ಆದಿಚುಂಚನಗಿರಿ ಜಾತ್ರೆ: ವಿವಿಧ ಸ್ಪರ್ಧೆ ವಿಜೇತರಿಗೆ ಶ್ರೀಗಳಿಂದ ಬಹುಮಾನ ವಿತರಣೆ

KannadaprabhaNewsNetwork |  
Published : Mar 21, 2024, 01:06 AM IST
20ಕೆಎಂಎನ್ ಡಿ17 | Kannada Prabha

ಸಾರಾಂಶ

ಲಗೋರಿ ಸ್ಪರ್ಧೆ ವಿಜೇತರಾದ ಬಿಜಿಎಸ್ ಬಿಪಿಎಡ್‌ ಎ ತಂಡ (ಪ್ರಥಮ), ಬಿಜಿಎಸ್ ಬಿಪಿಎಡ್‌ ಬಿ ತಂಡ (ದ್ವಿತೀಯ) ದಕ್ಷಿಣಕನ್ನಡ ಜಿಲ್ಲೆಯ ಕಲ್ಲಡ್ಕತಂಡ (ತೃತೀಯ) ಹಾಗೂ ಕೆ.ಆರ್.ಪೇಟೆ ತಂಡ(4ನೇ ಸ್ಥಾನ)ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ 10 ಸಾವಿರ, ತೃತೀಯ 7500 ರು ಹಾಗೂ ನಾಲ್ಕನೇ ಬಹುಮಾನ 5 ಸಾವಿರ ನಗದು ನೀಡಿ ಪ್ರೋತ್ಸಾಹಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಮ್ಯಾರಥಾನ್‌ ಓಟ, ಲಗೋರಿ ಮತ್ತು ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದ ಆಟೋಟಗಾರರಿಗೆ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಿ ಆಶೀರ್ವದಿಸಿದರು.

ಮ್ಯಾರಥಾನ್‌ ಓಟದಲ್ಲಿ ವಿಜೇತರು:

ಬೆಂಗಳೂರಿನ ಎ.ಆರ್.ರೋಹಿತ್ (ಪ್ರಥಮ), ಲಕ್ಷ್ಮೀಶ (ದ್ವಿತೀಯ) ಸುರೇಶ್‌ ಅಂಜನ್ (ತೃತೀಯ ) ನಂಜುಂಡಪ್ಪ (4ನೇ ಸ್ಥಾನ) ಚಾಮರಾಜನಗರ ಮಣಿಕಂಠ (5ನೇ ಸ್ಥಾನ) ಹಾಗೂ ಹಾಸನದ ಶ್ರೀಧರ್ (6ನೇ ಸ್ಥಾನ) ವಿಜೇತರಾದವರಿಗೆ ಪ್ರಥಮ 10ಸಾವಿರ ರು, ದ್ವಿತೀಯ 7 ಸಾವಿರ ರು., ತೃತೀಯ 5 ಸಾವಿರ ರು, ನಾಲ್ಕನೇ ಬಹುಮಾನ 4 ಸಾವಿರ, ಐದನೇ ಬಹುಮಾನ 3 ಸಾವಿರ, ಆರನೇ ಬಹುಮಾನ 2 ಸಾವಿರ ಹಾಗೂ ಉದಯೋನ್ಮುಖ ಕ್ರೀಡಾಪಟು ಎನಿಸಿಕೊಂಡ 8 ನೇ ತರಗತಿ ವಿದ್ಯಾರ್ಥಿ ನಕುಲ್‌ಗೌಡಗೆ 1 ಸಾವಿರ ನಗದು ನೀಡಿ ಗೌರವಿಸಲಾಯಿತು.

ಲಗೋರಿ ಸ್ಪರ್ಧೆ ವಿಜೇತ ತಂಡಗಳು:

ಬಿಜಿಎಸ್ ಬಿಪಿಎಡ್‌ ಎ ತಂಡ (ಪ್ರಥಮ), ಬಿಜಿಎಸ್ ಬಿಪಿಎಡ್‌ ಬಿ ತಂಡ (ದ್ವಿತೀಯ) ದಕ್ಷಿಣಕನ್ನಡ ಜಿಲ್ಲೆಯ ಕಲ್ಲಡ್ಕತಂಡ (ತೃತೀಯ) ಹಾಗೂ ಕೆ.ಆರ್.ಪೇಟೆ ತಂಡ(4ನೇ ಸ್ಥಾನ)ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ 10 ಸಾವಿರ, ತೃತೀಯ 7500 ರು ಹಾಗೂ ನಾಲ್ಕನೇ ಬಹುಮಾನ 5 ಸಾವಿರ ನಗದು ನೀಡಿ ಪ್ರೋತ್ಸಾಹಿಸಲಾಯಿತು.

ರಂಗೋಲಿ ಸ್ಪರ್ಧೆಯಲ್ಲಿ ತಾಲೂಕಿನ ಚುಂಚನಹಳ್ಳಿಯ ಸಿ.ರಂಜಿತ ಪ್ರಥಮ, ಬೆಂಗಳೂರಿನ ಭಾಗ್ಯ ಮೋಹನ್ ದ್ವಿತೀಯ, ಆದಿಚುಂಚನಗಿರಿ ಶಾಲೆ ಜಯಲಕ್ಷ್ಮಿ ತೃತೀಯ, ಭಾಗ್ಯಲಕ್ಷ್ಮಿ, ಎಲ್.ಉಮದೇವಿ ಮತ್ತು ಪುಷ್ಪ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶೇಖ್‌ತನ್ವೀರ್ ಆಸಿಫ್, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎನ್.ಪರಮಶಿವಯ್ಯ ಸೇರಿದಂತೆ ಹಲವರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ