರಿಷತ್ತು ಮತ್ತು ಬಸವಮಾರ್ಗ ಫೌಂಡೇಷನ್ (ರಿ) ವತಿಯಿಂದ ಮಂಗಳವಾರ ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತು ಮತ್ತು ಪುನರ್ವಸತಿ ಕೇಂದ್ರದಲ್ಲಿ "ವಚನಗಳಲ್ಲಿ ವ್ಯಸನಮುಕ್ತ ಜೀವನ'''''''' ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ನಿಜವಾದ ಭಾಗ್ಯ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಕೆಟ್ಟ ವ್ಯಸನಗಳಿಗೆ ಮನುಷ್ಯ ಬಲಿಯಾಗಬಾರದು. ಆದರೆ ಕುಡಿತ, ಮದ್ಯಪಾನ ವಾಸ್ತವದ ದಿನಗಳಲ್ಲಿ ಫ್ಯಾಷನ್ ಆಗಿ ಬದಲಾಗಿದೆ. ಮದ್ಯವ್ಯಸನದಿಂದ ಹಲವು ಕುಟುಂಬಗಳು ತೊಂದರೆಗೆ ಸಿಲುಕಿವೆ. ಅರಿವಿನ ಕೊರತೆ ನಮ್ಮನ್ನು ದುಶ್ಚಟಗಳಿಗೆ ದೂಡುತ್ತಿದೆ. ಶಾಲೆ, ಕಾಲೇಜು ಹಂತದಲ್ಲೆ ಈ ಬಗ್ಗೆ ಅರಿವು ಮೂಡಿಸಬೇಕು. ವ್ಯಸನಿ ಗೌರವಯುತ ಜೀವನ ಮಾಡಲು ಮುಂದಾಗಬೇಕು. ಪ್ರತಿಯೊಬ್ಬರು ಸದೃಢ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.''''''''ವಚನಗಳಲ್ಲಿ ವ್ಯಸನಮುಕ್ತ ಜೀವನ'''''''' ವಿಷಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣಮೂರ್ತಿ ಉಪನ್ಯಾಸ ನೀಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ನಮ್ಮ ಶಿವ ಶರಣರು ದೊಡ್ಡ ಹೋರಾಟವನ್ನೇ ಮಾಡಿದರು. ತಮ್ಮ, ತಮ್ಮ ವಚನಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದರು. ವೇದ, ಉಪನಿಷತ್ತುಗಳಲ್ಲಿ ಇದ್ದ ಸಾರವನ್ನು ಸಾಮಾನ್ಯನಿಗೂ ಅರ್ಥವಾಗುವಂತೆ ಪದಗಳನ್ನು ಕಟ್ಟಿದರು. ಅದರ ಮೂಲಕ ಸಮಾಜದ ಅಂಕು-ದೊAಕುಗಳನ್ನು ತಿದ್ದುವ ಕೆಲಸಕ್ಕೆ ಸಾಮಾಜಿಕ ಕ್ರಾಂತಿ ಮಾಡಿದರು ಎಂದು ತಿಳಿಸಿದರು.12 ನೇ ಶತಮಾನದ ಬಸವಾದಿ ಶರಣರು ತಮ್ಮ ವಚನಗಳಲ್ಲಿ ಸಪ್ತ ವ್ಯಸನಗಳ ಬಗ್ಗೆ ಸವಿಸ್ತಾರವಾಗಿ ಉಲ್ಲೇಖ ಮಾಡಿದ್ದಾರೆ. ಆದರೆ ಈ ಎಲ್ಲ ವ್ಯಸನಿಗಳಿಗಿಂತ ಶಿವನಿಗೆ ಪ್ರಿಯವಾಗುವಂತೆ ನಡೆಯುವ ವ್ಯಸನ ಅತ್ಯಂತ ಶೇಷ್ಠವೆಂದು ಮನಗಂಡಿದ್ದಾರೆ. ಎಲ್ಲ ಕೆಟ್ಟ ವ್ಯಸನಗಳು ಅನ್ಯಾಯದ ಪಥದತ್ತ ಮುನ್ನಡೆಸುತ್ತವೆ. ಆದರೆ ಭಕ್ತಿಯ ಪಥವೊಂದೆ ನ್ಯಾಯದ ಮಾರ್ಗದಲ್ಲಿ ನಡೆಸುತ್ತದೆ. ತನು ಕರಗದವರಲ್ಲಿ ಪುಷ್ಪವನ್ನು ನೀನು ಬಯಸುವುದಿಲ್ಲ. ಹಾಗಾಗಿ ನಿನ್ನ ಮನಸ್ಸನ್ನು ಶುದ್ಧವಾಗಿ ಇಟ್ಟುಕೋ, ಇದರಿಂದ ಮನ ವ್ಯಸನ ದೂರವಾಗುತ್ತದೆ ಎಂದು ಸಾರಿದರೆ, ಧನ ವ್ಯಸನದ ಮೋಹ ದೇಶವನ್ನೇ ನಾಶ ಮಾಡುತ್ತದೆ ಎನ್ನುವುದನ್ನೂ ಕೂಡ ಶರಣರು ಹೇಳಿದ್ದಾರೆ. ಸರ್ವ ವ್ಯಸನದಿಂದ ಮುಕ್ತಿಯೊಂದಿ, ಶಿವನನ್ನು ಸ್ಮರಿಸುವುದೆ ಜೀವನದ ಪರಮ ಧರ್ಮವಾಗಿದೆ ಎಂದರು.ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಒಂದು ದೇಶವನ್ನು ಹಾಳು ಮಾಡಬೇಕು ಎಂದುಕೊಂಡರೆ ಆ ದೇಶಕ್ಕೆ ಬಾಂಬ್, ಮದ್ದು-ಗುಂಡುಗಳನ್ನು ಹಾಕುವ ಅವಶ್ಯಕತೆ ಇಲ್ಲ. ಆ ದೇಶದ ಯುವಕರು ವ್ಯಸನಕ್ಕೆ ಬಲಿಯಾದರೆ ಆ ದೇಶ ತಂತಾನೆ ದಿವಾಳಿಯಾಗುತ್ತದೆ. ಇದಕ್ಕೆ ಎಷ್ಟೋ ಪಾಶ್ಚಿಮಾತ್ಯ ದೇಶಗಳು ಉದಾಹರಣೆಯಾಗಿ ನಮ್ಮ ಕಣ್ಣ ಮುಂದೆ ಇಂದಿಗೂ ಇವೆ. ನಮ್ಮ ದೇಶದ ಪಂಜಾಬ್ ರಾಜ್ಯದಲ್ಲಿ ಮನೆ, ಮನೆಗೂ ವ್ಯಸನಿಗಳು ಹುಟ್ಟುಕೊಂಡಿದ್ದಾರೆ. ಇದು ಇದೇ ಮಾದರಿಯಲ್ಲಿ ಮುಂದುವರಿದೆ ದೇಶದ ಕತೆ ಏನು ಎಂಬುದರ ಕುರಿತು ತುರ್ತಾಗಿ ಯೋಚಿಸಬೇಕಾಗಿದೆ. ವ್ಯಸನಕ್ಕೆ ದಾಸರಾದವರು ತಮ್ಮ ಕುಟುಂಬವನ್ನು ಕೂಡ ಒಮ್ಮೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶರಣ ಸಾಹಿತ್ಯ ತಾಲೂಕು ಪರಿಷತ್ತು ತನ್ನದೆಯಾದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತ ಬರುತ್ತಿದೆ. ಕಟ್ಟ ಕಡೆಯ ವ್ಯಕ್ತಿಗೂ ಕೂಡ ಶರಣರ ತತ್ವಗಳು ತಲುಪಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದೆ. ಇದುವರೆಗೆ ಸಾವಿರಾರು ಕಾರ್ಯಕ್ರಮಗಳನ್ನು ಪರಿಷತ್ತು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅದರಂತೆ ''''''''ವಚನಗಳಲ್ಲಿ ವ್ಯಸನಮುಕ್ತ ಜೀವನ'''''''' ವಿಷಯ ಕುರಿತು ಪುರ್ನವಸತಿ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಿ ವ್ಯಸನಿಗಳನ್ನು ಸರಿದಾರಿಗೆ ತರವು ಕೆಲಸ ಮಾಡುತ್ತಿದೆ ಎಂದರು. ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶರಣ ದೇವರಾಜು ಪಿ.ಚಿಕ್ಕಹಳ್ಳಿ ಮಾತನಾಡಿ, ತಾಲೂಕು ಶರಣ ಸಾಹಿತ್ ಪರಿಷತ್ತಿನ ಸೇವೆ ಎಲ್ಲ ವರ್ಗದ ಜನರಿಗೂ ಸಿಗಬೇಕು ಎಂದು ಮನಗಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದೆ. ವಚನ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ನಿಜವಾದ ಮಾರ್ಗ ಅಡಗಿದೆ. ಶಾಲಾ, ಕಾಲೇಜು, ವಸತಿ ನಿಲಯಗಳು ಹೀಗೆ ಹತ್ತು ಹಲವು ಸಂಘ, ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.ಸಾಹಿತಿ, ಮುಡಿಗುಂಡ ಎಸ್.ಪುಟ್ಟಪ್ಪ, ಗಾಯಕ ಚನ್ನಬಸಪ್ಪ, ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ವ್ಯವಸ್ಥಾಪಕ ಮಹೇಶ್, ಸಿಬ್ಬಂದಿ ಮಂಜುನಾಥ್, ಆನಂದ್, ಇತರರು ಇದ್ದರು.ಬಾಕ್ಸ್...