ಕನ್ನಡಪ್ರಭ ವಾರ್ತೆ ಕೋಲಾರ "ಕೇಂದ್ರ ಸರ್ಕಾರದ ಆತ್ಮ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ " ಎಂದು ಎಡಿಸಿ ಮಂಗಳಾ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆತ್ಮ ಯೋಜನೆ ಸಮಿತಿ ಸಭೆಯಲ್ಲಿ ಮಾತನಾಡಿ, ’ರೈತರಿಗೆ ನೂತನ ಕೃಷಿ ತಂತ್ರಜ್ಞಾನ ಕುರಿತು ಅರಿವು ಮೂಡಿಸಲು ಹಾಗೂ ಕೃಷಿ ಅಭಿವೃದ್ಧಿಗೆ ಪೂರಕವಾಗಿ ತರಬೇತಿ ಕಾರ್ಯಾಗಾರ ನಡೆಸಬೇಕು ಎಂದು ಹೇಳಿದರು. ರೈತರಿಗೆ ವಿವಿಧ ತರಬೇತಿ
’ಯೋಜನೆಗೆ ರೂ.೧.೪೮ ಕೋಟಿ ಅನುದಾನ ಮೀಸಲಿಟ್ಟಿದ್ದು, ಈ ಪೈಕಿ ಈವರೆಗೆ ರೂ.೦.೩೨ಕೋಟಿ ಬಿಡುಗಡೆಯಾಗಿದ್ದು, ರೂ.೨೮ಲಕ್ಷ ವೆಚ್ಚವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಎಂ. ಆರ್. ಸುಮ ಮಾಹಿತಿ ನೀಡಿದರು.ಕೃಷಿ ಅಭಿವೃದ್ಧಿಗೆ ಪೂರಕ
’ಯೋಜನೆಯಡಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸಲು ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸಿಬ್ಬಂದಿ ಇರುತ್ತಾರೆ. ಇವರು ನೇರವಾಗಿ ರೈತರನ್ನು ಸಂಪರ್ಕಿಸಿ ಚರ್ಚೆ ನಡೆಸುತ್ತಾರೆ. ಕೃಷಿ ಅಭಿವೃದ್ಧಿಗೆ ಪೂರಕವಾದ ತರಬೇತಿ, ಗುಂಪು ರಚನೆ, ಬೀಜ ಧನ ಹೀಗೆ ಅನೇಕ ಕಾರ್ಯಕ್ರಮ ನಡೆಸಲಾಗುವುದು. ಪ್ರತಿ ಗ್ರಾಮದಲ್ಲೂ ರೈತರ ಗುಂಪು ರಚಿಸಿ ಸೌರ್ಕಯ ಕಲ್ಪಿಸಲಾಗುವುದು’ ಎಂದರು. ಕೃಷಿ ಇಲಾಖೆ ಉಪ ನಿರ್ದೇಶಕರಾದ ಭವ್ಯರಾಣಿ, ರೇ? ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಪಶುಸಂಗೋಪನ ಉಪನಿರ್ದೇಶಕ ತುಲಸಿ ರಾಮಯ್ಯ ಇದ್ದರು.